NEET UG: ನೀಟ್ ಯುಜಿ ಪರೀಕ್ಷೆ ನಾಳೆ; ಪ್ರಮುಖ ಸೂಚನೆಗಳು: ವರದಿ ಮಾಡುವ ಸಮಯ, ಇತರ ವಿವರಗಳನ್ನು ಇಲ್ಲಿ ಪರಿಶೀಲಿಸಿ

ನೀಟ್ ಯುಜಿ( NEET UG 2022) ಪರೀಕ್ಷೆ ನಾಳೆ, ಜುಲೈ 17, 2022 ರಂದು ನಡೆಯಲಿದೆ. ಎನ್ ಟಿಎ ನೀಟ್ 2022 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಪರೀಕ್ಷೆಯು ಪೆನ್ ಮತ್ತು ಪೇಪರ್ ಮೋಡ್‌ನಲ್ಲಿ ಮಧ್ಯಾಹ್ನ 2:00 PM ರಿಂದ ಸಂಜೆ 5: 20 ರವರೆಗೆ ನಡೆಯುತ್ತದೆ. ದೇಶದಾದ್ಯಂತ ಸುಮಾರು 497 ನಗರಗಳ ಮತ್ತು ಭಾರತದ ಹೊರಗಿನ 14 ನಗರಗಳ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 18 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ತಯಾರಾಗುತ್ತಿರುವ ಅಭ್ಯರ್ಥಿಗಳು ನೀಟ್ 2022 ಪ್ರವೇಶ ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು ( neet.nta.nic.in.)

ನೀಟ್ ಯುಜಿ 2022: ಅಭ್ಯರ್ಥಿಗಳಿಗೆ ಕೆಲವು ಪ್ರಮುಖ ಸೂಚನೆಗಳು ಇಲ್ಲಿವೆ

-ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಲಾದಂತೆ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಬೇಕು. ಗೇಟ್ ಮುಚ್ಚುವ ಸಮಯದ ನಂತರ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

-ಯಾವುದೇ ಅಭ್ಯರ್ಥಿಯು ಆತನ/ಆಕೆಯ ಪ್ರವೇಶ ಪತ್ರದಲ್ಲಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯವನ್ನು ಹೊರತು ಬೇರೆ ಸಮಯದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಲು ಅನುಮತಿಸುವುದಿಲ್ಲ.

-ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್ಪನೊಂದಿಗೆ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಕು..

-ಒಂದು ಪೋಸ್ಟ್ ಕಾರ್ಡ್ ಗಾತ್ರದ (4”X6”) ಬಿಳಿ ಬಣ್ಣದ ಬ್ಯಾಕ್ ಗ್ರೌಂಡ್ ಹೊಂದಿರುವ ಫೋಟೋ ಅಡ್ಮಿಟ್ ಕಾರ್ಡ್‌ನೊಂದಿಗೆ ಡೌನ್‌ಲೋಡ್ ಮಾಡಿದ ಪ್ರೊಫಾರ್ಮ್‌ನಲ್ಲಿ ಅಂಟಿಸಬೇಕು. ಪೋಸ್ಟ್ ಕಾರ್ಡ್ ಗಾತ್ರದ ಫೋಟೋದೊಂದಿಗೆ ಪ್ರೊಫಾರ್ಮಾವನ್ನು ಪರೀಕ್ಷಾ ಹಾಲ್‌ನಲ್ಲಿರುವ ಇನ್ವಿಜಿಲೇಟರ್‌ಗೆ ಹಸ್ತಾಂತರಿಸಬೇಕು.

-ನೀಟ್ ಯುಜಿ 2022 ರ ಮಾಹಿತಿ ಬುಲೆಟಿನ್ ಪ್ರಕಾರ, ಅಭ್ಯರ್ಥಿಗಳು ತಮ್ಮ OMR ಶೀಟ್‌ಗಳನ್ನು ಕರ್ತವ್ಯದಲ್ಲಿರುವ ಇನ್ವಿಜಿಲೇಟರ್‌ಗೆ ಹಸ್ತಾಂತರಿಸದೆ ಕೊಠಡಿ/ಹಾಲ್‌ನಿಂದ ಹೊರಬರಬಾರದು.

ನೀಟ್ ಯುಜಿ 2022: ಯಾವುದನ್ನು ಅನುಮತಿಸಲಾಗಿದೆ ಮತ್ತು ಯಾವುದು ಅಲ್ಲ ಎಂಬುದನ್ನು ಪರಿಶೀಲಿಸಿ:


-ಪರೀಕ್ಷಾ ಸ್ಥಳದೊಳಗೆ ಅನುಮತಿಸಲಾದ ವಸ್ತುಗಳು – ಪಾರದರ್ಶಕ ನೀರಿನ ಬಾಟಲಿ, ಅರ್ಜಿ ನಮೂನೆಯಲ್ಲಿ ಅಪ್‌ಲೋಡ್ ಮಾಡಿದ ಹೆಚ್ಚುವರಿ ಫೋಟೋ, ಹ್ಯಾಂಡ್ ಸ್ಯಾನಿಟೈಜರ್, ಅಡ್ಮಿಟ್ ಕಾರ್ಡ್‌
– ಪರೀಕ್ಷಾ ಸ್ಥಳದೊಳಗೆ ನಿರ್ಬಂಧಿಸಲಾದ ವಸ್ತುಗಳು – ಪಠ್ಯ ವಸ್ತು (ಮುದ್ರಿತ ಅಥವಾ ಬರೆಯಲಾದ), ಪೇಪರ್‌ಗಳ ಬಿಟ್‌ಗಳು, ಜಾಮಿಟ್ರಿ /ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಚೀಲ, ಕ್ಯಾಲ್ಕುಲೇಟರ್, ಪೆನ್, ಸ್ಕೇಲ್, ರೈಟಿಂಗ್ ಪ್ಯಾಡ್, ಪೆನ್ ಡ್ರೈವ್‌ಗಳು, ಎರೇಸರ್, ಲಾಗ್ ಟೇಬಲ್, ಎಲೆಕ್ಟ್ರಾನಿಕ್ ಪೆನ್/ಸ್ಕ್ಯಾನರ್, ಇತ್ಯಾದಿ.
ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್‌ಗಳು, ಮೈಕ್ರೊಫೋನ್, ಪೇಜರ್, ಹೆಲ್ತ್ ಬ್ಯಾಂಡ್, ಮುಂತಾದ ಯಾವುದೇ ಕಮ್ಮ್ಯುನಿಕೇಷನ್ ಡಿವೈಸ್ .
ವಾಲೆಟ್, ಗಾಗಲ್ಸ್, ಹ್ಯಾಂಡ್‌ಬ್ಯಾಗ್‌ಗಳು, ಬೆಲ್ಟ್, ಕ್ಯಾಪ್, ಇತ್ಯಾದಿ. ಯಾವುದೇ ವಾಚ್/ಕೈಗಡಿಯಾರ, ಬ್ರೇಸ್‌ಲೆಟ್, ಕ್ಯಾಮೆರಾ, ಇತ್ಯಾದಿ.
ಯಾವುದೇ ಆಭರಣಗಳು/ಲೋಹದ ವಸ್ತುಗಳು. ಯಾವುದೇ ಆಹಾರ ಪದಾರ್ಥ( ಪ್ಯಾಕ್ ಮಾಡಿದ/ ತಯಾರಿಸಿದ )

ಕೋವಿಡ್ -19 ಸಂಬಂಧಿತ ಮಾರ್ಗಸೂಚಿಗಳು:


ಪರೀಕ್ಷೆಯ ಸಮಯದಲ್ಲಿ ಕೋವಿಡ್ 19 ಮಾರ್ಗಸೂಚಿಗಳನ್ನು ಅನುಸರಿಸಬೇಕು.
-ಕೇಂದ್ರದಲ್ಲಿ N-95 ಮಾಸ್ಕ್‌ಗಳ ಬಳಕೆಯನ್ನು ಒದಗಿಸಲಾಗುತ್ತಿದೆ.
-ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಬಳಸಿ.
-ಪರೀಕ್ಷೆಯ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ.

ಡ್ರೆಸ್ ಕೋಡ್

ಚಪ್ಪಲಿಗಳು, ಲೋ ಹೀಲ್ಸ್ ಸ್ಯಾಂಡಲ್ಗಳನ್ನು ಅನುಮತಿಸಲಾಗಿದೆ.

ಶೂಗಳನ್ನು ಅನುಮತಿಸಲಾಗುವುದಿಲ್ಲ.

ಉದ್ದನೆಯ ತೋಳುಗಳನ್ನು ಹೊಂದಿರುವ ಹಗುರವಾದ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ. 4. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸಾಂಸ್ಕೃತಿಕ / ಸಾಂಪ್ರದಾಯಿಕ ಉಡುಗೆಯಲ್ಲಿ ಬಂದರೆ, ಅವರು ಕೊನೆಯ ವರದಿ ಮಾಡುವ ಸಮಯಕ್ಕಿಂತ ಕನಿಷ್ಠ ಒಂದು ಗಂಟೆ ಮೊದಲು ಅಂದರೆ ಮಧ್ಯಾಹ್ನ 12.30 ಕ್ಕೆ ವರದಿ ಮಾಡಬೇಕು.

ಇದನ್ನೂ ಓದಿ:NEET MDS:ನೀಟ್ ಎಂಡಿಎಸ್ ಮೆರಿಟ್ ಲಿಸ್ಟ್ ಬಿಡುಗಡೆ; ಮಾರ್ಕ್ ಕಾರ್ಡ್ ಜುಲೈ 27ಕ್ಕೆ

( NEET UG)

Comments are closed.