stole gold jewellery :ಎರಡು ಪ್ರತ್ಯೇಕ‌ ಘಟನೆಯಲ್ಲಿ ಖತರ್ನಾಕ್ ಐಡಿಯಾ ರೂಪಿಸಿ ಚಿನ್ನಾಭರಣ ದೂಚಿದ ಖದೀಮರು

ಮೈಸೂರು/ ತಮಿಳುನಾಡು:stole gold jewellery : ವಂಚಕರು ಜನರನ್ನು ಯಾವ ರೀತಿ ವಂಚಿಸಿ‌ ಮಂಗಮಾಯ ಮಾಡುತ್ತಾರೆ ಎಂಬುವುದಕ್ಕೆ ಮೈಸೂರು ಹಾಗೂ ತಮಿಳುನಾಡಿನ ಹೊಸೂರು ಎಂಬಲ್ಲಿ ನಡೆದ ಘಟನೆಯೆ ಸಾಕ್ಷಿ. ಮೈಸೂರಿನಲ್ಲಿ ಡೂಪ್ಲಿಕೇಟ್ ಪಾರ್ಸೆಲ್ ಬಾಕ್ಸ್ ಹಿಡಿದುಕೊಂಡು ಬಂದು ಚಿನ್ನಾಭರಣ ದೋಚಿದರೆ, ಇನ್ನು ತಮಿಳುನಾಡಿನ ಹೊಸೂರಿನಲ್ಲಿ ಚಿನ್ನದ ಸರ ಪಾಲಿಶ್ ಮಾಡುವ ನೆಪದಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿಸಿ ಚಿನ್ನಾಭರಣ ಕೊಂಡೊಂಯ್ದಿದ್ದಾರೆ.

ಮೊದಲನೆಯ ಘಟನೆ ಮೈಸೂರಿನಲ್ಲಿ ಹಾಡ ಹಗಲೇ ಈ ದರೋಡೆ ಕೃತ್ಯ ನಡೆದಿದೆ. ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ದೋಚಿ ಖದೀಮರು ಪರಾರಿಯಾಗಿದ್ದಾರೆ. ನಂಜನಗೂಡಿನ ರಾಮಸ್ವಾಮಿ ಬಡಾವಣೆ ಒಂದನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ಖದೀಮರು ಖತರ್ನಾಲ್ ಪ್ಲ್ಯಾನ್ ಮಾಡಿ ಈ ದರೋಡೆ ಕೃತ್ಯ ನಡೆಸಿದ್ದಾರೆ‌. ಪ್ರಾರಂಭದಲ್ಲಿ ಈ ಖದೀಮರು ಡೂಪ್ಲಿಕೇಟ್ ಪಾರ್ಸಲ್ ಬಾಕ್ಸ್ ಹಿಡಿದುಕೊಂಡು ಬಂದಿದ್ದಾರೆ. ಪಾರ್ಸಲ್ ಬಂದಿದೆ ಎಂದು ಬಾಗಿಲು ತಟ್ಟಿ ಬಾಗಿಲು ತೆರೆಸಿ ಕಳ್ಳರು ಒಳ ನುಗ್ಗಿದ್ದಾರೆ. ಬಳಿಕ ಮನೆಯೊಳಗಿದ್ದ ಮಹಿಳೆಯನ್ನು ಬೆದರಿಸಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ, ಉಂಗುರ
ಬೀರುವಿನಲ್ಲಿದ್ದ ಮತ್ತೊಂದು ಜೊತೆ ಕೈ ಬಳೆ, ನೆಕ್ಲೆಸ್, ಹ್ಯಾಂಗಲ್ಸ, ತಲೆಬೊಟ್ಟು ಸೇರಿ ಒಟ್ಟು 175 ಗ್ರಾಂ ಗೂ ಹೆಚ್ಚು ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾರೆ.

ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡ ಮಹಿಳೆಯಾಗಿದ್ದು,
ಮಹಿಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದೆ. ಚಿನ್ನ ದೋಚಿರುವ ಕಳ್ಳರು ಕನ್ನಡ ಮತ್ತು ತಮಿಳು, ಹಿಂದಿ ಮಾತನಾಡುತ್ತಿದ್ದರು ಎಂದು‌ ದಾಕ್ಷಾಯಿಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನು ರಾಜ್ಯ ಗಡಿ ತಮಿಳುನಾಡಿನ ಹೊಸೂರು ಸಮೀಪದ ಚೋಕನಾಫಪುರದಲ್ಲಿ ನಡೆದ ಘಟನೆಯಲ್ಲಿ ಚಿನ್ನದ ಸರ ಪಾಲಿಶ್ ಮಾಡುವ ನೆಪದಲ್ಲಿ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ. ವ್ಯಕ್ತಿಯೊಬ್ಬ ಚೋಕನಾಪುರ ಗ್ರಾಮದ ವಿಮಲಾ ಎಂಬ ಮಹಿಳೆಯ ಮನೆಗೆ ಬಂದಿದ್ದಾನೆ‌. ಕಾಲುಂಗುರ, ಚಿನ್ನದ ಸರ ಪಾಲಿಶ್ ಮಾಡಿಕೊಡುವುದಾಗಿ ಕಳ್ಳ ಹೇಳಿದ್ದಾನೆ.

ಪ್ರಾರಂಭದಲ್ಲಿ ಮಹಿಳೆಗೆ ನಂಬಿಕೆ ಬರುವುದಕ್ಕೆ ಮೊದಲು ಕಾಲುಂಗುರವನ್ನ ಪಾಲಿಶ್ ಮಾಡಿ ಕೊಟ್ಟಿದ್ದಾನೆ. ಬಳಿಕ ಚಿನ್ನದ ಸರ ಪಾಲಿಶ್ ಮಾಡಲು ಮಹಿಳೆ ಕೊಟ್ಟಿದ್ದಾರೆ. ಆದ್ರೆ ಚಿನ್ನದ ಸರ ಪಾಲಿಶ್ ಮಾಡಿದ ಬಳಿಕ ಪೇಪರ್ ಒಳಗಿಟ್ಟು ಸ್ವಲ್ಪ ಸಮಯ ಆದ ಬಳಿನ ಓಪನ್ ಮಾಡಿ ನೋಡುವಂತೆ ತಿಳಿಸಿ ಹೋಗಿದ್ದಾನೆ‌. ಆದ್ರೆ ಕೆಲ ಹೊತ್ತಿನ ಬಳಿಕ ಪೇಪರ್ ಓಪನ್ ಮಾಡಿದಾಗ ಮಹಿಳೆಗೆ ಶಾಕ್ ಆಗಿದೆ‌.‌ ಯಾಕಂದ್ರೆ ಆ ಪೇಪರ್ ಒಳಗೆ ಚಿನ್ನದ ಸರದ ಬದಲು ಹಿತ್ತಳೆ ಸರವಿತ್ತು. ಕಳ್ಳ ಚಿನ್ನದ ಸರ ಎಗರಿಸಿ ಪೇಪರ್ ನಲ್ಲಿ ಹಿತ್ತಾಳೆ ಸರವಿಟ್ಟು ಎಸ್ಕೇಪ್ ಆಗಿರೋದು, ತಾನೂ ಮೋಸ ಹೋಗಿರುವುದಾಗಿ ಮಹಿಳೆಗೆ ಗೊತ್ತಾಗಿದೆ. ಖದೀಮ ಚಿನ್ನದ ಸರ ಕದ್ದು ಹಿತ್ತಾಳೆ ಸರವಿಟ್ಟಿದ್ದು ಈತನ ಕೈಚಳಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು ಸಿ.ಸಿ ಕ್ಯಾಮರಾದ ಆಧಾರದ ಮೇರೆಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಒಟ್ಟಿನಲ್ಲಿ ದಿನಕಳೆದಂತೆ ಈ ರೀತಿ ವಂಚಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಜನ ಎಚ್ವೆತ್ತುಕೊಳ್ಳಬೇಕಾಗಿದೆ.

ಇದನ್ನು ಓದಿ : Mukesh Ambani at Guruvayur temple : ಭಾವಿ ಸೊಸೆ ಜೊತೆ ಮುಕೇಶ್ ಅಂಬಾನಿ ಟೆಂಪಲ್ ರನ್

ಇದನ್ನೂ ಓದಿ : Vinay Kumar : MI ಎಮಿರೇಟ್ಸ್ ತಂಡಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಬೌಲಿಂಗ್ ಕೋಚ್

In two separate incidents, Khadeems hatched a khatarnak idea and stole gold jewellery

Comments are closed.