JEE Advanced 2022 Result:JEE ಅಡ್ವಾನ್ಸ್ಡ್ 2022 ಫಲಿತಾಂಶ ಪ್ರಕಟ : ಶಿಶಿರ್ ಆರ್‌ಕೆ ಟಾಪರ್

ನವದೆಹಲಿ : (JEE Advanced 2022 Result)ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಐಟಿ ಬಾಂಬೆ ಜೆಇಇ (JEE)ಅಡ್ವಾನ್ಸ್ಡ್ ಫಲಿತಾಂಶ 2022 ಅನ್ನು ಪ್ರಕಟಿಸಿದೆ. ಅಲ್ಲದೇ ಅಗ್ರ ಶ್ರೇಯಾಂಕಿತರ ಪಟ್ಟಿಯನ್ನು ಪ್ರಕಟಿಸಿದೆ. ಈ ಪೈಕಿ ಶಿಶಿರ್ ಆರ್‌ಕೆ ಅವರು (ITI)ಐಐಟಿ (JEE)ಜೆಇಇ ಫಲಿತಾಂಶದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

(JEE Advanced 2022 Result)(ITI)ಐಐಟಿ ಮುಂಬೈ JEE ಅಡ್ವಾನ್ಸ್ಡ್ ಫಲಿತಾಂಶ 2022 ಅನ್ನು ಪ್ರಕಟಿಸಿದೆ. ಫಲಿತಾಂಶ ಮತ್ತು ಅಂತಿಮ ಉತ್ತರದ ಕೀಗಳನ್ನು ಐಐಟಿ ಬಾಂಬೆಯು ಅಧಿಕೃತ ವೆಬ್‌ಸೈಟ್ jeeadv.ac.in ನಲ್ಲಿ ಬಿಡುಗಡೆ ಮಾಡಿದೆ. (JEE)ಜೆಇಇ ಅಡ್ವಾನ್ಸ್ಡ್ 2022 ರ ಟಾಪರ್‌ಗಳ ಪಟ್ಟಿಯಲ್ಲಿ ಶಿಶಿರ್ ಆರ್‌ಕೆ ಅವರು ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. ತನಿಷ್ಕಾ ಕಬ್ರಾ ಮಹಿಳೆಯ ವಿಭಾಗದಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನದಲ್ಲಿ ಪೋಲು ಲಕ್ಷ್ಮಿ ಸಾಯಿ ಲೋಹಿತ್ ರೆಡ್ಡಿ ಸ್ಥಾನ ಪಡೆದುಕೊಂಡಿದ್ದಾರೆ.

JEE ಅಡ್ವಾನ್ಸ್ಡ್ 2022 JEE ಫಲಿತಾಂಶದ ಟಾಪರ್ ಪಟ್ಟಿ:

1 ಶಿಶಿರ್ ಆರ್ ಕೆ

2 ಪೋಲು ಲಕ್ಷ್ಮಿ ಸಾಯಿ ಲೋಹಿತ್ ರೆಡ್ಡಿ

3 ಥಾಮಸ್ ಬಿಜು ಚೀರಂವೇಲಿಲ್

4 ವಂಗಪಲ್ಲಿ ಸಾಯಿ ಸಿದ್ಧಾರ್ಥ

5 ಮಯಾಂಕ್ ಮೋಟ್ವಾನಿ

6 ಪೋಲಿಸೆಟ್ಟಿ ಕಾರ್ತಿಕೇಯ

7 ಪ್ರತೀಕ್ ಸಾಹೂ

8 ಧೀರಜ್ ಕುರುಕುಂದ

9 ಮಹಿತ್ ಗಾಧಿವಾಲಾ

10 ವೆಚ್ಚ ಜ್ಞಾನ ಮಹೇಶ್

2021 ರಲ್ಲಿ, ಮೃದುಲ್ ಅಗರ್ವಾಲ್, ಧನಂಜಯ್ ರಾಮನ್ ಮತ್ತು ಅನಂತ್ ಲೂನಿಯಾ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದರು. 2020 ರಲ್ಲಿ, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಮೊದಲ ಮೂರು ಶ್ರೇಣಿಗಳನ್ನು ಚಿರಾಗ್ ಫಾಲೋರ್, ಗಂಗೂಲ ಭುವನ್ ರೆಡ್ಡಿ ಮತ್ತು ವೈಭವ್ ರಾಜ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಆನ್‌ಲೈನ್ ಪದವೀಧರರಿಗೆ ಗುಡ್‌ನ್ಯೂಸ್‌ ಕೊಟ್ಟ ಯುಜಿಸಿ : ದೂರ ಶಿಕ್ಷಣ ಪದವಿ ಇನ್ಮುಂದೆ ರೆಗ್ಯುಲರ್‌ ಪದವಿಗೆ ಸಮಾನ

ಇದನ್ನೂ ಓದಿ: ನೀಟ್‌ ಯುಜಿ ಪರೀಕ್ಷಾ 2022 ಪ್ರಕಟ ; ರಾಜಸ್ಥಾನದ ತನಿಷ್ಕಾಗೆ 99.99% ಅಂಕ ಅಗ್ರಸ್ಥಾನ

ಜೆಇಇ ಅಡ್ವಾನ್ಸ್ಡ್ 2022 ಅನ್ನು ಈ ವರ್ಷ ಐಐಟಿ ಬಾಂಬೆ ನಡೆಸಿತು. ಆಗಸ್ಟ್ 28ರಂದು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸಿದ JEE ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು IIT ಗೆ ಪ್ರವೇಶಕ್ಕಾಗಿ ಈ ಪರೀಕ್ಷೆಗೆ ಹಾಜರಾಗಿದ್ದರು.

JEE Advanced 2022 Result declared: Shishir RK topper, check full list

Comments are closed.