textbook delay : 2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ – ಪುಸ್ತಕಗಳಲ್ಲಿ ವಿಳಂಬ ಸಾಧ್ಯತೆ

ಬೆಂಗಳೂರು : textbook delay : ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆಯಲ್ಲಿರುವ ವಿದ್ಯಾರ್ಥಿಗಳು ಇನ್ನೇನು ಕೆಲವೇ ದಿನಗಳಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಎಂಟ್ರಿ ನೀಡಲಿದ್ದಾರೆ. ಆದರೆ ರಾಜ್ಯದ ಪಠ್ಯ ಪುಸ್ತಕ ಮುದ್ರಕರು ಹೇಳುತ್ತಿರುವ ಪ್ರಕಾರ ರಾಜ್ಯದಲ್ಲಿ ಈ ಬಾರಿ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡರೂ ಸಹ ಮಕ್ಕಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕಗಳು ಕೈ ಸೇರುವುದು ಬಹುತೇಕ ಅನುಮಾನ ಎನ್ನಲಾಗಿದೆ. ಮುದ್ರಣ ಕಾಗದಗಳ ತೀವ್ರ ಅಭಾವದಿಂದಾಗಿ ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎನ್ನಲಾಗಿದೆ.


ಚೀನಾದಲ್ಲಿನ ಕೋವಿಡ್​ ಸಂಕಷ್ಟ ಹಾಗೂ ರಷ್ಯಾ ಹಾಗೂ ಉಕ್ರೇನ್​ ನಡುವಿನ ಪರಿಸ್ಥಿತಿಗಳಿಂದಾಗಿ ಮುದ್ರಣ ಕಾಗದಗಳಿಗೂ ಅಭಾವ ಉಂಟಾಗಿದೆ ಎನ್ನಲಾಗ್ತಿದೆ. ಭಾರತೀಯ ಮುದ್ರಣ ಕಾಗದ ತಯಾರಿಕಾ ಕಂಪನಿಗಳು ವಿದೇಶಗಳಿಗೆ ಹೆಚ್ಚಿನ ಬೆಲೆಗಳಿಗೆ ಮುದ್ರಣ ಕಾಗದಗಳನ್ನು ಕಳುಹಿಸಿಕೊಡುತ್ತಿದೆ . ಹೀಗಾಗಿ ದೇಶದಲ್ಲಿ ಮುದ್ರಣ ಕಾಗದಗಳಿಗೆ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.


ವಿದೇಶಗಳಿಗೆ ಮುದ್ರಣ ಕಾಗದಗಳ ರಫ್ತಿನಿಂದಾಗಿ ದೇಶದಲ್ಲಿ ಮುದ್ರಣ ಕಾಗದಗಳಿಗೆ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಶಿಕ್ಷಣ ಇಲಾಖೆಗೆ ಕನಿಷ್ಟ ಪುಸ್ತಕಗಳನ್ನು ಮುದ್ರಣ ಮಾಡಿಕೊಡಲೂ ಪಠ್ಯ ಪುಸ್ತಕ ಮುದ್ರಣ ಸಂಸ್ಥೆಗಳು ತಡಕಾಡುತ್ತಿವೆ. ಮೇ 15ರ ಒಳಗೆ ಪಠ್ಯ ಪುಸ್ತಕಗಳನ್ನು ಪೂರೈಸಿ ಎಂದು ಶಿಕ್ಷಣ ಇಲಾಖೆ ಹೇಳಿದೆ. ಆದರೆ ತೈಲೋತ್ಪನ್ನಗಳಂತೆ ಮುದ್ರಣ ಕಾಗದದ ಬೆಲೆಯೂ ಗಗನಕ್ಕೇರಿರುವುದು ದೊಡ್ಡ ಸಂಕಷ್ಟ ತಂದಿದೆ.


ಶಿಕ್ಷಣ ಇಲಾಖೆ ನೀಡಿರುವ ಪಠ್ಯ ಪುಸ್ತಕಗಳ ಲೆಕ್ಕಾಚಾರವನ್ನು ನೋಡಿದರೆ ಈ ಶೈಕ್ಷಣಿಕ ವರ್ಷದಲ್ಲಿ ಪೂರ್ತಿ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಏನಿಲ್ಲವೆಂದೂ 15 ಸಾವಿರ ಟನ್​ ಕಾಗದಗಳ ಅವಶ್ಯಕತೆ ಇದೆ. ಅಂದರೆ ಪ್ರತಿಯೊಬ್ಬ ಮುದ್ರಕ ದಿನಕ್ಕೆ 350 ಟನ್​​ ಕಾಗದದ ಅಗತ್ಯವಿರುತ್ತದೆ. ಕೆಲವು ದಿನಗಳ ಹಿಂದೆ ಮುದ್ರಣ ಕಾಗದಗಳಿಗೆ ಪ್ರತಿ 1 ಕೆಜಿಗೆ 62 ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಇದೀಗ ಈ ಬೆಲೆಯು ಪ್ರತಿ ಕೆಜಿಗೆ 80 ರೂಪಾಯಿ ಆಗಿದೆ.


ಮೇ 15ರೊಳಗೆ ಪಠ್ಯ ಪುಸ್ತಕಗಳನ್ನು ಮುದ್ರಿಸಿಕೊಡಿ ಎಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ಆದರೆ ಇಲ್ಲಿಯವರೆಗೆ ಕೇವಲ 20 ಪ್ರತಿಶತ ಪಠ್ಯ ಪುಸ್ತಕಗಳನ್ನು ಮುದ್ರಿಸುವಲ್ಲಿ ಮಾತ್ರ ರಾಜ್ಯದ ಪಠ್ಯ ಪುಸ್ತಕಗಳ ಮುದ್ರಕರು ಶಕ್ತರಾಗಿದ್ದಾರೆ ಎಂದು ಪಠ್ಯಪುಸ್ತಕ ಮುದ್ರಕರಾದ ಅಭಿಮಾನಿ ಪ್ರಕಾಶನದ ಆಢಳಿತಾಧಿಕಾರಿ ಅನಿಲ್​ ಹೊಸಕೊಪ್ಪ ಮಾಹಿತಿ ನೀಡಿದರು.

ಇದನ್ನು ಓದಿ : ಪೋಷಕರಿಗೆ ಕಾದಿದೆ RTE ಸಂಕಷ್ಟ: ಸರಕಾರ ಬಾಕಿ ಕೊಡದಿದ್ರೆ ನೋ ಅಡ್ಮಿಷನ್‌ ಎಂದ ಖಾಸಗಿ ಶಿಕ್ಷಣ ಸಂಸ್ಥೆಗಳು

ಇದನ್ನೂ ಓದಿ : APJEE 2022 : ಎಪಿಜೆಇಇ ಪರೀಕ್ಷೆಗಳಿಗೆ ಆನ್​ಲೈನ್​ ಅರ್ಜಿ ಸಲ್ಲಿಕೆ ಆರಂಭ

education printing paper shortage possibility of textbook delay

Comments are closed.