ನಿತ್ಯಭವಿಷ್ಯ : ಹೇಗಿದೆ ನಿಮ್ಮ ಜಾತಕಫಲ, ನಿಮಗೆ ಅದೃಷ್ಟ ತರುವ ಸಂಖ್ಯೆ ಯಾವುದು ಗೊತ್ತಾ ?

ಮೇಷರಾಶಿ
ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ. ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವುದು.
ಅದೃಷ್ಟ ಸಂಖ್ಯೆ : 7

ವೃಷಭರಾಶಿ
ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುವುದು. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ ಸಮಾರಂಭ ಗಳಲ್ಲಿ ಭಾಗಿಯಾಗುವ ಯೋಗವಿದೆ. ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ
ಅದೃಷ್ಟ ಸಂಖ್ಯೆ : 1

ಮಿಥುನರಾಶಿ
ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವುದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ. ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ.
ಅದೃಷ್ಟ ಸಂಖ್ಯೆ : 4

ಕರ್ಕಾಟಕರಾಶಿ
ಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯುವುದು. ಲಾಭದಾಯಕ ಹುದ್ದೆ ದೊರೆಯುವುದು.
ಅದೃಷ್ಟ ಸಂಖ್ಯೆ : 4

ಸಿಂಹರಾಶಿ
ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿ ಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲ ಕೊಡುವುದು.
ಅದೃಷ್ಟ ಸಂಖ್ಯೆ : 8

ಕನ್ಯಾರಾಶಿ
ದೂರಾಲೋಚನೆ ಮಾಡಿ ಕಾರ್ಯ ನಿರ್ವಹಿಸಿರಿ. ವೃತ್ತಿ ಪರೆತೆಯಿಂದ ಕಾರ್ಯ ಕೈಗೂಡುವುದು. ಪರಿವಾರ ದೊಂದಿಗೆ ದೂರ ಪ್ರವಾಸದ ಯೋಗವಿದೆ. ನೆಮ್ಮದಿಯ ಜೀವನ ಇರುವುದು. ಉದ್ಯೋಗವನ್ನು ವಿಸ್ತರಿಸುವ ಕಾಲ ಇರುವುದು.
ಅದೃಷ್ಟ ಸಂಖ್ಯೆ : 3

ತುಲಾರಾಶಿ
ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಮಂದಗತಿ ಇರುವುದು. ವ್ಯಾಪಾರದಲ್ಲಿ ಜಾಗರೂಕತೆ ಅವಶ್ಯ. ಹಾನಿ ತಡೆಗಟ್ಟುವ ಪ್ರಯತ್ನಕ್ಕೆ ಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶುಭಫಲವಿದೆ.
ಅದೃಷ್ಟ ಸಂಖ್ಯೆ :  6

ವೃಶ್ಚಿಕರಾಶಿ
ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಸಂಕಷ್ಟ ದೂರಾಗುವುದು.
ಅದೃಷ್ಟ ಸಂಖ್ಯೆ : 8

ಧನುರಾಶಿ
ಆಸ್ತಿ ಖರೀದಿ ಅಥವಾ ಮಾರಾಟದ ವ್ಯವಹಾರಗಳು ಕುದುರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಯೋಗ್ಯತೆ ಮೀರಿ ದುಡಿಯುವ ಕಾರ್ಯಭಾರವಿರುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಯೋಗವಿದೆ.
ಅದೃಷ್ಟ ಸಂಖ್ಯೆ : 2

ಮಕರರಾಶಿ
ವ್ಯವಹಾರಿಕ ಏಳಿಗೆ ಇರುವುದು. ದೂರ ಪ್ರಯಾಣದ ಸಂಭವ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ವಿವಿಧ ಸೌಭಾಗ್ಯಪ್ರಾಪ್ತಿ. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ವಾಹನ, ಮಶಿನರಿಗಳಿಂದ ತೊಂದರೆ.
ಅದೃಷ್ಟ ಸಂಖ್ಯೆ : 5

ಕುಂಭರಾಶಿ
ದೂರ ಪ್ರಯಾಣದ ಅವಶ್ಯಕತೆ ಕಂಡುಬರುವುದು. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ಮಶಿನರಿಗಳಿಂದ ತೊಂದರೆ ಸಾಧ್ಯತೆ.
ಅದೃಷ್ಟ ಸಂಖ್ಯೆ : 7

ಮೀನರಾಶಿ
ಮಹತ್ತರ ಯೋಜನೆಗಳು ಕಾರ್ಯಗತವಾಗಲು ಪ್ರಾಜ್ಞರ ಮಾರ್ಗದರ್ಶನ. ಜೀವನದ ಏಳಿಗೆಗೆ ಚಿಂತನೆ. ಕೆಲಸದ ನಡುವೆ ಮತ್ತೊಂದು ಕಾರ್ಯವಹಿಸಿಕೊಳ್ಳಲು ಚೈತನ್ಯ. ಮಹಿಳೆಯರು ಪಶ್ಚಾತಾಪಕ್ಕೆ ಅವಕಾವಿಲ್ಲದಂತೆ ನಡೆದುಕೊಳ್ಳುವುದು ಒಳಿತು.
ಅದೃಷ್ಟ ಸಂಖ್ಯೆ : 1

ಶುಭಂಭವತು
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Comments are closed.