Kantara Free show: ಮನೆ ಮನೆ ಬಾಗಿಲಿಗೆ ಬಂತು ಕಾಂತಾರ: ಶಾಲೆ, ಗ್ರಾಮಗಳಲ್ಲಿ ನಡಿತಾ ಇದೆ ಉಚಿತ ಪ್ರದರ್ಶನ

(Kantara Free show) ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಒಂದು ದಂತಕಥೆ ಸಿನಿಮಂದಿರಗಳಲ್ಲಿ ದೊಡ್ಡಮಟ್ಟದಲ್ಲಿ ಹಿಟ್‌ ಆಗಿತ್ತು, ಕರಾವಳಿ ಸಂಸ್ಕೃತಿ, ದೈವ, ಕೋಲ ಇವುಗಳನ್ನು ಆಧರಿಸಿ ನಿರ್ಮಿಸಿದ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಪ್ರೇಕ್ಷಕರ ಗಮನ ಸೆಳೆದಿತ್ತು. ಇನ್ನೂ ಕೆಲವು ಸಿನಿಮಂದಿರಗಳಲ್ಲಿ ಈಗಲೂ ಕೂಡ ಚಿತ್ರ ಪ್ರದರ್ಶನ ಕಾಣುತ್ತಿದೆ. ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ಸಿನಿಮಂದಿರಗಳಲ್ಲಿ, ಒಟಿಟಿಯಲ್ಲಿ ಮಾತ್ರವಲ್ಲದೇ ಇದೀಗ ಗ್ರಾಮೀಣ ಪ್ರದೇಶದಲ್ಲಿ, ಶಾಲೆಗಳಲ್ಲಿಯೂ ಕೂಡ ಉಚಿತವಾಗಿ ಪ್ರದರ್ಶನ ಕಾಣುತ್ತಿದೆ.

ಕೇವಲ ಹದಿನೆಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ದೂಳೆಬ್ಬಿಸಿ ಬರೋಬ್ಬರಿ ನಾಲ್ಕು ನೂರು ಕೋಟಿಗೂ ಹೆಚ್ಚು ಗಳಿಕೆಗಳನ್ನು ಮಾಡಿ ಸೈ ಎನಿಸಿಕೊಂಡಿದೆ. ಅಲ್ಲದೇ ಈ ಸಿನಿಮಾವು ನಮ್ಮನ್ನು ನಮ್ಮ ಮೂಲಗಳಿಗೆ ಕರೆದೊಯ್ದು ನಮ್ಮ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ವಿಸ್ಮಯ ಪಡುವಂತೆ ಮಾಡಿತ್ತು. ಹಲವು ವಿವಾದಗಳಿಗೆ ಕಾಂತಾರ ಸಿನಿಮಾ ಗುರಿಯಾದರೂ ಕೂಡ ಎಲ್ಲವನ್ನು ಮೆಟ್ಟಿ ನಿಂತು ಜನರ ಮನದಲ್ಲಿ ಸಿನಿಮಾದ ಚಿತ್ರಣ ಅಚ್ಚಳಿಯದಂತೆ ಉಳಿದಿದೆ. ಅಲ್ಲದೇ ಥಿಯೇಟರ್‌ ಮತ್ತು ಒಟಿಟಿಯಲ್ಲೂ ಕೂಡ ಉತ್ತಮ ಪ್ರದರ್ಶನ ಕಂಡ ಕಾಂತಾರ ಸೂಪರ್‌ ಹಿಟ್‌ ಸಿನಿಮಾ ಇದೀಗ ಗ್ರಾಮದ ಮನೆ ಬಾಗಿಲಿಗೆ ಬಂದಿದೆ. ಗ್ರಾಮದ ಎಲ್ಲಾ ಶಾಲೆಗಳಲ್ಲಿ, ಮೈದಾನಗಳಲ್ಲಿ ಉಚಿತ ಪ್ರದರ್ಶನ(Kantara Free show)ವನ್ನು ನೀಡುತ್ತಿದೆ. ಕನ್ನಡದ ಯಾವುದೇ ಸಿನಿಮಾ ಈವರೆಗೂ ಈ ರೀತಿಯಾಗಿ ಪ್ರದರ್ಶನವನ್ನು ಕಂಡಿಲ್ಲ. ಸಿನಿಮಂದಿರಗಳಲ್ಲಿ, ಒಟಿಟಿಯಲ್ಲಿ ಅದ್ದೂರಿ ಪ್ರದರ್ಶನ ಕಂಡಿದ್ದ ಸಿನಿಮಾ ಇದೀಗ ಗ್ರಾಮದ ಮನೆ ಬಾಗಿಲಲ್ಲೂ ಕೂಡ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ.

ಕುಂದಾಪುರದ ಗ್ರಾಮೀಣ ಭಾಗದಲ್ಲಿ ಕಳೆದ ಹದಿನೈದು ದಿನಗಳಿಂದ ಉಚಿತ ಪ್ರದರ್ಶನ (Kantara Free show) ಕಾಣುತ್ತಿದ್ದು, ಈವರೆಗೆ ಯಾವುದೇ ಕನ್ನಡದ ಸಿನಿಮಾವಾಗಲಿ ಅಥವಾ ಇನ್ನಾವುದೇ ಬೇರೆ ಬಾಷೆಯ ಸಿನಿಮಾವಾಗಲಿ ಈ ರೀತಿಯಾಗಿ ಪ್ರದರ್ಶನ ಕಂಡಿರಲಿಲ್ಲ. ಇದೇ ಮೊದಲ ಬಾರಿಗೆ ಕನ್ನಡದ ಒಂದು ಅದ್ಭುತ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ, ಟಿವಿಯಲ್ಲಿ ಬರುವ ಮೊದಲು ಗ್ರಾಮದ ಮನೆ ಬಾಗಿಲಿಗೆ ಬಂದು ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ : Kannada Sahitya Sammelana : ಅಗಲಿ ವರ್ಷ ಸಂದರೂ ಬಡಜನರ ಪಾಲಿಗೆ ವರದಾನವಾದ ಅಪ್ಪು; ಹೇಗೆ ಗೊತ್ತಾ..?

ಸಿನಿಮಂದಿರಗಳಲ್ಲಿ ಸಿನಿಮಾವನ್ನು ನೋಡಿದ ಕೆಲವು ಸಂಘಟನೆಗಳು ಮತ್ತು ಶಾಲೆಗಳಲ್ಲಿನ ಹಳೇ ವಿದ್ಯಾರ್ಥಿಗಳ ಸಂಘದವರು ಸ್ವಯಂ ಪ್ರೇರಿತರಾಗಿ ಈ ಕಾರ್ಯದಲ್ಲಿ ತೊಡಗಿದ್ದು, ಯಾರಿಗೆ ಸಿನಿಮಾವನ್ನು ಸಿನಿಮಂದಿರಗಳಿಗೆ ಹೋಗಿ ನೋಡಲು ಸಾಧ್ಯವಾಗಿಲ್ಲವೋ ಅಂತವರು ತಮ್ಮ ಊರಿನಲ್ಲಿಯೇ ಉಚಿತವಾಗಿ ನೋಡುವಂತಾಗಲಿ ಎಂಬ ಉದ್ದೇಶದಿಂದ ಗ್ರಾಮಗಳಲ್ಲಿ ಹಾಗೇ ಶಾಲೆಗಳಲ್ಲಿ ಉಚಿತ ಪ್ರದರ್ಶನವನ್ನು ನೀಡಲಾಗುತ್ತಿದೆ. ಈಗಾಗಲೇ ಕುಂದಾಪುರದ ಅಮಾಸೆಬೈಲು, ಸಾಲಿಗ್ರಾಮ, ಹಾಲಾಡಿ, ಗಾವಳಿ, ಹಳ್ಳಾಡಿ, ಜನ್ನಾಡಿ ಹಾಗೇ ಇನ್ನೂ ಕೆಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದ್ದು, ಇನ್ನೂ ಕೂಡ ಹಲವು ಕಡೆಗಳಲ್ಲಿ ಉಚಿತ ಪ್ರದರ್ಶನ ಕಾಣಲಿದೆ.

Kannada’s proud movie Kantara is not only showing in cinemas, OTT but now also in rural areas and schools for free.

Comments are closed.