ಕೊನೆಗೂ ಎಂಟ್ರಿ ಕೊಟ್ಟ ಜೂ. ರಾಜಾಹುಲಿ : ವೈರಲ್ ಆಗ್ತಿದೆ ರಾಕಿಂಗ್ ಸ್ಟಾರ್ ಯಶ್ ಕ್ಯೂಟ್ ಫ್ಯಾಮಿಲಿ ಪೋಟೋ

0

ಬೆಂಗಳೂರು : ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿಗೆ ಗಂಡು ಮಗು ಜನಿಸಿದ್ದು ಹಳೆ ವಿಚಾರ. ಆದ್ರೆ ಬರೋಬ್ಬರಿ ಆರು ತಿಂಗಳ ನಂತರ ಜೂನಿಯರ್ ಯಶ್ ರಾಕಿಂಗ್ ಸ್ಟಾರ್ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.

ರಾಜಾಹುಲಿ ತನ್ನ ಮುದ್ದಾದ ಮಗನ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಕ್ಯೂಟ್ ಫ್ಯಾಮಿಲಿಯ ಕ್ಯೂಟೆಸ್ಟ್ ಪೋಟೋ ಇದೀಗ ಬಾರೀ ವೈರಲ್ ಆಗ್ತಿದೆ. ಈ ಹಿಂದೆ ಮಗಳು ಐರಾ ಜೊತೆಗಿರುವ ಮಗ ಅರ್ಧಮುಖ ಕಾಣಿಸುವ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ರಾಧಿಕಾ ಪಂಡಿತ್ ಹರಿಬಿಟ್ಟಿದ್ದರು.

ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪುತ್ರನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ನಟಿ ರಾಧಿಕಾ ಪಂಡಿತ್ ತನ್ನ ಮಗನ ಪೋಟೋಗೆ “ಇವನೇ ನಮ್ಮ ಕುಟುಂಬದ ಕಾಮನಬಿಲ್ಲು, ಅಮ್ಮನ ಮುದ್ದಿನ ಮಗ. ನಮ್ಮ ಜ್ಯೂನಿಯರ್ ಯಶ್‍ಗೆ ನಿಮ್ಮಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು” ಅಂತಾ ಬರೆದುಕೊಂಡಿದ್ರೆ.

https://www.instagram.com/p/B_mjSb9AJTb/

ಯಶ್ ಕೂಡ ಸೇಮ್ ಪೋಟೋವನ್ನು ಅಪ್ ಮಾಡಿದ್ದು,“ನಿಮ್ಮ ಪ್ರೀತಿ, ಆಶೀರ್ವಾದ, ಹಾರೈಕೆ ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ”ಎಂದು ಪ್ರೀತಿಯಿಂದ ಹೇಳಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪೋಟೋವನ್ನು ಅಪ್ಲೋಡ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಕಮೆಂಟ್ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

https://www.instagram.com/p/B_oXN93JKKw/

ಇನ್ನು ಯಶ್ – ರಾಧಿಕಾ ದಂಪತಿ ಮಗಳು ಐರಾ ಹಾಗೂ ಮಗನ ಜೊತೆಗೆ ಒಟ್ಟಾಗಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋದಲ್ಲಿ ಎಲ್ಲರೂ ಬ್ಲಾಕ್ ಆ್ಯಂಡ್ ವೈಟ್ ಕಾಂಬಿನೇಷನ್‍ನಲ್ಲಿ ಉಡುಪು ಧರಿಸಿದ್ದು, ರಾಧಿಕಾ ಅವರು ತಮ್ಮ ಮುದ್ದು ಮಗನನ್ನು ಎತ್ತಿಕೊಂಡಿದ್ದಾರೆ.

ಇನ್ನೂ ಯಶ್ ಒಂದು ಕೈಯಲ್ಲಿ ಮಗಳನ್ನು ಎತ್ತಿಕೊಂಡಿದ್ದು, ಇನ್ನೊಂದು ಕೈಯಲ್ಲಿ ರಾಧಿಕಾರನ್ನು ಅಪ್ಪಿಕೊಂಡಿದ್ದಾರೆ. ದಂಪತಿಗಳ ಪೋಟೋ ಸಖತ್ ಕ್ಯೂಟ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗ್ತಿದೆ.

Leave A Reply

Your email address will not be published.