JEE Advanced 2022 : ಜೆಇಇ ಅಡ್ವಾನ್ಸ್ಡ್​​ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

JEE Advanced 2022 : ಜೆಇಇ ಅಡ್ವಾನ್ಸ್ಡ್​​ 2022 ಪರೀಕ್ಷೆಯ ದಿನಾಂಕಗಳನ್ನು ಐಐಟಿ ಬಾಂಬೆ ಪರಿಷ್ಕರಣೆ ಮಾಡಿದೆ. ಪರಿಷ್ಕೃತ ದಿನಾಂಕದ ಪ್ರಕಾರ ಬಾಂಬೆ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯು ಆಗಸ್ಟ್​ 28ರಂದು ಜೆಇಇ ಅಡ್ವಾನ್ಸ್ಡ್​ ಪರೀಕ್ಷೆ ನಡೆಸಲಿದೆ. ಈ ಮೊದಲು ಜುಲೈ 3ರಂದು ಪರೀಕ್ಷೆಗಳನ್ನು ನಡೆಸುವುದೆಂದು ಘೋಷಿಸಲಾಗಿತ್ತು. ಜೆಇಇ ಅಡ್ವಾನ್ಸ್ಡ್​ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆಗಸ್ಟ್​​ 7 ಹಾಗೂ ಆಗಸ್ಟ್​ 11ರ ನಡುವೆ ಇರಲಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಆಗಸ್ಟ್ 12. ಜೆಇಇ ಅಡ್ವಾನ್ಸ್‌ಡ್‌ಗೆ ಹಾಜರಾಗುವ ಅಭ್ಯರ್ಥಿಗಳಿಗೆ, ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಲು ಆಗಸ್ಟ್ 23 ರಿಂದ 28, 2022 ರವರೆಗೆ ಅವಕಾಶವಿರಲಿದೆ. ಹಾಲ್ ಟಿಕೆಟ್‌ಗಳು ಅಧಿಕೃತ ವೆಬ್‌ಸೈಟ್-jeeadv.ac.in ನಲ್ಲಿ ಲಭ್ಯವಿರುತ್ತದೆ.


ಜೆಇಇ ಅಡ್ವಾನ್ಸ್ಡ್​​ ಪರೀಕ್ಷೆಗಳನ್ನು ಎರಡು ಪಾಳಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪೇಪರ್​ 1 ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 2:30ರಿಂದ ಸಂಜೆ 5:30ರವರೆಗೆ ಪೇಪರ್​ 2 ಇರಲಿದೆ.
ಅಲ್ಲದೇ ಜೆಇಇ ತಾತ್ಕಾಲಿಕ ಕೀ ಉತ್ತರ ಪತ್ರಿಕೆಗಳ ಬಿಡುಗಡೆಗೆ ಸೆಪ್ಟೆಂಬರ್​ 3ನೇ ತಾರೀಖನ್ನು ನಿಗದಿಪಡಿಸಲಾಗಿದೆ. ಇದಾದ ಬಳಿಕ ಅಭ್ಯರ್ಥಿಗಳಿಗೆ ತಾತ್ಕಾಲಿಕ ಆನ್ಸರ್​ ಕೀಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.


ಅಲ್ಲದೇ ಜೆಇಇ ತಾತ್ಕಾಲಿಕ ಕೀ ಉತ್ತರ ಪತ್ರಿಕೆಗಳ ಬಿಡುಗಡೆಗೆ ಸೆಪ್ಟೆಂಬರ್​ 3ನೇ ತಾರೀಖನ್ನು ನಿಗದಿಪಡಿಸಲಾಗಿದೆ. ಇದಾದ ಬಳಿಕ ಅಭ್ಯರ್ಥಿಗಳಿಗೆ ತಾತ್ಕಾಲಿಕ ಆನ್ಸರ್​ ಕೀಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಇವೆಲ್ಲದರ ಬಳಿಕ ಅಂತಿಮ ಉತ್ತರ ಕೀ ಮತ್ತು ಸೆಪ್ಟೆಂಬರ್ 11 ರಂದು ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಫಲಿತಾಂಶದ ಬಳಿಕ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಕಾರ್ಯವು ಸೆಪ್ಟೆಂಬರ್​ 12ರಿಂದ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.

ಇದನ್ನು ಓದಿ : CBSE Term 2 Exams : ಸಿಬಿಎಸ್​ಇ ಟರ್ಮ್ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ

ಇದನ್ನೂ ಓದಿ : Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ

JEE Advanced 2022 Rescheduled, Exam On August 28: Registration Begins From August 7

Comments are closed.