ಶಿಕ್ಷಣ ಇಲಾಖೆ ಹೊಸ ಆದೇಶ : ಶಾಲೆಯ ಊಟದ ಸಮಯ ಬದಲಾವಣೆ

ಬೆಂಗಳೂರು : ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವ ಹಾಗೂ ಒಂದೇ ಅಡುಗೆ ಮನೆ ಇರುವ ಕಾರಣದಿಂದಾಗಿ ಕರ್ನಾಟಕ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಸಮಯವನ್ನು ಬದಲಾಯಿಸಲು ಶಿಕ್ಷಣ ಇಲಾಖೆ ಸೂಚನೆಯನ್ನು (Education Department New Order) ನೀಡಿದೆ. ಇದ್ದರಿಂದಾಗಿ ಶಾಲಾ ಮಕ್ಕಳು ಹಸಿವೆಗೆ ಮೊದಲು ಊಟವನ್ನು ಮಾಡಲು ಅನುಕೂಲವಾಗುತ್ತದೆ.

ಮಧ್ಯಾಹ್ನ ಊಟದ ಸಮಯದಲ್ಲಿ ಚಿಕ್ಕ ಮಕ್ಕಳು ದೊಡ್ಡ ಮಕ್ಕಳೊಂದಿಗೆ ಕೂರಿಸುವುದು. ಹಾಗೇ ಮಕ್ಕಳಿಗೆ ಆಹಾರವನ್ನು ಕಡಿಮೆ ಸಮಯದಲ್ಲಿ ಬಡಿಸುವಾಗ ಹಾಗೂ ಮಕ್ಕಳು ತಟ್ಟೆಗಳನ್ನು ತೊಳೆಯುವಾಗ ನೂಕುನುಗ್ಗಲಿಗೆ ಕಾರಣವಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಾಲೆಯ ಮಧ್ಯಾಹ್ನದ ಬಿಸಿಊಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 1ರಿಂದ 1.45ರವರೆಗೆ ಹಾಗೂ 6ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2ರಿಂದ 2.40ರವರೆಗೆ ಪ್ರತ್ಯೇಕ ಊಟ ವಿತರಿಸಲು ತಿಳಿಸಲಾಗಿದೆ.

ಇದನ್ನೂ ಓದಿ : 10th 12th practical exams 2023: CBSE 10, 12ನೇ ತರಗತಿ ಪ್ರಾಯೋಗಿಕ ಪರೀಕ್ಷೆಗಳ 2023ರ ಮಾರ್ಗಸೂಚಿ ಬಿಡುಗಡೆ

ಇದನ್ನೂ ಓದಿ : SSLC Exams 2023: ಎಸ್ಎಸ್ಎಲ್ ಸಿ ಅಂತಿಮ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : GATE exam 2023: ಗೇಟ್‌ ಪರೀಕ್ಷೆಯ ದಿನಾಂಕ, ವೇಳಾಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Bus facility for government school : ಶಾಲೆಗಳಿಗೆ ಸರಕಾರದಿಂದಲೇ ಬಸ್‌ ಸೌಲಭ್ಯ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : New rule to government workers: ಮೊಮ್ಮಕ್ಕಳಿಗೂ ಸಿಗುತ್ತೆ ಅನುಕಂಪದ ನೆಲೆಯಡಿಯಲ್ಲಿ ಸರಕಾರಿ ಕೆಲಸ: ಹೊಸ ನಿಯಮ ಜಾರಿ

ಇದರ ಬಗ್ಗೆ ಶಾಲಾಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದರು. ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರಕಾರದ ಮೌಲ್ಯಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಸಂಶೋಧನಾ ನಿರ್ದೇಶಕನಾಲಯವು ಮಾಡಿದ ವಿವಿಧ ಶಿಫಾರಸುಗಳಲ್ಲಿ ಈ ಅಂಶವನ್ನು ಸೇರಿಸಲಾಗಿದೆ. ಶಾಲೆಗಳ ಮಧ್ಯಾಹ್ನದ ಊಟದ ಗುಣಮಟ್ಟ, ಪ್ರಮಾಣ, ಪೌಷ್ಟಿಕತೆ, ಶುಚಿತ್ವ, ಸುರಕ್ಷತೆ ಮತ್ತು ಕೊರತೆಗಳ ಬಗ್ಗೆ ಗಮನ ಹರಿಸಲು ತಿಳಿಸಲಾಗಿದೆ.

Education Department New Order: Change in school lunch time

Comments are closed.