ಕೂಲಿ ಕೆಲಸ ಮಾಡುತ್ತಲೇ ರಾಂಕ್ ಪಡದ ವಿದ್ಯಾರ್ಥಿ : ಸರಕಾರಿ ಶಾಲೆಯ ವಿದ್ಯಾರ್ಥಿಗೆ ಶಾಕ್ ಕೊಟ್ಟ ಸಚಿವರು!

0

ಬೆಂಗಳೂರು : ಆತನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಓದಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತ. ಕೂಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸವನ್ನು ಪಡೆದ ಬಾಲಕನೀಗ ರಾಜ್ಯವೇ ತನ್ನತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾನೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 616 ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಆದರೆ ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಶಾಕ್ ಕೊಟ್ಟಿದ್ದಾರೆ.

ಮಕ್ಕಳಿಗೆ ಟ್ಯೂಷನ್. ಪಾಠದ ಸಾಮಗ್ರಿಗಳನ್ನು ಒದಗಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ಮಕ್ಕಳು ಪಡೆಯುವುದು ಅಷ್ಟೋ ಇಷ್ಟೋ ಅಂಕ. ಆದ್ರೆ ಯಾದಗಿರಿ ಮೂಲದ ವಿದ್ಯಾರ್ಥಿ ಮಹೇಶ್ ಮಾತ್ರ ಇಂತಹ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಂತಿದ್ದಾನೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಯಾದಗಿರಿ ಮೂಲದ ಮಹೇಶ್ ತಾಯಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾನೆ.

ಮಹೇಶ್ 5 ವರ್ಷದವನಾಗಿರುವಾಗಲೇ ತಂದೆ ನಿಧನರಾಗಿದ್ರು. ಹೀಗಾಗಿ ಜೋಪಡಿಯಲ್ಲಿ ಪಾಸಿಸುತ್ತಿದ್ದ ಮಹೇಶ್ ತಾಯಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಜೀವನ್ಬಿಮಾ ನಗರದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದ ಮಹೇಶ್ ತನ್ನ ತಾಯಿಗೆ ನೆರವಾಗುವುದರ ಜೊತೆಗೆ ತನ್ನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿ ಅಂತಾ ತನ್ನ ರಜೆಯ ದಿನಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಹೋಗುತ್ತಿದ್ದ.

https://youtu.be/Ob1BmfHVaqQ

ಲಾಕ್ ಡೌನ್ ವೇಳೆಯಲ್ಲಿ ಇಬ್ಬರಿಗೂ ಕೆಲಸವಿರಲ್ಲ. ಕಟ್ಟಡ ಕೆಲಸ ಮಾಡುತ್ತಿದ್ದ ಅಣ್ಣ ಯಾದಗಿರಿಗೆ ಹೋಗಿ ಲಾಕ್ ಡೌನ್ ವೇಳೆಯಲ್ಲಿ ಯಾದಗಿರಿಯಲ್ಲಿಯೇ ಲಾಕ್ ಆಗಿದ್ದ ಹೀಗಾಗಿ ಹೊತ್ತಿನ ತುತ್ತಿಗೂ ಮಹೇಶ್ ಹಾಗೂ ಆತನ ತಾಯಿ ಪರದಾಡಿದ್ದಾರೆ. ಬಿಬಿಎಂಪಿ ನೀಡುತ್ತಿದ್ದ ಆಹಾರದ ಕಿಟ್ ಗಳನ್ನೇ ನಂಬಿಕೊಂಡು ಜೀವನ ನಡೆಸಿದ್ದಾರೆ. ಎಸ್ಎಸ್ಎಲ್ ಸಿ ಪರೀಕ್ಷೆ ಘೋಷಣೆಯಾಗುತ್ತಿದ್ದಂತೆಯೇ ಸಾಮಾನ್ಯವಾಗಿ ಎಲ್ಲಾ ಮಕ್ಕಳು ಪೆನ್ನು ಹಾಗೂ ಪೇಪರ್ ಹಿಡಿದುಕೊಂಡ್ರೆ ಮಹೇಶ್ ಮಾತ್ರ ನಿರ್ಮಾಣ ಹಂತದ ಕಟ್ಟಡದ ಕರಣೆ ಹಿಡಿದು ಗಾರೆ ಮಾಡುವ ಕೆಲಸವನ್ನು ಮಾಡುತ್ತಾ ತಾಯಿಗೆ ನೆರವಾಗಿದ್ದಾನೆ.

ಇನ್ನೇನು ಪರೀಕ್ಷೆ 5 ದಿನ ಇದೆ ಅನ್ನುವಾಗ ಕೆಲಸಕ್ಕೆ ರಜೆ ಹಾಕಿ ಪರೀಕ್ಷೆಗೆ ಸಿದ್ದತೆಗಳನ್ನು ಮಾಡಿಕೊಂಡಿದ್ದ. ಇದೀಗ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳ ಪೈಕಿ 615 ಅಂಕಗಳನ್ನು ಪಡೆಯುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪೈಕಿ, ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ, ಜೋಪಡಿಯಂತಹ ಮನೆಯಲ್ಲಿ ದೀಪದ ಬೆಳಕಿನಲ್ಲಿಯೇ ಓದುತ್ತಿದ್ದ ಮಹೇಶ್ ಯಾವುದೇ ರೀತಿಯಲ್ಲಿಯೂ ಟ್ಯೂಷನ್ ಪಡೆದುಕೊಂಡಿಲ್ಲ. ಸಮಾಜ ವಿಜ್ಞಾನ ಶಿಕ್ಷಕರು ನಿವೃತ್ತಿಯಾಗಿದ್ದರೂ ಕೂಡ ಮಹೇಶ್ ಗಾಗಿ ಪಾಠವನ್ನು ಹೇಳಿಕೊಟ್ಟಿದ್ದರಂತೆ.

ತನಗೆ ಶೇ.90 ಅಂಕ ಬರಬಹುದು ಅಂತಾ ತಿಳಿದುಕೊಂಡಿದ್ದೆ. ಆದರೆ ಇದೀಗ ಇಷ್ಟೊಂದು ಅಂಕ ಬಂದಿರುವುದು ತನಗೆ ಖುಷಿಕೊಟ್ಟಿದೆ. ಮುಂದೆ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡು ಶಿಕ್ಷಕನಾಗುವ ಕನಸು ಕಂಡಿದ್ದಾರೆ ಮಹೇಶ್.

ಇಂತಹ ವಿದ್ಯಾರ್ಥಿ ವಾಸವಾಗಿದ್ದ ಗುಡಿಸಲಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖುದ್ದು ಭೇಟಿಯನ್ನು ನೀಡಿದ್ದಾರೆ. ವಿದ್ಯಾರ್ಥಿಯ ಮನೆಯೊಳಗೆ ಕುಳಿತು ತಾಯಿ, ಮಗನೊಂದಿಗೆ ಕುಲಶೋಪರಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಮಗನನ್ನು ಓದಿಸುವಂತೆ ಪ್ರೇರೇಪಿಸುವ ಕಾರ್ಯವನ್ನು ಮಾಡಿದ್ದಾರೆ. ಇತ್ತ ಮಹೇಶ್ ಗೆ ಶಿಕ್ಷಣ ಸಚಿವರು ಮನೆಗೆ ಬಂದಿರುವುದು ಶಾಕ್ ಕೊಟ್ಟಿದೆ.

ಒಂದೆಡೆ ಕೂಲಿ ಮಾಡುತ್ತಲೇ ಶೈಕ್ಷಣಿಕವಾಗಿ ವಿಶಿಷ್ಟ ಸಾಧನೆ ಮಾಡಿರುವ ಮಹೇಶ್ ಸಾಧನೆಯನ್ನು ಜನರು ಕೊಂಡಾಡುತ್ತಿದ್ರೆ, ಇತ್ತ ತಾನೊಬ್ಬ ಸಚಿವ ಅನ್ನೋ ಹಮ್ಮು ಬಿಮ್ಮು ಇಲ್ಲದೇ ಬಡ ವಿದ್ಯಾರ್ಥಿಯ ಮನೆಗೆ ಭೇಟಿಕೊಟ್ಟು ವಿದ್ಯಾರ್ಥಿಯನ್ನು ಅಭಿನಂದಿಸಿರುವ ಸಚಿವ ಸುರೇಶ್ ಕುಮಾರ್ ಅವರ ಕಾರ್ಯಕ್ಕೆ ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

Leave A Reply

Your email address will not be published.