ಕೊರೊನಾ ಸಂಕಷ್ಟದ ನಡುವಲ್ಲೇ ವಿದ್ಯಾರ್ಥಿಗಳಿಗೆ ಶಾಕ್ : ವೈದ್ಯಕೀಯ, ದಂತ ವೈದ್ಯ ಕೊರ್ಸ್ ಶುಲ್ಕ ಹೆಚ್ಚಿಸಿದ ಸರಕಾರ

0

ಬೆಂಗಳೂರು : ಕೊರೊನಾ ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ರಾಜ್ಯ ಸರ್ಕಾರವು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದ್ದು, ಸ್ನಾತಕೋತ್ತರ ಮತ್ತು ದಂತವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಸೋ ಮೂಲಕ ಗಾಯದ ಮೇಲೆ ಬರೆ ಎಳೆದಿದೆ.

2020-21ನೇ ಸಾಲಿನ ಪ್ರವೇಶಾತಿಯಲ್ಲಿ ನೂತನ ಶುಲ್ಕ ಅನ್ವಯವಾಗಿದೆ. ಖಾಸಗಿ ಕೋಟಾದ ಸೀಟುಗಳಿಗೆ ಶೇ. 30 ಮತ್ತು ಸರ್ಕಾರಿ ಕೋಟಾದ ಸೀಟುಗಳಿಗೆ ಶೇ. 20 ರಷ್ಟು ಶುಲ್ಕ ಹೆಚ್ಚಳ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರಿ ಕೋಟಾದ ಕ್ಲಿನಿಕಲ್ ವಿಭಾಗದ ವಿದ್ಯಾರ್ಥಿಗಳು 6,98,280 ರೂ. ಪ್ಯಾರಾ ಕ್ಲಿನಿಕಲ್ ವಿದ್ಯಾರ್ಥಿಗಳು 1,74,570 ರೂ. ಹಾಗೂ ಪ್ರಿ-ಕ್ಲಿನಿಕಲ್ ವಿದ್ಯಾರ್ಥಿಗಳು 87,286 ರೂ. ಶುಲ್ಕ ಪಾವತಿಸಬೇಕು.

ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಗೆ ಖಾಸಗಿ ಕೋಟಾದ ವಿದ್ಯಾರ್ಥಿಗಳು 6,05,176 ರೂ. ಸರ್ಕಾರಿ ಕೋಟಾದ ಅಭ್ಯರ್ಥಿಗಳು 3,57,076 ರೂ. ಪಾವತಿಸಬೇಕು.

ರಾಜ್ಯದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ ಖಾಸಗಿ ಕೋಟದಡಿ ಆಯ್ಕೆಯಾದ ಕ್ಲಿನಿಕಲ್ ವಿಭಾಗದ ವಿದ್ಯಾರ್ಥಿಗಳು ಒಟ್ಟು 11,34,705 ರೂ. ಪಾವತಿ ಮಾಡಬೇಕು.

ಪ್ಯಾರಾಕ್ಲಿನಿಕಲ್ ವಿದ್ಯಾರ್ಥಿಗಳು 2,83,677 ರೂ. ಹಾಗೂ ಪ್ರಿ ಕ್ಲಿನಿಕಲ್ ವಿದ್ಯಾರ್ಥಿಗಳು 1,42,698 ರೂ. ಶುಲ್ಕ ಪಾವತಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಹೊರಡಿಸಿರುವ ಅದೇಶದಲ್ಲಿ ತಿಳಿಸಲಾಗಿದೆ.

Leave A Reply

Your email address will not be published.