Integrated coaching : ಇಂಟಿಗ್ರೇಟೆಡ್ ಕೋಚಿಂಗ್ ಹೆಸರಿನಲ್ಲಿ ಕಾಲೇಜುಗಳಿಂದ ಸುಲಿಗೆ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ಶಿಕ್ಷಣವೇ ಸುಲಿಗೆ ಎಂಬ ಸ್ಥಿತಿ ತಲುಪಿರುವ ಹೊತ್ತಿನಲ್ಲಿ ದ್ವಿತಿಯ ಪಿಯುಸಿವರೆಗೆ ಶಿಕ್ಷಣ ನೀಡುವ ಸಂಸ್ಥೆಗಳು ಇಂಟಿಗ್ರೇಟೆಡ್ ಕೋಚಿಂಗ್ (Integrated coaching ) ಹೆಸರಿನಲ್ಲಿ ಪಠ್ಯದ ಜೊತೆ ನೀಟ್‌, ಜೆಇಇ ಮತ್ತು ಸಿಇಟಿಗೆ ತರಬೇತಿ ನೀಡುವ ಮೂಲಕ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತವೆ. ಆದರೆ ಈಗ ಈ ಸುಲಿಗೆಗೆ ಕಡಿವಾಣ ಹಾಕಲು ಪದವಿಪೂರ್ವ ಶಿಕ್ಷಣ ಇಲಾಖೆ ನಿಯಮಾವಳಿ ರೂಪಿಸಿದೆ.

ಇಂಟೆಗ್ರೇಟೆಡ್‌ ಕೋಚಿಂಗ್‌ ವ್ಯವಸ್ಥೆಯನ್ನು ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಅಳವಡಿಸಿಕೊಂಡಿದೆ. ಕೆಲವು ಕಾಲೇಜುಗಳು ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿವೆ. ಈ ಸಂಸ್ಥೆಗಳ ಬೋಧಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಇತ್ತೀಚೆಗೆ ಕೆಲವು ಕಾಲೇಜುಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ನೀಡುವುದಾಗಿ ವಿದ್ಯಾರ್ಥಿಗಳ ಮನವೊಲಿಸಿ ಹಣ ಕೀಳುತ್ತಾರೆ ಎನ್ನುವ ಆರೋಪಗಳಿವೆ. ಆದರೆ ಇನ್ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ. ಇಂಟೆಗ್ರೇಟೆಡ್‌ ಕೋಚಿಂಗ್‌ ಇರುವ ಕಾಲೇಜುಗಳಲ್ಲಿ ವರ್ಷಕ್ಕೆ 1.25 ಲಕ್ಷದಿಂದ 3 ಲಕ್ಷದವರೆಗೆ ವಿದ್ಯಾರ್ಥಿಗಳಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ವಿವಿಧ ಪರೀಕ್ಷೆಗಳ ಅನುಸಾರ ಪ್ಯಾಕೇಜ್‌ ರೂಪದಲ್ಲಿ ಶುಲ್ಕ ಪಡೆಯಲಾಗುತ್ತದೆ ಎಂಬ ಆರೋಪಗಳು ಇದೆ.

Integrated coaching not permitted in colleges pu board order

Integrated coaching ಕುರಿತು ಇಲಾಖೆ ಈ ಕೆಳಗಿನ ನಿಯಮಗಳನ್ನು ರೂಪಿಸಿದೆ.

  • ಪಿಯು ಕಾಲೇಜುಗಳಲ್ಲಿ ಸಿಇಟಿ, ಜೆಇಇ, ನೀಟ್, ಇಂಟೆಗ್ರೆಟೆಡ್‌ ಕೋರ್ಸ್‌, ಬ್ರಿಡ್ಜ್‌ ಕೋರ್ಸ್‌ ಇತ್ಯಾದಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನಿಗದಿಪಡಿಸಿದ ಶುಲ್ಕ ಮಾತ್ರ ಸ್ವೀಕರಿಸಬೇಕು.
  • ಇತರೆ ಸಂಘ ಸಂಸ್ಥೆ ಅಥವಾ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸೇರಿ ಬೋಧನೆ ಮಾಡುವುದು ಕಂಡು ಬಂದಲ್ಲಿ ಕಾಲೇಜಿನ ಮಾನ್ಯತೆ ರದ್ದತಿ ಎಚ್ಚರಿಕೆ.
  • ಈ ಸಂಸ್ಥೆಗಳ ಪ್ರಾಂಶುಪಾಲರ ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಜರುಗಿಸುವ ವಾರ್ನಿಂಗ್.
  • ನಿಗದಿಪಡಿಸಿದ ಪಠ್ಯಕ್ರಮವನ್ನು ಹೊರತುಪಡಿಸಿ ಇತರೆ ಯಾವುದೇ ಪಠ್ಯಕ್ರಮ ಬೋಧಿಸಬಾರದು.
  • ಗಮನಕ್ಕೆ ಬಂದರೆ, ಸಂಸ್ಥೆಯ ಆ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ.
  • ಪರಸ್ಪರ ವಿನಿಯಮದೊಂದಿಗೆ ಆ ಸಂಸ್ಥೆಯ ಹೆಸರನ್ನು ತಮ್ಮ ಕಾಲೇಜಿನ ಜತೆ ಬಳಕೆ ಮಾಡಿ ಯಾವುದೇ ರೀತಿ ಶೈಕ್ಷಣಿಕ ಚಟುವಟಿಕೆ ನಡೆಸತಕ್ಕದ್ದಲ್ಲ.
  • ಬೇರೆ ಪಠ್ಯ ವಸ್ತುವನ್ನು ಖರೀದಿಸಲು ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಒತ್ತಡ ಹೇರುವಂತಿಲ್ಲ.
Integrated coaching not permitted in colleges pu board order

ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪಿಸಿರುವ ಈ ನಿಯಮಕ್ಕೆ ಎಷ್ಟು ಬೆಲೆ ಸಿಗಲಿದೆ ಅನ್ನೋದನ್ನು ಕಾದುನೋಡಬೇಕಿದೆ. ಯಾಕೆಂದರೇ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮಕ್ಕೆ ಶಿಕ್ಷಣ ಸಂಸ್ಥೆಗಳು ಚಾಪೆಯಡಿ ತೂರಿಕೊಳ್ಳುವಂತ ಉಪಾಯಗಳನ್ನು ಹುಡುಕಿಕೊಳ್ಳೋ ಸಾಧ್ಯತೆ ಇದೆ.

ಇದನ್ನೂ ಓದಿ : Karnataka CET 2022 Hall Ticket  : ಸಿಇಟಿ ಹಾಲ್ ಟಿಕೆಟ್ ಬಿಡುಗಡೆ : ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : ಅಂಬೇಡ್ಕರ್ ಸಂವಿಧಾನ ಶಿಲ್ಪಿ ಬಿರುದಿಗೆ ಧಕ್ಕೆ: ಬಯಲಾಯ್ತು ಚಕ್ರತೀರ್ಥ ಸಮಿತಿ ಎಡವಟ್ಟು

Integrated coaching not permitted in colleges pu board order

Comments are closed.