ಮಕ್ಕಳ ಶಿಕ್ಷಣಕ್ಕೆ ಎರಡು ಚಾನೆಲ್, 1 ರಿಂದ 10ನೇ ತರಗತಿಗೆ ಟಿವಿ ಪಾಠ : ಸಚಿವ ಸುರೇಶ್ ಕುಮಾರ್

1

ಚಾಮರಾಜನಗರ : 8 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ 1 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಧ್ವನಿಮುದ್ರಿತ ಪಾಠ ಸಿದ್ದವಿದ್ದು, ಶಿಕ್ಷಣ ಇಲಾಖೆ ಎರಡು ವಾಹಿನಿಗಳ ಮೂಲಕ ಪಾಠವನ್ನು ಪ್ರಸಾರ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೆಗ್ಯುಲರ್ ಶಿಕ್ಷಣಕ್ಕೆ ಪೂರಕವಾಗಿ ಚಾನೆಲ್​ಗಳ ಮೂಲಕ ಪಾಠ ಮಾಡಲಾಗುವುದು. ಶಿಕ್ಷಣಕ್ಕಾಗಿ ಎರಡು ವಾಹಿನಿಗಳು ಮೀಸಲಾಗಿದ್ದು, ಕೇಬಲ್ ಆಪರೇಟರ್​ಗಳೊಂದಿಗೆ ಮಾತುಕತೆ ನಡೆಸಿ ಈ ಚಾನೆಲ್​ಗಳ ಪ್ರಸಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಚಾನೆಲ್ ಪ್ರಸಾರ ಮಾಡುವ ಆಪರೇಟರ್​ಗಳಿಗೆ ಹಣ ಪಾವತಿಸಲಾಗುವುದು ಎಂದಿದ್ದಾರೆ.

ತನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆಯ ಋಣ ತೀರಿಸುವ ಕಾಲ ಬಂದಿದೆ. ಅನೇಕ ವರ್ಷಗಳಿಂದ ಬಾಕಿ ಉಳಿದ ಕಾರ್ಯಗಳನ್ನು ಮಾಡಿದ್ದೇನೆ. ಶಿಕ್ಷಕರ ಕಡ್ಡಾಯ ವರ್ಗಾವಣೆಯ ಕುರಿತು ಸಾಕಷ್ಟು ಗೊಂದಲಗಳಿತ್ತು. ಎಲ್ಲರ ಅಭಿಪ್ರಾಯವನ್ನು ಪಡೆದು ಶಿಕ್ಷಣ ಸ್ನೇಹಿ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಅಲ್ಲದೇ ವಿಧಾನಸಭೆ ಮತ್ತು ಪರಿಷತ್​ನಲ್ಲಿ ಎಲ್ಲರು ಅನುಮೋದನೆ ಕೂಡ ಸಿಕ್ಕಿದೆ ಎಂದಿದ್ದಾರೆ.

1 Comment
  1. Indudhara s m says

    Indudhara s m ಆದ ನಾನು 2018-19 ರಿಂದ ಯು ಟ್ಯೂಬ್ ನಲ್ಲಿ ಪಾಠಕ್ಕೆ ಸಂಬಂಧಪಟ್ಟ ಪಾಠಗಳನ್ನು ಶ್ರೀ ಕೃಷ್ಣ ವಾಟ್ಸಪ್ ಗ್ರೂಪ್ ಮಾಡಿ ಕಲಿಸುತಿದೆ ಕಾರಣ ನಮಗಿಂತ ಉತಮವಾಗಿ ರಾಗಬದ್ದ ವಾಗಿ ಬರುತ್ತಿದವು ಈಗಲೂ ಕಳಿಸು ತಿದೇನೆ & ನಾವು ಕಲಿಯಲು ಉತ್ತಮವಾಗಿದೆ ಯೂಟ್ಯೂಬ್ ನವರಿಗೆ ಶಿಕ್ಷಣ ಇಲಾಖೆಗೆ ತುಂಬಾ ತುಂಬಾ ಥ್ಯಾಂಕ್ಸ್

Leave A Reply

Your email address will not be published.