Mysore Gang Rape : ಆರೋಪಿಗಳನ್ನು ಮೈಸೂರಿಗೆ ಕರೆತಂದ ಪೊಲೀಸರು : ಮುಂದೇನು ?

ಮೈಸೂರು : ವಿದ್ಯಾರ್ಥಿನಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ಮೈಸೂರಿಗೆ ಕರೆತಂದಿದ್ದಾರೆ. ಆರೋಪಿಗಳನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆಯನ್ನು ನಡೆಸಿ, ನಂತರದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆಯಿದೆ.

ತಮಿಳುನಾಡು ಮೂಲದ ಕಾಮುಕರನ್ನು ಪೊಲೀಸರು ಸತ್ಯಮಂಗಲದಿಂದ ಮೈಸೂರಿಗೆ ಕರೆತಂದಿದ್ದಾರೆ. ಕಾಮುಕರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮೈಸೂರಿನ ಗೌಪ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಿದ್ದಾರೆ. ನಂತರದಲ್ಲಿಆರೋಪಿಗಳನ್ನು ವೈದ್ಯಕೀಯ ತಪಾಸಣೆಯನ್ನು ನಡೆಸಲಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣ ವಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ಅತ್ಯಂತ ಮಹತ್ವವಾಗಿದೆ. ವೈದ್ಯಕೀಯ ತಪಾಸಣೆಯ ನಂತರದಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ.

ಸ್ಥಳ ಮಹಜರು ಕಾರ್ಯ ನಡೆದ ನಂತರದಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯಿದ್ದು, ಹೆಚ್ಚಿನ ವಿಚಾರಣೆಯ ಹಿನ್ನೆಲೆಯಲ್ಲಿ ಪೊಲೀಸರು ಇನ್ನಷ್ಟು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ಆರೋಪಿಗಳು ರೋಡ್‌ ದರೋಡೆ ಮಾಡುವ ಸಲುವಾಗಿ ಹೊಂಚು ಹಾಕಿದ್ದರು. ಆದರೆ ಈ ವೇಳೆಯಲ್ಲಿ ಯುವಕ, ಯುವತಿ ಕಣ್ಣಿಗೆ ಬೀಳುತ್ತಿದ್ದಂತೆಯೇ ಯುವತಿಯ ಮೇಲೆ ಅತ್ಯಾಚಾರವನ್ನು ಎಸಗಿದ್ದಾರೆ.

ಆರೋಪಿಗಳು ಈ ಹಿಂದೆಯೂ ಇಂತಹದ್ದೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಅನ್ನೋ ಕುರಿತು ಮಾಹಿತಿ ಕಲೆ ಹಾಕುವ ಸಾಧ್ಯತೆಯಿದೆ. ಪೊಲೀಸರು ಘಟನಾ ಸ್ಥಳ, ಪರಾರಿಯಾಗಲು ಬಳಸಿದ ವಾಹನ, ಮದ್ಯ ಖರೀದಿ ಮಾಡಿರುವ ಅಂಗಡಿಯಲ್ಲಿಯೂ ಮಹಜರು ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಕತ್ತಲಲ್ಲಿ ಕಾಮುಕರನ್ನು ಸೆರೆ ಹಿಡಿದ ಖಾಕಿ ಪಡೆ : ಆರೋಪಿಗಳ ಸುಳಿವು ಕೊಟ್ಟಿತ್ತು ಬಸ್‌ ಟಿಕೆಟ್‌

ಇದನ್ನೂ ಓದಿ : ಸತ್ಯಮಂಗಲದಿಂದ ಮೈಸೂರಿಗೆ ಆರೋಪಿಗಳು : ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಮುಂಬೈ ತೆರಳಿದ ಯುವತಿ

Comments are closed.