How To Improve Eyesight:ಕಣ್ಣಿನ ದೃಷ್ಟಿ ಹೆಚ್ಚಿಸಿಕೊಳ್ಳಬೇಕೆ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ……

(How To Improve Eyesight)ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕೆಲವು ವ್ಯಾಯಾಮವನ್ನು ಮಾಡುವ ಹವ್ಯಾಸ ರೂಡಿಸಿಕೊಂಡರೆ ಉತ್ತಮ . ಕತ್ತಲೆ ಕೊಣೆಯಲ್ಲಿ ದೀಪದ ಬೆಳಕನ್ನು ಮಿಟುಕಿಸದೆ ನೋಡಬೇಕು. ಒಂದು ಪಾತ್ರೆಯಲ್ಲಿ ತಣ್ಣಿರು ಹಾಕಿಕೊಂಡು ಆ ನೀರಲ್ಲಿ ಮುಖವನ್ನು ಅದ್ದಿ ಕಣ್ಣು ಮುಚ್ಚದೆ ಆದಷ್ಟು ಸಮಯ ಹಾಗೆ ಇರಬೇಕು. ಕಣ್ಣು ಉರಿ ಬಂದರೆ ಒಂದು ನಿಮಿಷ ಹಸಿರು ಮರ ಅಥವಾ ಹಸಿರು ಇರುವ ವಸ್ತುವನ್ನು ವೀಕ್ಷಣೆ ಮಾಡಿದರೆ ಕಣ್ಣು ಉರಿ ಕಡಿಮೆ ಆಗುತ್ತದೆ. ಇನ್ನು ಕಣ್ಣಿನ ದೃಷ್ಟಿ ಹೆಚ್ಚಿಸಿಕೊಳ್ಳುವುದಕ್ಕೆ ಕೆಲವು ಪದಾರ್ಥವನ್ನು ಸೇವನೆ ಮಾಡಿ . ಯಾವೆಲ್ಲಾ ಪದಾರ್ಥವನ್ನು ತಿನ್ನಬೇಕು ಎಂಬ ಮಾಹಿತಿಯ ಕುರಿತು ಈ ಕೆಳಗೆ ನೀಡಲಾಗಿದೆ.

(How To Improve Eyesight)ಸೊಂಪು, ಬಾದಾಮಿ , ಕಾಳು ಮೆಣಸು , ಕಲ್ಲುಸಕ್ಕರೆ ಪುಡಿಯ ಮಿಶ್ರಣ


ಬೇಕಾಗುವ ಸಾಮಾಗ್ರಿಗಳು:

  • ಸೊಂಪು
  • ಬಾದಾಮಿ
  • ಕಾಳು ಮೆಣಸು
  • ಕಲ್ಲು ಸಕ್ಕರೆ

ಮಾಡುವ ವಿಧಾನ
ಮಿಕ್ಸಿ ಜಾರಿಯಲ್ಲಿ ಮೂರು ಚಮಚ ಸೊಂಪು, ಒಂದು ಚಮಚ ಕಾಳು ಮೆಣಸು ಹಾಕಿ ಪುಡಿಮಾಡಬೇಕು. ನಂತರ ಮೂರು ಚಮಚ ಬಾದಾಮಿ , ಕಲ್ಲು ಸಕ್ಕರೆ ಹಾಕಿ ಪುಡಿಮಾಡಿಕೊಳ್ಳಬೇಕು. ಪುಡಿಮಾಡಿಕೊಂಡ ಪದಾರ್ಥವನ್ನು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಬೆರೆಸಿ ಪ್ರತಿದಿನ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

ಇದನ್ನೂ ಓದಿ:Weight Gain Tips : ನೀವು ತುಂಬಾ ತೆಳ್ಳಗಿದ್ದೀರಾ; ಹಾಗಾದರೆ ಈ ಸೂಪರ್‌ ಫುಡ್‌ಗಳನ್ನು ತಿನ್ನಿ

ಇದನ್ನೂ ಓದಿ:Kidney Stone Health Tips:ಕಿಡ್ನಿ ಸ್ಟೋನ್ ಪರಿಹಾರಕ್ಕೆ ಬಾಳೆ ದಿಂಡಿನ ಜ್ಯೂಸ್

ಇದನ್ನೂ ಓದಿ:Banana Stem Recipe:ದೇಹದ ಹಲವು ಸಮಸ್ಯೆ ನಿವಾರಣೆ ಮಾಡುವ ಬಾಳೆ ದಿಂಡಿನ ದೋಸೆ

ಮೆಣಸಿನ ಕಾಳು , ಕಲ್ಲುಸಕ್ಕರೆ, ತುಪ್ಪದ ಮಿಶ್ರಣ

ಬೇಕಾಗುವ ಸಾಮಾಗ್ರಿಗಳು:

  • ಮೆಣಸಿನ ಕಾಳು
  • ಕಲ್ಲು ಸಕ್ಕರೆ
  • ತುಪ್ಪ

ಮಾಡುವ ವಿಧಾನ:
ಮಿಕ್ಸಿ ಜಾರಿಯಲ್ಲಿ ಎರಡು ಚಮಚ ಕಾಳು ಮೆಣಸು ಪುಡಿ ಮಾಡಿಕೊಂಡು ಬೌಲ್‌ ಗೆ ಹಾಕಿ. ಅದೆ ಮಿಕ್ಸಿ ಜಾರಿಯಲ್ಲಿ ಕಲ್ಲು ಸಕ್ಕರೆ ಹಾಕಿ ಪುಡಿಮಾಡಿಕೊಳ್ಳಬೇಕು. ನಂತರ ಬೌಲ್ ನಲ್ಲಿ ಒಂದು ಚಮಚ ಕಾಳು ಮೆಣಸು ಪುಡಿ, ಎರಡು ಚಮಚ ಕಲ್ಲು ಸಕ್ಕರೆ ಪುಡಿ, ನೋಡಿಕೊಂಡು ತುಪ್ಪ ಹಾಕಿ ಮಿಶ್ರಣ ಮಾಡಿ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು.( ಒಂದು ವಾರಕ್ಕೆ ಆಗುವಷ್ಟು ಮಾಡಿಟ್ಟುಕೊಳ್ಳಬೇಕು) ಇದನ್ನು ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ತಿಂದು ನೀರು ಕುಡಿಬೇಕು. ದೊಡ್ಡವರಿಗೆ ಅರ್ಧ ಚಮಚದಷ್ಟು ಈ ಮಿಶ್ರಣವನ್ನು ಕೊಡಬೇಕು ,ಚಿಕ್ಕವರಾದರೆ ಕಾಲು ಚಮಚದಷ್ಟು ಈ ಮಿಶ್ರಣವನ್ನು ತಿನ್ನಲು ಕೊಡಬೇಕು.

How To Improve Eyesight Need to improve eyesight? So consume these ingredients.

Comments are closed.