Karnataka 2nd PUC Result : ದ್ವಿತೀಯ ಪಿಯುಸಿ ಟಾಪರ್​ಗಳು ಹಾಗೂ ಜಿಲ್ಲಾವಾರು ಟಾಪ್​​ ಲಿಸ್ಟ್​ ಇಲ್ಲಿದೆ ನೋಡಿ

Karnataka 2nd PUC Result : ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ದಾಖಲಾಗಿದೆ. ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರ ಮಾಹಿತಿ ಇಲ್ಲಿದೆ ನೋಡಿ :

ವಿಜ್ಞಾನ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 598 ಅಂಕಗಳನ್ನು ಪಡೆದು ಸಿಮ್ರಾನ್​ ಶೇಷರಾವ್​, ಮೊಹಮ್ಮದ್​ ರಫೀಕ್, ಸಾಯಿ ಚಿರಾಗ್​ ಹಾಗೂ ಶ್ರೀಕೃಷ್ಣ ಪೇಜತಾಯ ವಿಜ್ಞಾನ ವಿಭಾಗದಲ್ಲಿ ಟಾಪರ್​ ಎನಿಸಿದ್ದಾರೆ. ಕಲಾ ವಿಭಾಗದಲ್ಲಿ ಶ್ವೇತಾ ಭೀಮಶಂಕರ ಬೈರಕೊಂಡ, ಕೊಟ್ಟುರು ಸರ್ಕಾರಿ ಪಿಯು ಕಾಲೇಜಿ ಸಹನಾ 600ಕ್ಕೆ 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನವ್​ ವಿನಯ್​ ಕೇಜ್ರಿವಾಲ್​ 600ಕ್ಕೆ 596 ಅಂಕ ಪಡೆದು ಪ್ರಥಮ ಸ್ಥಾನ ಸಂಪಾದಿಸಿದ್ದಾರೆ.

ಜಿಲ್ಲಾವಾರು ಫಲಿತಾಂಶ :

ಕರ್ನಾಟಕ ರಾಜ್ಯದ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಪಿಯುಸಿ ಫಲಿತಾಂಶದಲ್ಲಿ ದ. ಕನ್ನಡ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಕಳೆದ ಶೈಕ್ಷಣಿಕ ವರ್ಷದಲ್ಲಿಯೂ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಸಂಪಾದಿಸಿತ್ತು. ಆದರೆ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾವಾರು ಫಲಿತಾಂಶ ಕುಸಿತ ಕಂಡಿದೆ. ಆದರೂ ಸಹ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆ ಶೇ. 90.71 ಫಲಿತಾಂಶವನ್ನು ಸಂಪಾದಿಸಿತ್ತು ಈ ಬಾರಿ ಶೇ.88.02ಕ್ಕೆ ಕುಸಿತ ಕಂಡಿದೆ. ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯಿದೆ.ಮೂರನೇ ಸ್ಥಾನವನ್ನು ವಿಜಯಪುರ ಜಿಲ್ಲೆ ಪಡೆದುಕೊಂಡಿದೆ. ಕೊನೆಯ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆಯಿದ್ದು ಶೇಕಡಾ 49.31 ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದನ್ನು ಓದಿ : Big Exclusive : ಇದೇ ವರ್ಷ ಸುನಿಲ್ ಶೆಟ್ಟಿ ಮಗಳೊಂದಿಗೆ ಕೆ.ಎಲ್ ರಾಹುಲ್ ಮದುವೆ ?

ಇದನ್ನೂ ಓದಿ : ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?

Karnataka 2nd PUC Result : Dakshin Kannada District First

Comments are closed.