“ಕಾರ್ಗಿಲ್ ವಿಜಯೋತ್ಸವ 21 ವರ್ಷ” ವೀರ ಯೋಧರಿಗೆ ನಮ್ಮದೊಂದು ಸಲಾಂ

0
  • ಹೇಮಂತ್ ಚಿನ್ನು

ಕಾರ್ಗಿಲ್ ವಿಜಯ ದಿವಸ… ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಭಾರತೀಯ ಸೈನಿಕರು ವಿಜಯ ಪತಾಕೆಯನ್ನು ಹಾರಿಸಿದ ಸುದಿನ. 1999ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಬರೋಬ್ಬರಿ 60 ದಿನಗಳ ಕಾಲ ನಡೆದ ಯುದ್ದದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ದಿನವಿಂದು. ಇಂತಹ ಕಾರ್ಗಿಲ್ ವಿಜಯೋತ್ಸವಕ್ಕೀಗ ಬರೋಬ್ಬರಿ 21 ವರ್ಷ.

1999ರ ಮೇ ತಿಂಗಳಲ್ಲಿ ಭಾರತ – ಪಾಕಿಸ್ತಾನದ ವಿರುದ್ದ ಯುದ್ದ ಘೋಷಣೆ ಮಾಡಿತ್ತು. ಮೇ ತಿಂಗಳಲ್ಲಿ ಆರಂಭಗೊಂಡ ಯುದ್ದ ಜುಲೈವರೆಗೂ ಸಾಗಿತ್ತು. ಸರಿ ಸುಮಾರು 60 ದಿನಗಳ ಕಾಲ ನಡೆದ ಯುದ್ಧದಲ್ಲಿ ಭಾರತದ 527 ಸೈನಿಕರು ವೀರ ಮರಣವನ್ನಪ್ಪಿದ್ದರು.

ಅಪಾರ ಪ್ರಮಾಣದಲ್ಲಿ ಪಾಕಿಸ್ತಾನದ ಸೈನಿಕರು ಹತರಾಗಿದ್ದರೂ ಕೂಡ ಪಾಕಿಸ್ತಾನ ಮಾತ್ರ ತನ್ನ ದೇಶದ ಕೇವಲ 357 ಮಂದಿ ಸೈನಿಕರು ಹತರಾಗಿದ್ದಾರೆ ಅಂತ ಹೇಳಿಕೊಂಡಿತ್ತು. ಆದರೆ ಪಾಕಿಸ್ತಾನದ ಮಾತನ್ನು ಭಾರತ ತಳ್ಳಿ ಹಾಕಿತ್ತು.

ಭಾರತದ ಮುಕುಟಮಣಿ ಜಮ್ಮು ಕಾಶ್ಮೀರದ ಲಡಾಕ್ ಜಿಲ್ಲೆಯಲ್ಲಿರುವ ಕಾರ್ಗಿಲ್ ನಲ್ಲಿ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಸೇನೆಯನ್ನು ಬಗ್ಗುಬಡಿಯಯವ ಕಾರ್ಯಾಚರಣೆಗೆ ಭಾರತ ಇಟ್ಟಿದ್ದ ಹೆಸರೇ ಆಪರೇಶನ್ ವಿಜಯ’. ಅದಕ್ಕೆಂದೇ ಈ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ ದಿನವಾದ ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ ಎಂದು ಕರೆಯಲಾಗುತ್ತದೆ.

ಜುಲೈ 26ರ 1999ರಲ್ಲಿ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಸಂಘರ್ಷದಲ್ಲಿ ಭಾರತವು ಅದ್ಭುತ ಗೆಲುವು ಸಾಧಿಸಿತು. 1999 ರಿಂದಲೂ ಪ್ರತಿ ವರ್ಷ, ಜುಲೈ 26 ರನ್ನು “ಕಾರ್ಗಿಲ್ ವಿಜಯ್ ದಿವಸ್” ಎಂದು ಆಚರಿಸಲಾಗುತ್ತದೆ.

ಯುದ್ಧದಲ್ಲಿ ಭಾರತವು ಜಯವನ್ನು ನೆನಪಿಗೆ ತರುತ್ತದೆ ಮತ್ತು ಭಾರತೀಯ ಸೈನಿಕ ಯೋಧರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. ದೇಶಕ್ಕಾಗಿ ವೀರ ಮರಣವನ್ನಪ್ಪಿದ್ದ ನಮ್ಮ ವೀರ ಯೋಧರಿಗೂ ನಮ್ಮೊಂದು ಸಲಾಂ… ನಮ್ಮ ಸೇನೆ ನಮ್ಮ ಹೆಮ್ಮೆ.

Leave A Reply

Your email address will not be published.