CBSE Term 2 Exam : ವಿದ್ಯಾರ್ಥಿಗಳೇ! ಬೋರ್ಡ್‌ ಪರೀಕ್ಷೆ ಎದುರಿಸುವುದು ಹೇಗೆ ಗೊತ್ತೇ? ಈ ಟಿಪ್ಸ್‌ ಅನುಸರಿಸಿ ಹೆಚ್ಚಿನ ಅಂಕ ಗಳಿಸಿ

ಸಿಬಿಎಸ್‌ಇ ಯ ಟರ್ಮ್‌ 2 (CBSE Term 2 Exam) ರ ಬೋರ್ಡ್‌ ಪರೀಕ್ಷೆ ಸಮೀಸುತ್ತಿದೆ. ವಿದ್ಯಾರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಪರೀಕ್ಷೆ ತಯಾರಿ ನಡೆಸುತ್ತಿದ್ದಾರೆ. ಒತ್ತಡಗಳನ್ನು ನಿಭಾಯಿಸುತ್ತಾ, ಟೈಮ್‌ ಟೇಬಲ್‌ ನಂತೆಯೇ, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಗೆಹರಿಸುತ್ತಾ ಸ್ಮಾರ್ಟ್‌ ನಕ್ಷೆ ರೂಪಿಸಿಕೊಳ್ಳುತ್ತಿದ್ದಾರೆ. ಅದರಂತೆಯೇ ಹಿಂದಿನ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಅಭ್ಯಾಸ ಕ್ರಮಗಳಿಂದ ಪರೀಕ್ಷೆ ಮತ್ತು ಮೌಲ್ಯಮಾಪನಗಳ ಹೊಸ ವಿಧಾನದೊಂದಿಗೆ ವಿದ್ಯಾರ್ಥಿಗಳು ರಚನಾತ್ಮಕ ವಿಧಾನಕ್ಕೆ ಹೊಂದಿಕೊಳ್ಳುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸರಿಯಾದ ತಯಾರಿ ನಡೆಸಬೇಕು ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು.

ಪರೀಕ್ಷೆ ಎದುರಿಸಬೇಕಾದರೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು:

ಆಲೋಚಿಸುವುದನ್ನು ನಿಲ್ಲಿಸಿ ಮತ್ತು ರಿಲಾಕ್ಸ್‌ ಆಗಿ:
ನೀವು ಪರೀಕ್ಷೆ ಬರೆಯುವ ಮೊದಲು ಆದಷ್ಟು ರಿಲಾಕ್ಸ್‌ ಆಗಿ. ಎರಡು ನಿಮಿಷ ಆಲೋಚಿಸುವುದನ್ನು ನಿಲ್ಲಿಸಿ. ದೇಹ ಮತ್ತು ಮನಸ್ಥಿತಿಯನ್ನು ಸಮಸ್ಥಿತಿಗೆ ತೆಗೆದುಕೊಂಡು ಬನ್ನಿ. ಇದು ನಿಮ್ಮ ಮಿದುಳಿಗೆ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿರ್ವಹಿಸಿದ ಕಾರ್ಯವನ್ನು ಸರಿಯಾಗಿ ಮಾಡಲು ಮಿದುಳು ಸಜ್ಜಾಗುತ್ತದೆ. ಇದನ್ನು ಮನೆಯಲ್ಲಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವಾಗ ಖಂಡಿತವಾಗಿ ಅಭ್ಯಾಸ ಮಾಡಿ. ಅದರಲ್ಲೂ ಸ್ವಲ್ಪ ಕಠಿಣ ಎನಿಸುವ ವಿಷಯಗಳಿಗಂತೂ ಇದು ಬಹಳ ಮುಖ್ಯವಾಗಿದೆ. ಪ್ರತಿದಿನ ಕೆಲವು ನಿಮಿಷಗಳ ಧ್ಯಾನ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುವುದು. ಒತ್ತಡವನ್ನೂ ನಿವಾರಿಸಬಲ್ಲದು.

ನಿಮ್ಮದೇ ಕಾರ್ಯತಂತ್ರ ರೂಪಿಸಿಕೊಳ್ಳಿ:
ಪರೀಕ್ಷೆಗಳಲ್ಲಿ ತಿಳಿವಳಿಕೆ ಮತ್ತು ಲೆಕ್ಕಾಚಾರದ ವಿಧಾನಗಳೇ ಹೆಚ್ಚು ಅಂಕಗಳಿಸಲು ಮತ್ತು ಆತ್ಮವಿಶ್ವಾಸ ಹೊಂದಲು ಸಹಾಯ ಮಾಡುತ್ತದೆ. ಶೈಕ್ಷಣಿಕ ದಿನಗಳಲ್ಲಿ ಪರೀಕ್ಷಾ ದಿನಗಳನ್ನು ಕಠಿಣ ಹಂತ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕಾರ್ಯತಂತ್ರ ಪರೀಕ್ಷೆಗೆ ಸಿದ್ಧವಾಗಲು ಸಹಾಯ ಮಾಡುತ್ತದೆ. ಪರೀಕ್ಷೆ ತಯಾರಿಯು ನಿಗದಿತ ಪಠ್ಯಕ್ರಮವನ್ನು ಸಂಪೂರ್ಣವಾಗಿ ಓದುವುದು ಮತ್ತು ತಿಳಿದುಕೊಳ್ಳುವುದರಿಂದ ಪ್ರಾರಂಭವಾಗುತ್ತದೆ.

ನಿಮ್ಮ ಚುರುಕಾದ ಬರವಣಿಗೆ, ಉತ್ತರವನ್ನು ಸರಿಯಾದ ರೀತಿಯಲ್ಲಿ ನೀಡುವ ವಿಧಾನ ಮತ್ತು ಪ್ರಶ್ನೆ ಪತ್ರಿಕೆಯನ್ನು ಚಂದವಾಗಿ ಬರೆಯುವ ಕ್ರಮ ಇವುಗಳಿಗೆ ಹೆಚ್ಚಿನ ಒತ್ತು ಕೊಡಿ. ಹೆಚ್ಚು ಹೆಚ್ಚು ಪ್ರಶ್ನೆಪತ್ರಿಕೆಗಳನ್ನು ಬಗೆಹರಿಸಿ. ಇದು ಯಾವ ಪ್ರಶ್ನೆಗೆ ಎಷ್ಟು ಸಮಯದಲ್ಲಿ ಉತ್ತರಿಸಬೇಕು ಎಂದು ತಿಳಿಸಿಕೊಡುವುದು.

ನಿಮ್ಮದೇ ಒಂದು ಅಭ್ಯಾಸದ ಕ್ರಮ ರೂಢಿಸಿಕೊಳ್ಳಿ. ಅದರಲ್ಲಿ ವಿಷಯ, ಸಮಯ ಮತ್ತು ಗ್ರುಪ್‌ ಸ್ಟಡಿ ಎಲ್ಲದಕ್ಕೂ ಸಮಯ ಕೊಡಿ. ಗ್ಯಾಜೆಟ್‌ ಮತ್ತು ಮನಸ್ಸು ಹಾಳು ಮಾಡುವ ವಸ್ತುಗಳಿಂದ ದೂರವಿರಿ. ಚೆನ್ನಾಗಿ ನಿದ್ದೆ ಮಾಡಿ.

ಪ್ರಶ್ನೆ ಪತ್ರಿಕೆ ಸಂಪೂರ್ಣವಾಗಿ ಓದಿ:
ಯಾವಾಗಲೂ ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಿ. ಅದು ನಿಮ್ಮ ಮೆದುಳಿನ ಸಬ್‌ಕಾನ್ಷಿಯಸ್‌ ಲೆವಲ್‌ನಲ್ಲಿ ಕೆಲಸ ಮಾಡುತ್ತಿರುತ್ತದೆ. ಸಮಯಗಳನ್ನು ಪ್ರಶ್ನೆಗಳಿಗನುಸಾರವಾಗಿ ಹೊಂದಿಸಿಕೊಳ್ಳಿ. ನಿಮಗೆ ಗೊತ್ತಿರುವ ಪ್ರಶ್ನೆಗಳನ್ನು ಫೋಕಸ್‌ ಮಾಡಿ. ಉತ್ತರಿಸುವು ಮೊದಲು ಒಂದು ನಿಮಿಷ ಯೋಚಿಸಿ, ಈ ಪ್ರಶ್ನೆಗೆ ಎಷ್ಟು ಅಂಕಗಳಿವೆ ಮತ್ತು ಯಾವ ಪಾಯಂಟ್ಸ್‌ ಪ್ರಮುಖವಾದದ್ದು ಎಂದು ಮನನ ಮಾಡಿಕೊಳ್ಳಿ. ಈ ಎಲ್ಲಾ ವಿಷಯಗಳು ಉತ್ತರ ಬರೆಯುವಾಗ ನಿಮಗೆ ಸಹಾಯ ಮಾಡುತ್ತದೆ.

ಕಷ್ಟದ ಮತ್ತು ಲಾಂಗ್‌ ಆನ್ಸರ್‌ ಇರುವ ಪ್ರಶ್ನೆಗಳನ್ನು ಕೊನೆಯಲ್ಲಿ ಉತ್ತರಿಸಿ. ಏಕೆಂದರೆ ನಿಮಗೆ ಗೊತ್ತಿರುವ ಮತ್ತು ಸರಳ ಪ್ರಶ್ನೆಗಳನ್ನು ಆದಷ್ಟು ಬೇಗ ಮುಗಿಸಿ ಉಳಿದ ಸಮಯ ಅದಕ್ಕೆ ಮೀಸಲಿಡಬಹುದು.

ಇದನ್ನೂ ಓದಿ : CBSE Term 2 Exam : 10,12ನೇ ತರಗತಿ ಟಾಪರ್​​ಗಳ ಉತ್ತರ ಪತ್ರಿಕೆ ಬಹಿರಂಗಪಡಿಸಲು ಸಿಬಿಎಸ್​ಇ ಪ್ಲಾನ್​

ಇದನ್ನೂ ಓದಿ : CBSE Term 2 Exams : ಸಿಬಿಎಸ್​ಇ ಟರ್ಮ್ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ

CBSE Term 2 Exam how to attempt board exam to get high marks

Comments are closed.