Dresscode : ಚೂಡಿದಾರ್‌ ಧರಿಸಿ ಶಾಲೆಗೆ ಬರುವಂತಿಲ್ಲ ..! ಡ್ರೆಸ್‌ ಕೋಡ್‌ಗೆ ಶಿಕ್ಷಕಿಯರಿಂದ ಭಾರೀ ಆಕ್ರೋಶ

ಬೆಂಗಳೂರು : ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕಿಯರು ಚೂಡಿದಾರ್‌ ಧರಿಸಿ ಶಾಲೆಗೆ ಹಾಜರಾಗಬಾರದು. ಕೇವಲ ಸೀರೆಯುಟ್ಟು ಶಾಲೆಗೆ ಹಾಜರಾಗಬೇಕೆಂಬ ಕೂಗು ಶಿಕ್ಷಕ ವಲಯದಲ್ಲಿ ಕೇಳಿಬಂದಿದ್ದು, ಮಹಿಳಾ ಶಿಕ್ಷಕಿಯರು ವಸ್ತ್ರ ಸಂಹಿತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಗಳಿಗೆ ಹಾಜರಾಗುವ ಕೆಲವು ಶಿಕ್ಷಕಿಯರು ಚೂಡಿದಾರ್‌ ಧರಿಸುತ್ತಿದ್ದಾರೆ. ಚೂಡಿದಾರ್‌ ಧರಿಸುವುದ ರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು. ಶಿಕ್ಷಕರಿಯರು ಕಡ್ಡಾಯವಾಗಿ ಸೀರೆ ಯುಟ್ಟು ಶಾಲೆಗೆ ಹಾಜರಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ಇದನ್ನೂ ಓದಿ : Childhood Mental Health : ಮಕ್ಕಳ ಮಾನಸಿಕ ಆರೋಗ್ಯ ನಿರ್ಲಕ್ಷಿಸಬಾರದು

ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸುತ್ತಿದ್ದಂತೆಯೇ ಶಿಕ್ಷಕ ವಲಯದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸರಕಾರಿ ಕಚೇರಿಗಳಲ್ಲಿ ಉದ್ಯೋಗಿಗಳು ಸೀರೆ ಬದಲು ಇತರ ಡ್ರೆಸ್‌ ತೊಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅಲ್ಲದೇ ಖಾಸಗಿ ಶಾಲೆಗಳಲ್ಲಿ ಒಂದೊಂದು ರೀತಿಯ ಡ್ರೆಸ್‌ ಕೋಡ್‌ ಇದೆ. ಹೀಗಾಗಿ ಶಿಕ್ಷಕರಿಗೆ ಸೀರೆ ಕಡ್ಡಾಯವೇಕೆ ಅಂತಾ ಶಿಕ್ಷಕಿಯರು ವಾದಿಸುತ್ತಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಚಿಕ್ಕಮಗಳೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡಿದ್ದ ಮನವಿಯನ್ನು ತಿರಸ್ಕರಿಸಿದ್ದಾರೆ. ಸರಕಾರದ ಮಟ್ಟದಲ್ಲಿ ಇಂತಹ ನಿಯಮವಿಲ್ಲ, ಸಭ್ಯ ಉಡುಪು ಧರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸರಕಾರದಿಂದಲೇ ತಿಳಿಸಲಾಗಿದೆ ಹೀಗಾಗಿ ಅಂತಹ ಸೂಚನೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸೀರೆ ಬಿಟ್ಟರೆ ಬಹುತೇಕ ಮಹಿಳೆಯರು ಚೂಡಿದಾರ್‌ ಧರಿಸುತ್ತಾರೆ. ಅಲ್ಲದೇ ಅದೊಂದು ಸಭ್ಯ ಉಡುಪು ಎಂದು ಪರಿಗಣೆಯಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಸಂಘ ಮನವಿ ಮಾಡಿರುವುದು ಸರಿಯಲ್ಲ. ಇದು ಪುರಷ ಪ್ರಧಾನ ವ್ಯವಸ್ಥೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ.

Comments are closed.