Protection of Women : ಮಹಿಳೆಯರ ಸುರಕ್ಷತೆಗಾಗಿ ಕಚೇರಿಯಲ್ಲೇ ದೂರು ಸಮಿತಿ : ದೌರ್ಜನ್ಯ ತಪ್ಪಿಸಲು ಮಹಿಳಾ ಆಯೋಗದ ಸಿದ್ಧತೆ

ಬೆಂಗಳೂರು : ಈಗ ಕಾಲ ಬದಲಾಗಿದೆ. ಪುರುಷರಷ್ಟೇ ಪ್ರಮಾಣದಲ್ಲಿ‌ಮಹಿಳೆಯರು ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದಾರೆ. ಆದರೆ ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ. ಹೀಗಾಗಿ ದುಡಿಯುವ‌ ಮಹಿಳೆಯರ ಸಹಾಯಕ್ಕೆ ಧಾವಿಸಿರೋ ಮಹಿಳಾ ಆಯೋಗ ನೊಂದವರ ರೋಧನೆಗೆ ಧ್ವನಿಯಾಗಲು ಸಿದ್ಧತೆ ನಡೆಸಿದೆ. ಹೌದು ಲಕ್ಷಾಂತರ ಸಂಖ್ಯೆಯಲ್ಲಿರೋ ಮಹಿಳಾ ಉದ್ಯೋಗಿಗಳಿಗೆ ಕೆಲಸ ಮಾಡೋ ಸ್ಥಳದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ (Protection of Women) ತಪ್ಪಿದ್ದಲ್ಲ. ಆದರೆ ಬಹುತೇಕ ಮಹಿಳೆಯರು ಮೇಲಾಧಿಕಾರಿಗಳಿಗೆ ಹೆದರಿ‌ ದೂರು ನೀಡದೆ ಸಹಿಸಿಕೊಂಡು ಹೋಗುವ ಸಂದರ್ಭಗಳು ಹೆಚ್ಚು.

ಇನ್ಮುಂದೆ ಇಂತಹ ಹಲವು ದೌರ್ಜನ್ಯಗಳಿಗೆ ಒಳಗಾಗಿ ಕೆಲಸ ಮಾಡುವವರ ಧ್ವನಿಯಾಗಲೆಂದೆ ಮಹಿಳಾ ಆಯೋಗ ಹೊಸ ಯೋಜನೆ ಜಾರಿಗೆ ತರಲು ಸಿದ್ಧವಾಗಿದೆ. ದೌರ್ಜನ್ಯದ ಸ್ಥಳದಲ್ಲೇ ನ್ಯಾಯ ದೊರಕಿಸುವ ಸಲುವಾಗಿ ಹೊಸ ಯೋಜನೆ ಒಂದನ್ನ ಜಾರಿಗೆ ತರಲಿದೆ. ಹೌದು, 2013ರ ಕೇಂದ್ರ ಸರ್ಕಾರದ ಅಧಿನಿಯಮ ಪ್ರಕಾರ ಖಾಸಗಿ ಅಥವಾ ಸರ್ಕಾರಿ ಕಛೇರಿಗಳಲ್ಲಿ 10 ಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುವ ಕಡೆ ಮಹಿಳಾ ನೌಕರರ ಸುರಕ್ಷತೆಗಾಗಿ ಆ ಸಂಸ್ಥೆಯಲ್ಲೇ ಒಂದು ಆಂತರಿಕ ದೂರು ಸಮಿತಿಯನ್ನ ರಚನೆ ಮಾಡಬೇಕೆಂಬ ನಿಯಮವಿದೆ.

ಆದರೆ ಬಹುತೇಕ ಕಡೆ ಈ ಸಮಿತಿ ಇನ್ನೂ ರಚನೆಯಾಗಿಲ್ಲ. ಈ ನಿಟ್ಟಿನಲ್ಲಿ ಈಗ ಮಹಿಳಾ ಆಯೋಗ (women commission) ಎಚ್ಚೆತ್ತುಕೊಂಡಿದ್ದು, ಪ್ರತಿ ಸಂಸ್ಥೆಯಲ್ಲೂ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ಸ್ಥಾಪನೆಗೆ ಮುಂದಾಗಿದೆ. ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತೊಂದರೆಗಳಾದಾಗ ನೇರವಾಗಿ ಮಹಿಳಾ ಆಯೋಗಕ್ಕೆ ಬಾರದೆ ಸಂಸ್ಥೆಯ ಆಂತರಿಕ ಸಮಿತಿಯಲ್ಲೇ ಮಹಿಳಾ ನೌಕರರು ದೂರು ಸಲ್ಲಿಸಬಹುದು. ದೂರು ಸ್ವೀಕಾರ ಮಾಡುವ ಸಮಿತಿ ಸಮಸ್ಯೆ ಆಳ ಅರಿತು ಬಗೆಹರಿಸಲು ಆ ಸಮಿತಿಯೇ ಮುಂದಾಗಬೇಕು.

ಒಂದೊಮ್ಮೆ ಆ ಸಮಿತಿಗೆ ಸಮಸ್ಯೆ ಬಗೆಹರಿಕೆ ಕಷ್ಟವಾದಲ್ಲಿ ನೇರವಾಗಿ ದೂರನ್ನ ಮಹಿಳಾ ಆಯೋಗಕ್ಕೆ ( women commission) ವರ್ಗಾಹಿಸಬೇಕು. ಜೊತೆಗೆ ಪ್ರತಿ ತಿಂಗಳು ಪ್ರತಿ ಸಂಸ್ಥೆಯ ಸಮಿತಿಯಿಂದ ಮಹಿಳಾ ಆಯೋಗ ಮಹಿಳೆಯರ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ಪಡೆಯಲಿದು ಪರಿಶೀಲಿಸಲಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮಾಹಿತಿ ನೀಡಿದ್ದಾರೆ.

ಇನ್ನು ಈ ವಿಚಾರವಾಗಿ ಈಗಾಗಲೇ ಕಳೆದ ನವೆಂಬರ್ ನಲ್ಲಿಯೇ 5500 ಕಂಪನಿಗಳಿಗೆ ನೊಟೀಸ್ ಕಳುಹಿಸಲಾಗಿದೆ. ನೊಟೀಸ್ ಪಡೆದ ಕಂಪನಿಗಳಲ್ಲಿ 1850 ಕಂಪನಿಗಳು ಈ ಬಗ್ಗೆ ಪ್ರತಿಕ್ರಿಯೇ ನೀಡಿದ್ದು, ಉಳಿದ ಕಂಪನಿಗಳಿಗೆ ಮುಂದಿನ ತಿಂಗಳಿಂದ ಮತ್ತೊಮ್ಮೆ ನೊಟೀಸ್ ನೀಡಿ ಅವುಗಳಿಂದ ಸಮಿತಿ ರಚನೆ ಬಗ್ಗೆ ಮಾಹಿತಿ ಪಡೆಯಲು ಚಿಂತನೆ ನಡೆಸಿದೆ.

ಇದನ್ನೂ ಓದಿ : ಸಂತೋಷ್ ಪಾಟೀಲ್ ತಂಗಿದ್ದ ಹೊಟೇಲ್ ನಲ್ಲಿ ಏನಾಯ್ತು? ಇಲ್ಲಿದೆ Exclusive Details

ಇದನ್ನೂ ಓದಿ : ಸಪ್ತಪದಿ ಸಾಮೂಹಿಕ ವಿವಾಹ : ಯೋಜನೆ ಮತ್ತೆ ಆರಂಭಿಸಿದ ಸರ್ಕಾರ

Complaints Committee at the Office for the Protection of Women

Comments are closed.