ಜಾತಿ ಗಣತಿ ಸಮೀಕ್ಷೆ ಮೇಲ್ವಿಚಾರಕರಿಗೆ ಸಿಹಿಸುದ್ದಿ : ರಾಜ್ಯ ಸರಕಾರದಿಂದ ಹೊಸ ಆದೇಶ

Caste Census Good News : ಬೆಂಗಳೂರು : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ದೊರಕಿದೆ.
ಜಾತಿಸಮೀಕ್ಷೆಯನ್ನು ಕೈಗೊಂಡಿರುವ ಸಿಬ್ಬಂದಿಗಳಿಗೆ ಗೌರವ ಧನ ಬಿಡುಗಡೆ ಮಾಡಿರುವ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಗೌರವ ಧನವನ್ನು ಶೀಘ್ರದಲ್ಲಿಯೇ ಸಮೀಕ್ಷೆದಾರರ ಖಾತೆಗಳಿಗೆ ಜಮೆ ಮಾಡುವಂತೆ ಸೂಚನೆ ನೀಡಿದೆ.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಈ ಸಮೀಕ್ಷೆಯನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿತ್ತು. ಅಕ್ಟೋಬರ್ ತಿಂಗಳ ದಸರಾ ರಜೆಯ ಸಂದರ್ಭದಲ್ಲಿ ಈ ಸಮೀಕ್ಷೆ ನಡೆದಿದ್ದು, ಗೌರವ ಧನ ಪಾವತಿ ಆಗಿರಲಿಲ್ಲ.

ಇದೀಗ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ ಮೇಲ್ವಿಚಾರಕರಿಗೆ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಈ ಆದೇಶದ ಅನ್ವಯ ಸಮೀಕ್ಷಾದಾರರಿಗೆ ಪ್ರತಿ ಮನೆಯ ಸಮೀಕ್ಷೆಗೆ 100 ರೂಪಾಯಿ ಹಾಗೂ 5000 ರೂಪಾಯಿಗಳನ್ನು ನೀಡಬೇಕಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ
ಇದರ ಜೊತೆಯಲ್ಲಿ ಮೇಲ್ವಿಚಾರಕರಿಗೆ 10 ಸಾವಿರ ರೂಪಾಯಿಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಹಣವನ್ನು ಪಾವತಿ ಮಾಡಲು ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳನ್ನು ಸೇರಿಸಿ ಒಟ್ಟೂ 127,73,45,000 ಕೋಟಿ ರೂಪಾಯಿಗಳನ್ನು ಸರಕಾರ ಬಿಡುಗಡೆ ಮಾಡಿದೆ.
ಸಿದ್ದರಾಮಯ್ಯ ಸರಕಾರ ಕರ್ನಾಟಕದಲ್ಲಿರುವ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ಆಲಿಸುವ ಸಲುವಾಗಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಈಗಾಗಲೇ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಸರಕಾರ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಇನ್ನಷ್ಟೇ ಸರಕಾರಕ್ಕೆ ಸಲ್ಲಿಕೆ ಮಾಡಬೇಕಾಗಿದೆ.
ಇದನ್ನೂ ಓದಿ : ಯುಜಿಸಿ, ಎನ್ಎಸ್ಪಿ ಸ್ಕಾಲರ್ಶಿಪ್ಗೆ ಇಂದೇ ಅರ್ಜಿ ಸಲ್ಲಿಸಿ
Caste Census Good News for teacher Karnataka State Govt Issues New Order



