Ghebreyesus On 3-day Visit To Gujarat : ಮೂರು ದಿನಗಳ ಗುಜರಾತ್​ ಪ್ರವಾಸದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

Ghebreyesus On 3-day Visit To Gujarat : ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟಡ್ರೋಸ್​ ಗೆಬ್ರೆಯೆಸಸ್​​ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಇಂದು ಭಾರತಕ್ಕೆ ಭೇಟಿ ನೀಡಲಿರುವ ಟಡ್ರೋಸ್​​ ಗೆಬ್ರೆಯೆಸಸ್​​​ ಪ್ರಧಾನಿ ನರೇಂದ್ರ ಮೋದಿಯ ಜೊತೆಯಲ್ಲಿ ಗುಜರಾತ್​ನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಭಾರತ ಪ್ರವಾಸದ ಮೂರೂ ದಿನಗಳು ಅವರು ಗುಜರಾತ್​ನಲ್ಲಿಯೇ ಇರಲಿದ್ದಾರೆ.


ಇಂದು ರಾಜ್​ಕೋಟ್​​ಗೆ ಆಗಮಿಸರಲಿರುವ ಗೆಬ್ರೆಯೆಸಸ್​​ ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಗೆಬ್ರೆಯೆಸಿಸ್​​ ವಿಶ್ವ ಆರೋಗ್ಯ ಸಂಸ್ಥೆಯ ಪಾರಂಪರಿಕ ಔಷಧ ಪದ್ಧತಿ ಜಾಗತಿಕ ಕೇಂದ್ರಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಇದು ವಿಶ್ವದಲ್ಲೇ ಮೊದಲ ಪಾರಂಪರಿಕ ಔಷಧ ಜಾಗತಿಕ ಕೇಂದ್ರವಾಗಿದೆ . ಈ ಬಗ್ಗೆ ರಾಜ್​ಕೋಟ್​​ನ ಜಿಲ್ಲಾಧಿಕಾರಿ ಅರುಣ್​ ಮಹೇಶ್​ ಬಾಬು ಮಾಹಿತಿ ನೀಡಿದರು.
ಟಡ್ರೋಸ್​ ಗೆಬ್ರೆಯಸಿಸ್​ ಮಾತ್ರವಲ್ಲದೇ ಇಂದು ಮಾರಿಷಸ್​ ಪ್ರಧಾನಿ ಪ್ರವೀಂದ್​​ ಕುಮಾರ್​ ಜಗನ್ನಾಥ ಕೂಡ ರಾಜ್​ಕೋಟ್​​ಗೆ ಭೇಟಿ ನೀಡಲಿದ್ದಾರೆ.


ಬುಧವಾರದಂದು ಗಾಂಧಿ ನಗರಕ್ಕೆ ಭೇಟಿ ನೀಡಲಿರುವ ಟಡ್ರೋಸ್​ ಗೆಬ್ರೆಯೆಸಸ್​​​ ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಅಲ್ಲಿ ಜಾಗತಿಕ ಆಯುಷ್​ ಹೂಡಿಕೆ ಹಾಗೂ ನಾವೀನ್ಯ ಶೃಂಗಸಭೆಗೆ ಚಾಲನೆ ನೀಡುವವರಿದ್ದಾರೆ. ಮೂರು ದಿನಗಳ ಶೃಂಗಸಭೆಯು ಮಹಾತ್ಮ ಮಂದಿರದಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲಿ 100 ಮಂದಿ ಪ್ರದರ್ಶಕರು ಹಾಗೂ 90 ಮಂದಿ ಭಾಷಣಕಾರರು ಭಾಗಿಯಾಗಲಿದ್ದಾರೆ.


ಗುಜರಾತ್​​ನಲ್ಲಿ ಪ್ರಧಾನಿ ಮೋದಿಯು 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬನಸಕಾಂಠಾ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಡೈರಿ ಕಾಂಪ್ಲೆಕ್ಸ್​ ಹಾಗೂ ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ. ದಾಹೋದ್​​ನಲ್ಲಿ 22 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.


1700 ಗ್ರಾಮಗಳ 5 ಲಕ್ಷ ರೈತರಿಗೆ ನೆರವಾಗುವಂತಹ ಬನಾಸ್​ ಸಮುದಾಯ ರೇಡಿಯೋ ಸ್ಟೇಷನ್​ ಲೋಕಾರ್ಪಣೆಗೊಳಿಸಲಿದ್ದಾರೆ. ಇದು ರೈತರಿಗೆ ಕೃಷಿ ಹಾಗೂ ಪಶು ಸಂಗೋಪನೆ ವಿಚಾರದಲ್ಲಿ ವೈಜ್ಞಾನಿಕ ಮಾಹಿತಿಗಳನ್ನು ನೀಡಲಿದೆ.

ಇದನ್ನು ಓದಿ : ಬಸ್ ಗಳಿಗೆ ಬೆಂಕಿ ಕಾಟ : MIDI BUSಗಳ ಓಡಾಟವನ್ನೇ ನಿಲ್ಲಿಸಿದ ಬಿಎಂಟಿಸಿ

ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

WHO Chief Tedros Ghebreyesus On 3-day Visit To Gujarat From Today; Will Meet PM Modi

Comments are closed.