CBSE Class 10 boards 2022 : ಸಿಬಿಎಸ್​ಇ 10ನೇ ತರಗತಿ ವಿದ್ಯಾರ್ಥಿಗಳ ಕೊನೆ ಕ್ಷಣದ ಪರೀಕ್ಷಾ ತಯಾರಿ ಹೀಗಿರಲಿ

CBSE Class 10 boards 2022 : ಸೆಂಟ್ರಲ್​ ಬೋರ್ಡ್​ ಆಫ್​ ಸೆಕೆಂಡರಿ ಎಜ್ಯೂಕೇಷನ್​​ 10ನೇ ತರಗತಿ ವಿದ್ಯಾರ್ಥಿಗಳ ಟರ್ಮ್ 2 ಪರೀಕ್ಷೆಗಳನ್ನು ಇದೇ ಬರುವ 26ನೇ ತಾರೀಖಿನಿಂದ ಆರಂಭಿಸಲಿದೆ. ಹೀಗಾಗಿ ಪರೀಕ್ಷೆಗೆ ಇನ್ನು ಒಂದು ವಾರ ಕೂಡ ಬಾಕಿ ಉಳಿದಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ತಯಾರಿ ಕುರಿತಂತೆ ಮತ್ತಷ್ಟು ಆತಂಕ ಹೆಚ್ಚಾಗುವ ಸಾಧ್ಯತೆ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ.


ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಕಂಡ ಲಾಕ್​ಡೌನ್​​ಗಳು, ಕ್ವಾರಂಟೈನ್​, ಐಸೋಲೇಷನ್​, ಅನಾರೋಗ್ಯ ಸಮಸ್ಯೆ ಹೀಗೆ ಸಾಕಷ್ಟು ಅಡೆತಡೆಗಳ ಬಳಿಕ ಇದೀಗ ವಿದ್ಯಾರ್ಥಿಗಳು ಟರ್ಮ್ 2 ಪರೀಕ್ಷೆಗಳಿಗೆ ಅಣಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಬೋರ್ಡ್​ ಪರೀಕ್ಷೆಗಳನ್ನು ಚೆನ್ನಾಗಿ ಮಾಡಬೇಕೆಂದರೆ ಪರೀಕ್ಷೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ನೀವು ಯಾವ ರೀತಿ ಪರೀಕ್ಷೆಗೆ ಓದಿಕೊಳ್ಳುತ್ತೀರಿ ಎಂಬುದು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.


ಹೌದು..! ಇದೊಂದು ನಿರ್ಣಾಯಕ ಸಮಯವಾಗಿದ್ದು ವಿದ್ಯಾರ್ಥಿಗಳು ಈ ಸಮಯದ ಲಾಭವನ್ನು ಚೆನ್ನಾಗಿ ತೆಗೆದುಕೊಳ್ಳಬೇಕು. ಪರೀಕ್ಷೆಗಳಲ್ಲಿ ಬರುವ ಪ್ರಶ್ನೆಗಳಿಗೆ ನಾವು ರೀತಿಯಲ್ಲಿ ಸೂಕ್ತವಾದ ಉತ್ತರಗಳನ್ನು ಬರೆಯಬಹುದು ಎಂಬುದರ ಬಗ್ಗೆ ಯೋಚನೆ ಮಾಡಿ. ಕೆಲವೊಂದು ಬಾರಿ ನೀವು ಮುಖ್ಯವಾದ ವಿಷಯಗಳನ್ನೇ ಪರೀಕ್ಷೆಯ ಹಿಂದಿನ ದಿನ ಓದಲು ಮರೆತು ಬಿಡಬಹುದು. ಹೀಗಾಗಿ ಬಹುಮುಖ್ಯ ಎನಿಸುವ ವಿಷಯಗಳನ್ನು ನೋಟ್​ ಬುಕ್​ನಲ್ಲಿ ಹೈ ಲೈಟ್​ ಮಾಡಿಕೊಳ್ಳಿ.ಇದರಿಂದ ನಿಮಗೆ ಪರೀಕ್ಷೆಯ ಹಿಂದಿನ ದಿನ ತಡಕಾಡುವ ಸಂದರ್ಭ ಬರೋದಿಲ್ಲ. ಸಮಯವನ್ನು ವ್ಯರ್ಥ ಮಾಡದೇ ಕೇಳಲಾಗುವ ಪ್ರಶ್ನೆಗೆ ಕೊಟ್ಟ ಅವಧಿಯಲ್ಲಿ ಹೇಗೆ ಉತ್ತರಿಸಬಹುದು ಎಂಬುದನ್ನು ಮನೆಯಲ್ಲಿಯೇ ಪ್ರ್ಯಾಕ್ಟೀಸ್​ ಮಾಡಿ.


ಪ್ರಶ್ನೆಯು ಎಷ್ಟು ಅಂಕದ್ದು ಪರಿಶೀಲಿಸಿ ಬಳಿಕ ಇದಕ್ಕೆ ಯಾವ ರೀತಿಯಲ್ಲಿ ಉತ್ತರ ಬರೆಯಬೇಕು ಎಂಬುದನ್ನು ನಿರ್ಧರಿಸಿ. ಈ ರೀತಿ ಮಾಡಿದರೆ ಮಾತ್ರ ನೀವು ಪರೀಕ್ಷೆಯಲ್ಲಿ ಸಮಯವನ್ನು ಉಳಿಸಬಹುದಾಗಿದೆ. ಕಡಿಮೆ ಅಂಕಗಳಿರುವ ಪ್ರಶ್ನೆಗಳಿಗೆ 1 ರಿಂದ 2 ವಾಖ್ಯಗಳ ಉತ್ತರ ಸಾಲುತ್ತದೆ. ಕಡಿಮೆ ಅಂಕದ ಪ್ರಶ್ನೆಗಳಿಗೆ ಅತಿಯಾದ ವಿವರಣೆ ನೀಡುತ್ತಾ ಕೂರಬೇಡಿ. ಕೆಲವೊಮ್ಮೆ ಸಣ್ಣ ಉತ್ತರಗಳು ಮೌಲ್ಯಮಾಪಕರನ್ನು ಹೆಚ್ಚು ಆಕರ್ಷಿಸುತ್ತೆ. ಹೆಚ್ಚಿನ ಅಂಕದ ಪ್ರಶ್ನೆಗಳಿಗೆ ಸೂಕ್ತ ವಿವರಣೆ ನೀಡಿ ಉತ್ತರ ಬರೆಯಿರಿ.


ಈ ಸಮಯದಲ್ಲಿ ನೀವು ಈವರೆಗೆ ಓದಿದ ವಿಷಯಗಳು ಎಷ್ಟು ನಿಮ್ಮ ನೆನಪಿನಲ್ಲಿ ಉಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲೇಬೇಕು. ಅನೇಕ ವಿದ್ಯಾರ್ಥಿಗಳಿಗೆ ರಿವಿಷನ್​ ಎಂಬುದು ಮುಖ್ಯವಲ್ಲ ಎಂಬ ಭಾವನೆಯಿದೆ. ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳು ತಾವು ಓದಿರುವುದನ್ನು ಮೆಲುಕು ಹಾಕುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ನೀವು ಈವರೆಗೆ ಓದಿದ ಎಲ್ಲಾ ವಿಷಯಗಳನ್ನು ಒಮ್ಮೆ ಮೆಲುಕು ಹಾಕಿಕೊಳ್ಳಿ. ಇದರಿಂದ ನಿಮಗೂ ಆತ್ಮ ವಿಶ್ವಾಸ ಹೆಚ್ಚುತ್ತದೆ.


ನಿಮ್ಮ ಬರವಣಿಗೆ ಶುದ್ಧವಾಗಿರಲಿ. ನಿಮ್ಮ ಉತ್ತರ ಪತ್ರಿಕೆ ಪರಿಶೀಲನೆ ಮಾಡುವವರಿಗೆ ನಿಮ್ಮಂತೆ ಸಾಕಷ್ಟು ಮಂದಿಯ ಪೇಪರ್​ಗಳನ್ನು ನೋಡಬೇಕಾದ್ದರಿಂದ ಅವರಿಗೂ ತಾಳ್ಮೆ ಉಳಿದಿರುವುದಿಲ್ಲ. ಹೀಗಾಗಿ ನಿಮ್ಮ ಬರವಣಿಗೆಯು ಹೆಚ್ಚು ಸ್ಪುಟವಾಗಿರಲಿ.

ಇದನ್ನು ಓದಿ : ಪೋಷಕರಿಗೆ ಕಾದಿದೆ RTE ಸಂಕಷ್ಟ: ಸರಕಾರ ಬಾಕಿ ಕೊಡದಿದ್ರೆ ನೋ ಅಡ್ಮಿಷನ್‌ ಎಂದ ಖಾಸಗಿ ಶಿಕ್ಷಣ ಸಂಸ್ಥೆಗಳು

ಇದನ್ನೂ ಓದಿ : APJEE 2022 : ಎಪಿಜೆಇಇ ಪರೀಕ್ಷೆಗಳಿಗೆ ಆನ್​ಲೈನ್​ ಅರ್ಜಿ ಸಲ್ಲಿಕೆ ಆರಂಭ

CBSE Class 10 boards 2022: Follow these last minute revision tips to score high marks

Comments are closed.