ರಾಜಕಾರಣಿಗಳ ಪರ ಬ್ಯಾಟ್ ಬಿಸೋ ಸ್ಟಾರ್ ನಟ, ನಟಿಯರಿಗೆ ಕಂಟಕ: ಚುನಾವಣಾ ಆಯೋಗಕ್ಕೆ ಕೆಆರ್ ಎಸ್ ಪಕ್ಷದಿಂದ ದೂರು

ಬೆಂಗಳೂರು : (Complaint by KRS Party) ಒಂದೆಡೆ ಬಿಜೆಪಿ ಸ್ಟಾರ್ ಕ್ಯಾಂಪೇನರ್ ಗಳಾಗಿ ಸುದೀಪ್ ಹಾಗೂ ದರ್ಶನ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧವಾಗಿದೆ. ಇನ್ನೊಂದೆಡೆ ಸ್ಟಾರ್ ಗಳನ್ನು ಹಾಗೂ ಅವರ ಜನಪ್ರಿಯತೆಯನ್ನು ಮತದಾಳವಾಗಿ ಉಪಯೋಗಿಸಿಕೊಳ್ಳುವ ಪಕ್ಷಗಳ ವಿರುದ್ಧ ಕೆಆರ್ ಎಸ್ ಪಕ್ಷ ಕಿಡಿಕಾರಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಕೆಅರ್ ಎಸ್ ಪಕ್ಷದ ಕಾರ್ಯಕರ್ತರು ಸ್ಟಾರ್ ಪ್ರಚಾರಕರಾಗಿ‌ ಕಾಣಿಸಿಕೊಳ್ಳುವ ಸಿನಿಮಾ ನಟ-ನಟಿಯರಿಗೆ ಸೂಕ್ತ ನೀತಿ ನಿಯಮ ರೂಪಿಸಬೇಕು. ಇಲ್ಲವೇ ನಿರ್ಬಂಧ ಹೇರಬೇಕೆಂದು ಮನವಿ ಮಾಡಿದ್ದಾರೆ.

ನಟ ಸುದೀಪ್ ಬಿಜೆಪಿ ಸೇರುವ ಸಂಗತಿ ಚರ್ಚೆಗೆ ಬರುತ್ತಿದ್ದಂತೆ ಸ್ಟಾರ್ ನಟರನ್ನು ಚುನಾವಣೆಗೆ ಬಳಸಿಕೊಳ್ಳುವ ಪಕ್ಷಗಳ ವಿರುದ್ಧ ಕಿಡಿಕಾರಿದ KRS ಪಕ್ಷ, ಎಲೆಕ್ಷನ್ ಹೊತ್ತಲ್ಲಿ ಸಭೆ ಸಮಾರಂಭದಲ್ಲಿ ಕಾಣಿಸಿಕೊಳ್ಳೋ ಕಲಾವಿದರಿಗೂ ನಿರ್ಬಂಧ ಹಾಕಬೇಕೆಂದು ಆಗ್ರಹಿಸಿದೆ. ರಾಜಕಾರಣಿಗಳ ಪರವಾಗಿ ಬ್ಯಾಟ್ ಬೀಸೋ ಆಕ್ಟರ್ಸ್ ಮಾಹಿತಿ ಕಲೆ ಹಾಕಲು ಪಟ್ಟು ಹಿಡಿದಿರುವ ಕೆಆರ್ ಎಸ್, ಆದಾಯದ ಮೂಲ, ಹಣ ವರ್ಗಾವಣೆಯ ಬಗ್ಗೆ ನಿಗಾ ಇಡಲು ಒತ್ತಾಯಿಸಿದೆ. ಚುನಾವಣಾ ಸಮಯವನ್ನು ಉದ್ಯಮ ಮಾಡಿಕೊಳ್ಳುವ ಸ್ಟಾರ್ ಪ್ರಚಾರಕರ ಮೇಲೆ ಹದ್ದಿನ ಕಣ್ಣಿಡಿ ಎಂದು KRS ಪಕ್ಷ ಚುನಾವಣಾ ಆಯೋಗಕ್ಕೆ ಹಾಗೂ ಆದಾಯ ತೆರಿಗೆ ಇಲಾಖೆಗೆ ಒತ್ತಾಯಿಸಿದೆ.

Complaint by KRS Party: Bat Biso Star for Politicians, Harm to Actors, Actresses: Complaint by KRS Party to Election Commission

ಕಳ್ಳ ಮತ್ತು ಭ್ರಷ್ಟ ಅಭ್ಯರ್ಥಿಗಳ ಪರವಾಗಿ ಕೆಲವರು ದುಡ್ಡು ತೆಗೆದುಕೊಂಡು ಚುನಾವಣಾ ಪ್ರಚಾರಕ್ಕೆ ಎಂಟ್ರಿ ಕೊಡುತ್ತಾರೆ. ಹೀಗೆ ಬರುವ ಸಿನಿಮಾ ನಟನಟಿಯರ ವಿವರಗಳನ್ನು ಚುನಾವಣಾ ಆಯೋಗವು ಸಂಗ್ರಹಿಸಬೇಕು. ಈ ವಿಚಾರ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕು ಎಂದು KRS ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಮಾಡಿದೆ.

ಇದನ್ನೂ ಓದಿ : Threat letter to Sudeep: ಬಿಜೆಪಿ ಸೇರ್ಪಡೆ ಸುದ್ದಿ ಬೆನ್ನಲ್ಲೇ ಸುದೀಪ್‌ ಗೆ ಬೆದರಿಕೆ ಪತ್ರ : ಸಿಸಿಬಿ ಪೊಲೀಸರಿಂದ ತನಿಖೆ

ರಾಜ್ಯ ಗಡಿ ಭಾಗದಲ್ಲಿ ಕನ್ನಡ ಬಾರದ ಪರ ಭಾಷಿಗರನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಲಾಗುತ್ತಿದೆ.ಇಂತಹವರು ದುಡ್ಡು ತೆಗೆದುಕೊಂಡು ಜನರ ದಾರಿ ತಪ್ಪಿಸುತ್ತಾರೆ ಅಂತ ಆರೋಪಿಸಿರುವ ಕೆಆರ್ ಎಸ್ ಸಿನಿಮಾ ಪ್ರಚಾರಕ್ಕೆ ಬರೋ ಕಲಾವಿದರು ಎಷ್ಟು ಹಣ ಡಿಮ್ಯಾಂಡ್ ಮಾಡ್ತಾರೆ, ಅಭ್ಯರ್ಥಿಗಳಿಂದ ಎಷ್ಟು ಹಣ ಖಾತೆ ವರ್ಗಾವಣೆ ಆಗಿದೆ ಇವುಗಳ ಮೇಲೆ ಕಣ್ಣಿಡುವಂತೆ ಕೋರಿದ್ದಾರೆ. ಒಟ್ಟಿನಲ್ಲಿ ಒಂದೆಡೆ ಸುದೀಪ್ ಬಿಜೆಪಿ ಸೇರ್ಪಡೆ ಸಂಗತಿ ಚರ್ಚೆಗೀಡಾಗ್ತಿದ್ದರೇ ಇನ್ನೊಂದೆಡೆ ಪ್ರಬಲ ವಿರೋಧವೂ ವ್ಯಕ್ತವಾಗಿದೆ.

Complaint by KRS Party: Bat Biso Star for Politicians, Harm to Actors, Actresses: Complaint by KRS Party to Election Commission

Comments are closed.