ಎಸ್‌ಬಿಐ ನಿಂದ ಉಚಿತ ವಿದ್ಯಾರ್ಥಿ ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ನವದೆಹಲಿ : ದೇಶದ ಅತಿ ದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ ಈಗ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ (SBI Asha Scholarship) ಸಹಾಯಧನ ಅಥವಾ ವಿದ್ಯಾರ್ಥಿವೇತನ ನೀಡುತ್ತಿದೆ. ಈಗಿನ ಕಾಲದಲ್ಲಿ ಶಿಕ್ಷಣ ಎನ್ನುವುದು ಬಹಳ ಮುಖ್ಯವಾಗಿದೆ. ಮಕ್ಕಳು ಕೂಡ ಇಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ಯೋಜನೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರ ಕೂಡ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.

ಎಸ್‌ಬಿಐ ಬ್ಯಾಂಕ್‌ ಕೂಡ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಾರ್ಷಿಕವಾಗಿ ನೀಡಲು ಮುಂದಾಗಿದೆ. ಪದವಿ, ಡಿಗ್ರಿ, ಪೋಸ್ಟ್‌ ಗ್ರಾಜುಯೇಟ್‌ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಹಣಕಾಸಿನ ಆಡಚಣೆ ಕಾರಣದಿಂದ ತಮ್ಮ ಶಿಕ್ಷಣವನ್ನು ನಿಲ್ಲಿಸಬಾರದು. ವಿದ್ಯಾರ್ಥಿಗಳ ಏಳಿಗೆಗೆ ಹಣದ ಕೊರತೆ ಕಾರಣ ಆಗಬಾರದು ಎಂದು ಎಸ್‌ಬಿಐ ಆಶಾ ಸ್ಕಾಲರ್ಶಿಪ್‌ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಎಸ್‌ಬಿಐ ಬ್ಯಾಂಕ್‌ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗಲೆಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಎಸ್‌ಬಿಐ ಖಾತೆ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ವಿದ್ಯಾರ್ಥಿವೇತನಕ್ಕೆ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಯಾವೆಲ್ಲಾ ದಾಖಲೆಗಳು ಬೇಕು, ಅರ್ಹತೆಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ಅರ್ಹತೆ :

  • ಕಡ್ಡಾಯವಾಗಿ ವಿದ್ಯಾರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.
  • ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ 75 ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.
  • ಈ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿಯನ್ನು ಓದುತ್ತಿರಬೇಕು ಹಾಗೂ ಪೋಸ್ಟ್‌ ಗ್ರಾಜುಯೇಷನ್‌ ಕೂಡ ಅನ್ವಯವಾಗುತ್ತದೆ.
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬಾರದು.

ಇದನ್ನೂ ಓದಿ : NCERT Syllabus : ಎನ್‌ಸಿಇಆರ್‌ಟಿ ಪಠ್ಯಕ್ರಮ ವಿವಾದ : ಸಿಬಿಎಸ್‌ಇ ಶಿಕ್ಷಕರು, ಬಾಹ್ಯ ತಜ್ಞರಿಂದ ಸಮಾಲೋಚನೆ

ಇದನ್ನೂ ಓದಿ : NEET registration extended : NEET ಪರೀಕ್ಷಾ ನೋಂದಣಿ ದಿನಾಂಕ ಏಪ್ರಿಲ್ 15 ರವರೆಗೆ ವಿಸ್ತರಣೆ

ಇದನ್ನೂ ಓದಿ : 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪ್ರಮುಖ ದಾಖಲೆಗಳ ವಿವರ :

  • ಆಧಾರ್‌ ಕಾರ್ಡ್‌/ರೇಷನ್‌ ಕಾರ್ಡ್/‌ಗುರುತಿನ ಚೀಟಿ
  • ದ್ವಿತೀಯ ಪಿಯುಸಿ ಶೈಕ್ಷಣಿಕ ಅಂಕ ಪಟ್ಟಿ
  • ವಿದ್ಯಾರ್ಥಿಯ ಹಾಗೂ ಪೋಷಕರ ಬ್ಯಾಂಕ್‌ ದಾಖಲೆಗಳು
  • ಪ್ರಸಕ್ತ ಪದವಿಗೆ ಸೇರಿದ ಪ್ರವೇಶ ಪ್ರಮಾಣ ಪತ್ರ
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
  • ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಎಸ್‌ ಬಿ ಐ ಬ್ಯಾಂಕ್‌ ಗೆ ಭೇಟಿ ನೀಡಬೇಕು.

SBI Asha Scholarship : Free scholarship from SBI : Click here to apply

Comments are closed.