Parenting Tips : ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾರೆಯೇ?

ಕೆಲವೊಮ್ಮೆ ಪರೀಕ್ಷೆಗಾಗಿ ಚೆನ್ನಾಗಿ ತಯಾರಿ ಮಾಡಿದ್ದರೂ ವಿದ್ಯಾರ್ಥಿಗಳು ಕಡಿಮೆ ಅಂಕ ಅಥವಾ ಫೇಲ್‌ ಆಗುವುದು ಸಹಜ. ಅನಾರೋಗ್ಯದ ಕಾರಣದಿಂದಲೋ ಪರೀಕ್ಷೆಯ ಭಯದಿಂದಲೋ ಅಥವಾ ಓವರ್‌ ಕಾನ್ಫಿಡೆನ್ಸ್‌ನಿಂದಲೋ ಅಂತಹ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಅದು ಬಹಳ ಕೆಟ್ಟ ಅನುಭವವೂ ಮತ್ತು ಮುಜುಗರ ತರುವುದೂ ಹೌದು. ಆದರೆ ಅದೇ ಕೊನೆಯಲ್ಲ ಅಲ್ಲವೇ? ಮತ್ತೆ ತಯಾರಿ ನಡೆಸಿ ಒಳ್ಳೆಯ ಅಂಕಗಳಿಸಬಹುದು. ಅದಕ್ಕಾಗಿ ಹಲವಾರು ದಾರಿಗಳಿವೆ. ಉತ್ತಮ ಮಾರ್ಗದರ್ಶನ, ಸಲಹೆ ಮತ್ತು ಒಂದಿಷ್ಟು ಪ್ರೋತ್ಸಾಹ ಅವರಿಗೆ ಬೇಕಾಗಬಹುದು. ಮಾನಸಿಕ ಸ್ಥಿರತೆಯೂ ಅವಶ್ಯಕ. ಫೇಲಾದ ಅಥವಾ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳನ್ನು ಹೀಯಾಳಿಸುವ ಬದಲು ಅವರ ಸಮಸ್ಯೆ ಅರಿಯುವುದು ಒಳ್ಳೆಯದು. ಮುಂದೆ ಓದಲು ಪ್ರೋತ್ಸಾಹಿಸಿವುದು ಪಾಲಕರ ಕರ್ತವ್ಯ(Parenting Tips).

ಕಡಿಮೆ ಅಂಕ ಅಥವಾ ಫೇಲ್‌ ಆಗಿರುವ ವಿದ್ಯಾರ್ಥಿಗಳ ಪಾಲಕರಿಗೆ ಕೆಲವು ಟಿಪ್ಸ್‌ :

  • ಅವರಿಗೆ ಸಹಾಯ ಮಾಡಿ :
    ಎಂದೂ ಫೇಲ್‌ ಆಗದವರಿಗೆ ಅಂತಹ ಸಂದರ್ಭಗಳು ಎದುರಾದಾಗ ಬಹಳ ಬೇಸರವಾಗುವುದು ಸಹಜ. ಅಂತಹವರಿಗೆ ಈ ರೀತಿಯ ಸನ್ನಿವೇಶಗಳು ಜೀವನದಲ್ಲಿ ಬಂದೇ ಬರುತ್ತವೆ ಎಂಬುದನ್ನು ಮನವರಿಕೆ ಮಾಡಿ ಕೊಡಿ.

ಇದನ್ನೂ ಓದಿ :sslc result 2022 announced : ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ ಬಾಲಕಿಯರು

  • ಅವರಿಗೆ ಸಮಯ ಕೊಡಿ :
    ಸ್ವಲ್ಪ ಸಮಯ ಅವರು ಅಪ್ಸೆಟ್‌ ಆಗಬಹುದು, ಅಥವಾ ಪರೀಕ್ಷೆ ಮತ್ತು ತರಗತಿಗಳನ್ನು ದೂಷಿಸಬಹುದು. ಮೌನದಿಂದ ಅವರ ಮಾತು ಆಲಿಸಿ. ಅವರ ಭಾವನೆಗಳನ್ನು ಹೊರಹಾಕಲು ಬಿಡಿ. ಕ್ರಮೇಣ ಅವರ ತಪ್ಪುಗಳನ್ನು ತಿಳಿಸಿ ಕೊಡಿ.
  • ಇದೇ ಕೊನೆಯಲ್ಲ ಎಂದು ತಿಳಿಸಿ:
    ಬಹಳಷ್ಟು ಜನರು ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ಫೇಲ ಆಗುವುವರು ಮುಂದೆ ಜೀವನದಲ್ಲೂ ಫೇಲ್‌ ಆಗುತ್ತಾರೆ ಎಂದು ತಪ್ಪಾಗಿ ನಂಬಿರುತ್ತಾರೆ. ಅದು ಸುಳ್ಳು, ಇದು ಒಂದು ಪರೀಕ್ಷೆ ಇದೇ ಕೊನೆಯಲ್ಲ ಎಂದು ತಿಳಿಸಿ.
  • ಧನಾತ್ಮಕ ಉದಾಹರಣೆಗಳನ್ನು ನೀಡಿ ಮತ್ತು ಮುಂದೆ ಓದಲು ಪ್ರೋತ್ಸಾಹಿಸಿ :
    ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದರೂ ಮುಂದೆ ಒಳ್ಳೆಯ ಅಂಕ ಪಡೆದವರ ಉದಾಹರಣೆ ನೀಡಿ. ಅವರ ಸತತ ಪ್ರಯತ್ನಗಳು ಹೇಗೆ ಮಾದರಿಯಾಗಬಲ್ಲದು ಎಂದು ತಿಳಿಸಿಕೊಡಿ. ಹೆಚ್ಚೆಚ್ಚು ಓದಲು ಪ್ರೋತ್ಸಾಹಿಸಿ. ಹಿಂದಿನ ತಪ್ಪುಗಳನ್ನು ಪುನಃ ಮಾಡದಂತೆ ಎಚ್ಚರಿಸಿ.

ಇದನ್ನೂ ಓದಿ : What Next After SSLC or 10th : ಎಸ್‌ಎಸ್‌ಎಲ್‌ಸಿ  ನಂತರ ಮುಂದೇನು?

(Parenting Tips help your children who are facing exam failure situation)

Comments are closed.