Age limit for 1st class enrollment: ಶಿಕ್ಷಣ ಇಲಾಖೆಯಿಂದ ಹೊಸ ರೂಲ್ಸ್ : 1ನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿ

ಬೆಂಗಳೂರು: (Age limit for 1st class enrollment) ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ಸೇರಿಸಲು ಸರಕಾರ ವಯೋಮಿತಿ ನಿಗದಿ ಮಾಡಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ವಯೋಮಿತಿ ನಿಗದಿಗೊಳಿಸಿ ಸುತ್ತೋಲೆ ಹೊರಡಿಸಿದೆ. ಒಂದನೇ ತರಗತಿಗೆ ಮಕ್ಕಳು ದಾಖಲಾಗುವಾಗ ಮಕ್ಕಳಿಗೆ ಆರು ವರ್ಷ ತುಂಬಿರಲೇಬೇಕು. ಇದೀಗ ಆರ್‌ ಟಿ ಇ ಶಿಕ್ಷಣ ಕಾಯ್ದೆ ಕಡ್ಡಾಯ ಶಿಕ್ಷಣ ನಿಯಮ 2012 ರ ಅನ್ವಯ ವಯೋಮಿತಿ ನಿಗದಿ ಮಾಡಿ ಸರಕಾರ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿ ಮಾಡಲಾಗಿದ್ದು, ಜೂನ್‌ ಒಂದನೇ ತಾರೀಖಿಗೆ ಕಡ್ಡಾಯವಾಗಿ ಮಗುವಿಗೆ ಆರು ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ಈ ಹಿಂದೆ ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಐದು ವರ್ಷ ಹತ್ತು ತಿಂಗಳು ಆದರೆ ಸಾಕು ಎಂಬ ನಿಯಮವಿತ್ತು. ಇದೀಗ ಈ ನಿಯಮವನ್ನು ಪರಿಷ್ಕರಣೆ ಮಾಡಿ ಹೊಸ ವಯೋಮಿತಿ ನಿಗದಿ ಮಾಡಿ ಸುತ್ತೋಲೆ ಹೊರಡಿಸಲಾಗಿದೆ.

2012-13 ನೇ ಶೈಕ್ಷಣಿಕ ಸಾಲಿನಿಂದ ಆರ್‌. ಟಿ.ಇ ಕಾಯ್ದೆ 2009 ರ ಸೆಕ್ಷನ್‌ 12 (1) ಸಿ ಅಡಿಯಲ್ಲಿ ಅನುದಾನರಹಿತ ಹಾಗೂ ಅಲ್ಪಸಂಖ್ಯಾ ಸಂಸ್ಥೆಗಳ ವಿದ್ಯಾರ್ಥಿಗಳ ದಾಖಲಾತಿ ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಎಲ್.ಕೆ.ಜಿ ತರಗತಿಗೆ ಮೂರು ವರ್ಷ ಹತ್ತು ತಿಂಗಳಿನಿಂದ ನಾಲ್ಕು ವರ್ಷ ಹತ್ತು ತಿಂಗಳು ಹಾಗೂ ಒಂದನೇ ತರಗತಿಗೆ ಐದು ವರ್ಷ ಹತ್ತು ತಿಂಗಳಿನಿಂದ ಆರು ವರ್ಷ ಹತ್ತು ತಿಂಗಳು ವಯೋಮಿತಿಯನ್ನು ನಿಗದಿಪಡಿಸಿ ಸರಕಾರದ ಆದೇಶದಲ್ಲಿ ನೀಡಲಾಗಿತ್ತು.

2009 ರಲ್ಲಿ ಆರ್‌ ಟಿ ಇ ಕಾಯ್ದೆ ಮತ್ತು 2012 ರಲ್ಲಿ ಕಡ್ಡಾಯ ಶಿಕ್ಷಣ ನಿಯಮಗಳು ಜಾರಿಗೆ ಬಂದಿದ್ದು, ಇವುಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಅದರಡಿ ರಚಿತವಾದ ಎಲ್ಲಾ ನಿಯಮಗಳನ್ನು ನಿರಸನಗೊಳಿಸುತ್ತದೆ. ಆದ್ದರಿಂದ ಆರ್.ಟಿ.ಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತೆ ಪ್ರಾಥಮಿಕ ಶಾಲೆಗೆ ದಾಖಲಿಸಲು ಮಗುವಿನ ಕನಿಷ್ಠ ವಯಸ್ಸನ್ನು ನಿಗದಿಪಡಿಸುವುದು ಅಗತ್ಯವಾಗಿರುತ್ತದೆ.

ಇದನ್ನೂ ಓದಿ : Midday meals Chicken : ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಚಿಕನ್, ಮೊಟ್ಟೆ, ಹಣ್ಣು

ಈ ಹಿನ್ನಲೆಯಲ್ಲಿ ಹಿಂದೆ ಆದೇಶಿಸಿದ ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಐದು ವರ್ಷ ಹತ್ತು ತಿಂಗಳು ಆದರೆ ಸಾಕು ಎಂಬ ನಿಯಮವನ್ನು ಹಿಂಪಡೆದು ಆರ್.ಟಿ.ಇ. ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತೆ ಶೈಕ್ಷಣಿಕ ವರ್ಷದ ಜೂನ್‌ ಒಂದನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ.

Age limit for 1st class enrollment: New rules from education department: Age limit for 1st class enrollment

Comments are closed.