Teenage girl raped : ತಂದೆಯ ಎದುರಲ್ಲೇ ಪುತ್ರಿಯ ಮೇಲೆ ಅತ್ಯಾಚಾರಗೈದ ಪಾಪಿ

Teenage girl raped  : ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇರಬೇಕು ಅಂತಾ ದೇಶದಲ್ಲಿ ನೂರಾರು ಕಾನೂನುಗಳಿವೆ. ಆದರೆ ಇದಾದ ಬಳಿಕವೂ ಇನ್ನೂ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಭಾಗಪತ್​ ಜಿಲ್ಲೆಯಲ್ಲಿ ಅಪ್ರಾಪ್ತೆಯನ್ನು ಆಕೆಯ ಮನೆಯ ಮುಂಭಾಗದಲ್ಲಿಯೇ ಅತ್ಯಾಚಾರಗೈದ ಅಮಾನವೀಯ ಘಟನೆಯೊಂದು ವರದಿಯಾಗಿದೆ.


ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಆಕೆಯ ಮನೆಯ ಎದುರು ಅತ್ಯಾಚಾರ ಮಾಡಲಾಗಿದೆ. ಬಾಲಕಿಯು ಈ ಮನೆಯಲ್ಲಿ ತನ್ನ ತಂದೆ ಹಾಗೂ ತಂಗಿಯ ಜೊತೆಯಲ್ಲಿ ವಾಸವಿದ್ದಳು ಎನ್ನಲಾಗಿದೆ. ಬಾಲಕಿಯು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿ ಈ ಕೃತ್ಯ ಎಸಗಲಾಗಿದೆ.


ಈ ಸಂಬಂಧ ದೂರು ನೀಡಿರುವ ತಂದೆಯು ಮನೆಯಲ್ಲಿ ಮಲಗಿದ್ದ ನನ್ನ ಪುತ್ರಿಯನ್ನು ದುಷ್ಕರ್ಮಿ ಧರಧರನೇ ಎಳೆದು ಮನೆಯ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಹಾಗೂ ಅಲ್ಲಿಯೇ ಅತ್ಯಾಚಾರವೆಸಗಿದ್ದಾನೆ. ಪುತ್ರಿಯು ಕಿರುಚಾಟ ಕೇಳಿ ಮನೆಯಿಂದ ಹೊರಬಂದ ತಂದೆಯು ಮಗಳನ್ನು ಪಾಪಿಯ ಕೈನಿಂದ ಕಾಪಾಡುವ ಸಲುವಾಗಿ 45 ವರ್ಷದ ಆರೋಪಿಯೊಂದಿಗೆ ಜಟಾಪಟಿ ನಡೆಸಿದ್ದಾನೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದು ಮಾತ್ರವಲ್ಲದೇ ಈ ಕೃತ್ಯವನ್ನು ತಪ್ಪಿಸಲು ಬಂದ ತಂದೆಯ ಮೇಲೆ ಕಂಟ್ರಿ ಪಿಸ್ತೂಲ್​ನಿಂದ ಹೊಡೆದು ಗಾಯಗೊಳಿಸಿದ್ದಾನೆ. ಬಾಲಕಿಯ ತಂದೆಗೆ ಬೆದರಿಕೆಯೊಡ್ಡಿದ್ದ ಆರೋಪಿಯು ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ.


ಮೊದಲು ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸ್​ ಠಾಣೆಗೆ ಯಾವುದೇ ರೀತಿಯ ದೂರನ್ನು ನೀಡಿರಲಿಲ್ಲ. ಆದರೆ ಬಳಿಕ ಬಾಲಕಿಯ ತಂದೆಯು ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

UP: Teenage girl raped in Baghpat, father brutally assaulted for resisting crime

ಇದನ್ನು ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ

ಇದನ್ನೂ ಓದಿ :PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Comments are closed.