ಶಾಲೆಗಳಿಗೆ ದಸರಾ ರಜೆ ಅವಧಿ ಬದಲಾವಣೆ : ಮಹತ್ವದ ಆದೇಶ

ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ ಅವಧಿಯಲ್ಲಿ (Dussehra School Holiday change) ಮಾರ್ಪಾಡು ಮಾಡಲಾಗಿದೆ. ಸಪ್ಟೆಂಬರ್‌ 26ರಿಂದ ಅಕ್ಟೋಬರ್‌ 9 ವರೆಗೆ ದಸರಾ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.

ರಾಜ್ಯದಲ್ಲಿ ಅಕ್ಟೋಬರ್‌ 3ರಿಂದ ದಸರಾ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿತ್ತು. ಆದ್ರೆ ಈ ಬಾರಿ ಸಪ್ಟೆಂಬರ್‌ 26 ರಿಂದ ನಾಡಹಬ್ಬ ದಸರಾ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ವೇಳೆಯಲ್ಲಿ ಮಕ್ಕಳಿಗೆ ರಜೆಯನ್ನು ನೀಡುವಂತೆ ಒತ್ತಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲೀಗ ಮೈಸೂರು ಜಿಲ್ಲೆಯ ಶಾಲೆಗಳಿಗೆ ಸಪ್ಟೆಂಬರ್‌ 26ರಿಂದ ಅಕ್ಟೋಬರ್‌ 9ರ ವರೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಆದ್ರೆ ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿಯ ಆಚರಣೆಯನ್ನು ಕಡ್ಡಾಯವಾಗಿ ಆಚರಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಮಂಗಳೂರಿನಲ್ಲಿ ದಸರಾ ಸಂದರ್ಭದಲ್ಲಿಯೇ ಮಧ್ಯವಾರ್ಷಿಕ ರಜೆಯನ್ನು ಮಂಜೂರು ಮಾಡುವಂತೆ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ರಜೆಯ ಅವಧಿಯನ್ನು ಮಾರ್ಪಾಡು ಮಾಡಿ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ ಮೈಸೂರು ಜಿಲ್ಲೆಯಲ್ಲಿಯೂ ದಸರಾ ರಜೆಯನ್ನು ಮಾರ್ಪಾಡು ಮಾಡಲಾಗಿದೆ.

ಕಳೆದ ಎರಡು ವರ್ಷಗಳಿಂದಲೂ ದಸರಾ ರಜೆ ಕೋವಿಡ್‌ ಭೀತಿಯಲ್ಲಿಯೇ ಕಳೆದು ಹೋಗಿದೆ. ಈ ಬಾರಿ ಅರಮನೆ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ ದಸರಾ ಸಂಭ್ರಮವನ್ನು ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹೊರತು ಪಡಿಸಿ ಉಳಿದ ಮಕ್ಕಳಿಗೆ ಕಣ್ತುಂಬಿಕೊಳ್ಳುವ ಅವಕಾಶವಿಲ್ಲ. ಇನ್ನು ದಸರಾ ಹೊತ್ತಲೇ ಟೂರ್‌ ಹೊರಡಲು ಸಜ್ಜಾಗಿದ್ದ ಪೋಷಕರಿಗೂ ಕೂಡ ನಿರಾಸೆಯಾಗಿದೆ.

ಹಿಂದೆಲ್ಲಾ ದಸರಾ ರಜೆಯನ್ನು ಒಂದು ತಿಂಗಳ ಕಾಲ ನೀಡಲಾಗುತ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೊಸ ಆದೇಶಗಳಿಂದಾಗಿ ರಜೆಯ ಅವಧಿಯಲ್ಲಿ ಕಡಿತ ಮಾಡಲಾಗಿದೆ. ದಸರಾ ರಜೆ ಅನ್ನೋದು ಕೇವಲ ಹೆಸರಿಗಷ್ಟೇ ಆಗಿಬಿಟ್ಟಂತಿದೆ. ದಸರಾ ಮುಗಿದ ಮೇಲೆ ರಜೆ ನೀಡುವುದು ಎಷ್ಟು ಸರಿ. ಮೈಸೂರು, ಮಂಗಳೂರಿಗೆ ಮಾತ್ರವೇ ನವರಾತ್ರಿಯ ಹೊತ್ತಲ್ಲಿ ರಜೆ ನೀಡಲಾಗಿದೆ ಎಂದು ಮಕ್ಕಳ ಪೋಷಕರು, ಶಿಕ್ಷಕರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Teachers relief fund : ಮತ್ತೊಮ್ಮೆ ಶಿಕ್ಷಕರ ಆಕ್ರೋಶಕ್ಕೆ ಗುರಿಯಾದ ಸಚಿವರು: ಶಿಕ್ಷಕರ ಪರಿಹಾರ ನಿಧಿ ಹಣವೂ RTE ಶುಲ್ಕ ಪಾವತಿಗೆ ಬಳಕೆ

ಇದನ್ನೂ ಓದಿ : ಬಂಗಾರ ಪ್ರಿಯರಿಗೆ ಕಹಿಸುದ್ದಿ : ಚಿನ್ನದ ಬೆಲೆಯಲ್ಲಿ ಬಾರೀ ಏರಿಕೆ

Dussehra School Holiday change Mysore Important order

Comments are closed.