ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ದೊಡ್ಮನೆ ಪ್ರಯತ್ನ: ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ರಿಲೀಸ್

ಈಗಾಗಲೇ ನಾಗರೀಕ ಸೇವಾ ಪರೀಕ್ಷೆಗಳ ತರಬೇತಿಯಲ್ಲಿ ಹೆಸರುಗಳಿಸಿರುವ ಡಾ.ರಾಜ್ ಕುಮಾರ್ ಅಕಾಡೆಮಿ ಕೊರೋನಾ ಸಂಕಷ್ಟದಲ್ಲಿ ಮಕ್ಕಳ ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ಮುಂದಾಗಿದೆ. ಇದಕ್ಕಾಗಿ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸಿದ್ಧಪಡಿಸಿದೆ.

ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂಬ ಕಾರಣಕ್ಕೆ ಡಾ.ರಾಜ್ ಕುಮಾರ್ ಅಕಾಡೆಮಿ ಸಿದ್ಧಪಡಿಸಿರುವ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ನ್ನು ಸಿಎಂ ಬಸವರಾಜ್ ಬೊಮ್ಮಾಯಿ ಸೋಮವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಕನ್ನಡ ಕಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಪಿಯುಸಿ ಶಿಕ್ಷಣ ಸೇರಿದಂತೆ ವಿವಿಧ ಹಂತದ ಕಲಿಕೆಗಳಿಗೆ ನೆರವಾಗಲು ಈ ಆಪ್ ಬಳಕೆಯಾಗಲಿದ್ದು, ನಿಗದಿತ ಶುಲ್ಕ ಪಾವತಿಸಿ ಆಪ್ ನಲ್ಲಿ ಕಲಿಕೆಗೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

ಆಪ್ ಕುರಿತು ವಿಡಿಯೋ ಬಿಡುಗಡೆ ಮಾಡಿ ಮಾಹಿತಿ ನೀಡಿರುವ ನಟ ಪುನೀತ್ ರಾಜಕುಮಾರ್, ಬಡತನ ಓದಿಸುವವರಿಗೆ ಇರುತ್ತೆ. ಓದುವವರಿಗೆ ಅಲ್ಲ. ವಿದ್ಯಾರ್ಥಿಗಳಿಗೆ ಓದುವ ಆಸೆ ಇದ್ದರೂ ವಿದ್ಯಾಸಂಸ್ಥೆಗಳ ಕೊರತೆ ಇರುತ್ತೆ. ಇನ್ನು ಕೆಲವು ವಿದ್ಯಾರ್ಥಿಗಳಿಗೆ ದುಡಿದುಕೊಂಡು ಓದ ಬೇಕಾದ ಸ್ಥಿತಿ ಇರುತ್ತೆ. ಇಂಥವರಿಗಾಗಿ ಲರ್ನಿಂಗ್ ಆಪ್ ತರಲಾಗಿದೆ. ಇದು ನಿಮ್ಮ ಓದುವ ಹಾಗೂ ದುಡಿಯುವ ಕನಸನ್ನು ನನಸು ಮಾಡಲಿದೆ ಎಂದಿದ್ದಾರೆ.

ಇನ್ನು ಆಪ್ ಬಿಡುಗಡೆಗೊಳಿಸಿ ಶುಭಹಾರೈಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಯಾಕೆ? ಏನು? ಎಲ್ಲಿ? ಎಂತು? ಎಷ್ಟು ಈ ಐದು ಮಂತ್ರಗಳನ್ನಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಮಕ್ಕಳಲ್ಲಿ ತರ್ಕಬದ್ಧ ಚಿಂತನೆ ಬೆಳೆಸಲು ಪ್ರಯತ್ನಿಸಬೇಕು. ಈ ಆಪ್ ಇಡಿ ದೇಶಕ್ಕೆ ಜ್ಞಾನ ಪಸರಿಸಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : ನೀ ಸಿಗೋವರೆಗೂ ಸಿನಿಮಾಗೆ ಸಜ್ಜಾದ ಶಿವಣ್ಣ: ಲವ್ವರ್ ಬಾಯ್ ಪಾತ್ರಕ್ಕೆ ಶುಭಹಾರೈಸಿದ ಸುದೀಪ್!

ಇದನ್ನೂ ಓದಿ : ಅರ್ಜುನ್ ಸರ್ಜಾ ಬರ್ತಡೇಗೆ ಸಿಕ್ತು ಸ್ಪೆಶಲ್ ವಿಶ್: ವೈರಲ್ ಆಯ್ತು ಕ್ಯೂಟ್ ಪೋಟೋ!

Comments are closed.