Weather And Allergies : ವೆದರ್‌ ಚೇಂಜ್‌ ನಿಂದ ಅಲರ್ಜಿ ಹೆಚ್ಚಾಗಿದೆಯಾ? ಇಲ್ಲಿ ಹೇಳಿರುವ ಟಿಪ್ಸ್‌ ಪಾಲಿಸಿ

ವರ್ಷದಲ್ಲಿ ಋತುಮಾನದ ಬದಲಾವಣೆಯ ಕಾಲವೇ ಬಹಳಷ್ಟು ಜನರು ಅಲರ್ಜಿ(Weather And Allergies) ಎದುರಿಸುವ ದಿನಗಳು. ಹವಾಮಾನವು ನಿಮ್ಮ ಅಲರ್ಜಿಯ ಮೇಲೆ ಬಹಳ ಪರಿಣಾಮ ಬೀರಬಹುದು ಎಂದರೆ ನಿಮಗೆ ಆಶ್ಚರ್ಯವಾಗುಬಹುದು. ಮಳೆಯ ದಿನಗಳಲ್ಲಿ ದೇಹ ಭಾರವೆನಿಸುವುದು, ಗಾಳಿ ಇರುವಾಗ ಕಣ್ಣುಗಳಿಂದ ನೀರು ಬರುವುದು ಅಥವಾ ಕಣ್ಣು ಒಣಗಿದಂತಾಗುವುದು ಇವೆಲ್ಲವು ಹವಾಮಾನದಿಂದ ಬರುವ ಅಲರ್ಜಿಗಳು.

ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯು ಅದಕ್ಕೆ ಪೂರಕವಲ್ಲದ ಬೇರೆ ವಸ್ತುಗಳು ದೇಹಕ್ಕೆ ಸೇರಿಕೊಂಡಾಗ ಅಲರ್ಜಿ ಉಂಟಾಗುತ್ತದೆ. ಅದರ ಲಕ್ಷಣಗಳು ಮೂಲದಲ್ಲಿ ಕಡಿಮೆ ಎನಿಸಿದರೂ, ಕ್ರಮೇಣ ಚಿಕತ್ಸೆ ಅಗತ್ಯವಾಗಬಹುದು.

ಹವಾಮಾನದ ಹಠಾತ್‌ ಬದಲಾವಣೆಯಿಂದ ಅಲರ್ಜಿಯ ಲಕ್ಷಣಗಳು ಸಹ ಕೆಟ್ಟದಾಗಿರಬಹುದು. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಶೀತ, ಕೆಮ್ಮು, ಅಸ್ತಮಾ ಉಲ್ಭಣಿಸಬಹುದು. ಅದಕ್ಕಾಗಿ ಇಲ್ಲಿದೆ ಕೆಲವು ಮನೆಮದ್ದುಗಳು.

  • ಶುಂಠಿ ಮತ್ತು ಜೇನುತುಪ್ಪ :
    ಇದು ಅತ್ತಯಂತ ಹಳೆಯ ಮನೆಮದ್ದಾಗಿದೆ. ಇದು ಗಂಟಲು ಮತ್ತು ಕೆಮ್ಮಿಗೆ ರಾಮಬಾಣವಿದ್ದಂತೆ. ಕಟ್ಟಿದ ಮೂಗು ಮತ್ತು ಮೂಗು ಸೋರುವುದಕ್ಕೂ ಉತ್ತಮ. ಒಂದು ಚಮಚ ಶುಂಠಿ ರಸವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರಸಿ ಕುಡಿಯಿರಿ. ಒಂದು ಚಮಚ ಜೇನುತುಪ್ಪವನ್ನು ಹಾಗೇ ಸೇವಿಸುವುದೂ ಕೂಡಾ ಗಂಟಲು ತುರುಕೆಯನ್ನು ಬೇಗನೆ ಶಮನಗೊಳಿಸುವುದು.
  • ಬೆಳ್ಳುಳ್ಳಿ :
    ಆಂಟಿಮೈಕ್ರೊಬೈಲ್‌ ಗುಣವಿರುವ ಬೆಳ್ಳುಳ್ಳಿ ಕೂಡಾ ಉತ್ತಮವಾಗಿದೆ. ಇದು ಶೀತ ನಿವಾರಣೆಗೆ ಸಹಾಯಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಹಸಿ ಬೆಳ್ಳುಳ್ಳಿಯನ್ನು ಚೆನ್ನಾಗಿ ಅಗಿದು ತಿನ್ನುವುದು ಡಯಾಬಿಟೀಸ್‌ ರೋಗಿಗಳಿಗೆ ಉತ್ತಮವಾಗಿದೆ. ಅಡುಗೆ ಮತ್ತು ಸೂಪ್‌ಗಳಲ್ಲಿ ಬಳಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಶೀತ ನಿವಾರಣೆಯಾಗುತ್ತದೆ.
  • ಮಸಾಲಾ ಟೀ :
    ವಾತಾವರಣ ಬದಲಾದಾಗ ಬಿಸಿ ಬಿಸಿಯಾಗಿ ಏನಾದರೂ ಕುಡಿಯಬೇಕು ಎನಿಸುವುದು ಸಹಜ. ಮಸಾಲಾ ಟೀ ಅದಕ್ಕೆ ಉತ್ತಮವಾಗಿದೆ. ತುಳಸಿ, ಶುಂಠಿ, ಕಾಳುಮೆಣಸು ಸೇರಿಸಿ ಚಹಾ ಮಾಡಿ ಕುಡಿಯಿರಿ. ಕೆಮ್ಮು ಮತ್ತು ಶೀತಕ್ಕೆ ಒಳ್ಳೆಯ ಮನೆಮದ್ದು.
  • ಬಿಸಿ ನೀರು :
    ಶೀತ ಹೆಚ್ಚಾಗಿ ತೆಲೆನೋವು, ಮೈ ಭಾರ ಎನಿಸಿದರೆ ಆಗಾಗ ಬಿಸಿನೀರು ಕುಡಿಯಿರಿ. ದಿನಕ್ಕೊಂದು ಸಲವಾದರೂ ಸ್ಟೀಮ್‌ ತೆಗೆದುಕೊಳ್ಳಿ. ಕಟ್ಟಿದ ಮೂಗು, ಗಂಟಲಿಗೆ ಆರಾಮವೆನಿಸುತ್ತದೆ. ಚಿನ್ನಾಗಿ ನಿದ್ರಿಸಿ.

ಇದನ್ನೂ ಓದಿ :Ginger Health Benefits: ಹಸಿ ಶುಂಠಿಯಷ್ಟೇ ಅಲ್ಲಾ, ಒಣ ಶುಂಠಿಯೂ ಉಪಕಾರಿ; ಹಸಿ ಹಾಗೂ ಒಣ ಶುಂಠಿಯ ಪ್ರಯೋಜನಗಳೇನು ಗೊತ್ತಾ!

ಇದನ್ನೂ ಓದಿ:turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ

(Weather And Allergies and how it affects upon us)

Comments are closed.