GOOD NEWS : ಶೀಘ್ರದಲ್ಲಿಯೇ 17 ಸಾವಿರ ಅತಿಥಿ ಉಪನ್ಯಾಸಕರ ನೇಮಕ : ಸಚಿವ ಅಶ್ವಥ್ ನಾರಾಯಣ

ಬೆಂಗಳೂರು : ಉಪನ್ಯಾಸಕರ ನೇಮಕಾತಿಯ ನಿರೀಕ್ಷೆಯಲ್ಲಿದ್ದ ಸ್ನಾತಕೋತ್ತರ ಪದವೀಧರರಿಗೆ ಉನ್ನತ ಶಿಕ್ಷಣ ಇಲಾಖೆ ಗುಡ್‌ ನ್ಯೂಸ್‌ ಕೊಟ್ಟಿದೆ. ರಾಜ್ಯದಲ್ಲಿ ಬರೋಬ್ಬರಿ 17 ಸಾವಿರ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ ಅಶ್ವಥ್‌ ನಾರಾಯಣ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಅಶ್ವಥ್‌ ನಾರಾಯಣ ಅವರು, ಕಾಲೇಜು ಶಿಕ್ಷಣ ಇಲಾಖೆಯಿಂದ ಈಗಾಗಲೇ ಸುಮಾರು 6,500 ಬೋಧಕರ ಹುದ್ದೆ ಮಂಜೂರಾತಿ ಮಾಡಲಾಗಿದ್ದು, ಆರು ಸಾವಿರ ಹುದ್ದೆಯನ್ನು ಭರ್ತಿ ಮಾಡಲಾಗಿದೆ. ಅಲ್ಲದೇ ಖಾಲಿ ಉಳಿದಿರುವ 17 ಸಾವಿರ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಲಾಗುವುದು ಎಂದಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ತಡವಾಗಿ ಕಾಲೇಜುಗಳು ಆರಂಭಗೊಂಡಿದೆ. ಸರಿಯಾದ ಸಮಯದಲ್ಲಿ ಪಾಠ ಬೋಧನೆ ಮಾಡಲು ಉಪನ್ಯಾಸಕರಿಗೆ ಸೂಚನೆಯನ್ನು ನೀಡಲಾಗಿದೆ. ಪದವಿ ತರಗತಿಗಳ ಪಠ್ಯ ಕಡಿತ ಮಾಡುವ ಕುರಿತು ಇಲಾಖೆಯ ಯಾವುದೇ ಚಿಂತನೆಯನ್ನು ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಸಪ್ಟೆಂಬರ್‌ 15 ರ ವರೆಗೆ ಪದವಿ, ಸ್ನಾತಕೋತ್ತರ ತರಗತಿಗಳ ಆರಂಭವಿಲ್ಲ : ಡಿ.ಸಿ. ಡಾ.ರಾಜೇಂದ್ರ ಕೆ.ವಿ

ಇದನ್ನೂ ಓದಿ : ಅಗಸ್ಟ್ 28 ರಿಂದ 30 ರವರೆಗೆ ರಾಜ್ಯದಲ್ಲಿ ಸಿಇಟಿ: 530 ಕೇಂದ್ರಗಳಲ್ಲಿ ನಡೆಯಲಿದೆ ಪರೀಕ್ಷೆ

Comments are closed.