ಏಪ್ರಿಲ್ 12 ರಿಂದಲೇ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ

0

ಬೆಂಗಳೂರು : ದೇಶದಾದ್ಯಂತ ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆ ರಾಜ್ಯ ಸರ್ಕಾರ ಶಾಲೆಗಳಿಗೆ ಎಪ್ರಿಲ್ 12 ರಿಂದಲೇ ಬೇಸಿಗೆ ರಜೆ ಘೋಷಣೆ ಮಾಡಿದೆ.

ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಎಪ್ರೀಲ್ 14ರ ವರೆಗ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಹೀಗಾಗಿ ರಾಜ್ಯದ ಶಾಲೆಗಳಿಗೆ ಎಪ್ರಿಲ್ 12ರ ವರೆಗೆ ರಜೆಯನ್ನು ಘೋಷಿಸಲಾಗಿದೆ. ಸಾಮಾನ್ಯವಾಗಿ ಎಪ್ರಿಲ್ 14ರಿಂದ ಬೇಸಿಗೆ ರಜೆ ಆರಂಭವಾಗಬೇಕಿತ್ತು.

ಆದ್ರೀಗ ಕೊರೊನಾ ಹಿನ್ನೆಲೆಯಲ್ಲಿ ಎಪ್ರಿಲ್ 12ರಿಂದಲೇ ರಾಜ್ಯ ಶಾಲೆಗಳಿಗೆ ಸರಕಾರ ಬೇಸಿಗೆ ರಜೆ ಘೋಷಣೆ ಮಾಡಿದೆ. ಶಾಲಾ ಶಿಕ್ಷಕರಿಗೂ ಎಪ್ರಿಲ್ 12ರ ವರೆಗೆ ಕೊರೊನಾ ಹಿನ್ನೆಲೆ ರಜೆ ನೀಡಲಾಗಿದ್ದು, ತದನಂತರ ಬೇಸಿಗೆ ರಜೆಯನ್ನು ಘೋಷಿಸಿದೆ. ಆದರೆ ಶಿಕ್ಷಕರಿಗೆ ಕೆಲ ನಿಮಯಗಳನ್ನು ಸೂಚಿಸಿರೋ ಸರಕಾರ, ಶಿಕ್ಷಕರು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ.

ಅಲ್ಲದೇ ತಮ್ಮ ಮೊಬೈಲ್ ನಂಬರ್ ಗಳನ್ನು ಬಿಇಓಗಳಿಗೆ ನೀಡಬೇಕು. ಅಗತ್ಯ ಸೇವೆಯಿದ್ದರೆ ಕರೆ ಮಾಡಿದಾಗ ಕರ್ತವ್ಯಕ್ಕೆ ಹಾಜರಾಗುವಂತೆಯೂ ಸರಕಾರ ತನ್ನ ಆದೇಶದಲ್ಲಿ ಸೂಚಿಸಿದೆ.

Leave A Reply

Your email address will not be published.