ಪ್ರೌಢಶಾಲಾ ಶಿಕ್ಷಕರ ಬೇಸಿಗೆ ರಜೆ ಅವಧಿಯನ್ನು ಪರಿಶೀಲಿಸಿ : ಸಚಿವ ಸುರೇಶ್ ಕುಮಾರ್ ಗೆ ಶಿಕ್ಷಕರ ಆಗ್ರಹ

ಬೆಂಗಳೂರು : ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಘೋಷಣೆ ಮಾಡಿರುವ ರಜೆಯನ್ನು ಪುನರ್ ಪರಿಶೀಲನೆ ಮಾಡು ವಂತೆ ಶಿಕ್ಷಕರು ಸಚಿವ ಸುರೇಶ್ ಕುಮಾರ್ ಅವರನ್ನು ಆಗ್ತಹಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾದ ಬೆನ್ನಲ್ಲೇ 9ನೇ ತರಗತಿವರೆಗಿನ  ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ಉತ್ತೀರ್ಣ ಗೊಳಿಸುವುದಾಗಿ ಶಿಕ್ಷಣ ಇಲಾಖೆ ಘೋಷಿಸಿತ್ತು. ಅಲ್ಲದೇ ಶಿಕ್ಷಕರಿಗೆ ಬೇಸಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಪ್ರೌಢಶಾಲಾ ಶಿಕ್ಷಕರಿಗೆ ಬೇಸಿಗೆ ರಜೆ ನೀಡುವ ವಿಚಾರದಲ್ಲಿ ಇಲಾಖೆ ಎಡವಟ್ಟು ಮಾಡಿರೋದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರೌಢಶಾಲಾ ಶಿಕ್ಷಕರಿಗೆ ಜೂನ್ 15 ರಿಂದ ಜುಲೈ 14 ರ ವರೆಗೆ ರಜೆ ಘೋಷಿಸಿದೆ‌. ಆದರೆ ಜೂನ್ 21 ರಿಂದ ಜುಲೈ 5ರ‌ ವರೆಗೆ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ನಂತರ ಮೌಲ್ಯಮಾಪನ ಕಾರ್ಯದಲ್ಲಿ ಶಿಕ್ಷಕರು ಭಾಗಿಯಾಗಬೇಕಾಗಿದೆ.

ಪ್ರೌಢಶಾಲಾ ಶಿಕ್ಷಕರಿಗೆ ರಜೆ ನೀಡಿದ ಅವಧಿಯಲ್ಲೇ ಎಸ್ಎಸ್ಎಲ್ ಸಿ ಪರೀಕ್ಷೆ, ಮೌಲ್ಯಮಾಪನ ಕಾರ್ಯ ನಡೆಯಲಿದೆ. ಹೀಗಾಗಿ ರಜೆಯ‌‌ ಅವಧಿಯನ್ನು ಮರುಪರಿಶೀಲನೆ ಮಾಡುವಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಸಚಿವರಿಗೆ ಮನವಿ ಮಾಡಿದೆ.

Comments are closed.