Virat Kohli One-8 Resturant : ತನ್ನದೇ ರೆಸ್ಟೋರೆಂಟ್‌ನಲ್ಲಿ ಮ್ಯಾಕ್ಸಿ, ಫಾಫ್, ಸಿರಾಜ್‌ಗೆ ಭರ್ಜರಿ ಊಟ ಮಾಡಿಸಿದ ಕಿಂಗ್ ಕೊಹ್ಲಿ

ಕೋಲ್ಕತಾ : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್-2023 (IPL 2023) ಟೂರ್ನಿಯ ತನ್ನ 2ನೇ ಪಂದ್ಯವನ್ನಾಡಲು ಕೋಲ್ಕತಾದಲ್ಲಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ (Virat Kohli One-8 Resturant) ಗುರುವಾರ (ಏಪ್ರಿಲ್ 6) ನಡೆಯಲಿರುವ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಪಡೆ, ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಆರ್’ಸಿಬಿ, 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ 2ನೇ ಪಂದ್ಯಕ್ಕೆ ಆರ್’ಸಿಬಿ ಆಟಗಾರರು ಸಜ್ಜಾಗುತ್ತಿದ್ದಾರೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಕೋಲ್ಕತಾದಲ್ಲಿರುವ ತಮ್ಮ ಒಡೆತನದ One-8 ರೆಸ್ಟೋರೆಂಟ್’ಗೆ ಮಂಗಳವಾರ ರಾತ್ರಿ ಆರ್’ಸಿಬಿ ಆಟಗಾರರಾದ ನಾಯಕ ಫಾಫ್ ಡುಪ್ಲೆಸಿಸ್ (Faf du Plessis), ಗ್ಲೆನ್ ಮ್ಯಾಕ್ಸ್’ವೆಲ್ (Glenn Maxwell) ಮತ್ತು ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಕರೆದೊಯ್ದಿದ್ದಾರೆ. ತಮ್ಮ ಹೋಟೆಲ್’ನಲ್ಲಿ ಸಹ ಆಟಗಾರರಿಗೆ ಆತಿಥ್ಯ ನೀಡಿದ್ದಾರೆ.

ವಿರಾಟ್ ಕೊಹ್ಲಿಯ One-8 ರೆಸ್ಟೋರೆಂಟ್ ಬಗ್ಗೆ :
ಆರ್’ಸಿಬಿ ಮಾಜಿ ಕ್ಯಾಪ್ಟನ್, ರನ್ ಮಷಿನ್ ವಿರಾಟ್ ಕೊಹ್ಲಿ One-8 ಹೆಸರಿನ ತಮ್ಮದೇ ಬ್ರ್ಯಾಂಡ್ ಹೊಂದಿದ್ದಾರೆ. ಇದೇ ಹೆಸರಿನ ರೆಸ್ಟೋರೆಂಟ್’ಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಆರಂಭಿಸಿದ್ದಾರೆ. ಕೋಲ್ಕತಾದಲ್ಲಿ One-8 ರೆಸ್ಟೋರೆಂಟ್ 2021ರಲ್ಲಿ ಆರಂಭಗೊಂಡಿತ್ತು.

ಇದನ್ನೂ ಓದಿ : Nepal to support RCB : ಆರ್‌ಸಿಬಿಗೆ ಸಪೋರ್ಟ್ ಮಾಡಲು 2,376 ಕಿ.ಮೀ ದೂರದಿಂದ ಬೆಂಗಳೂರಿಗೆ ಬಂದ ಅಭಿಮಾನಿಗಳು

ಇದನ್ನೂ ಓದಿ : Rajat Patidar : ಆರ್‌ಸಿಬಿಗೆ ಡಬಲ್ ಶಾಕ್, ಸ್ಟಾರ್ ಬ್ಯಾಟ್ಸ್‌ಮನ್ ಐಪಿಎಲ್ ಟೂರ್ನಿಯಿಂದಲೇ ಔಟ್

ಇದನ್ನೂ ಓದಿ : RCB vs KKR: RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: IPL 2023 ರಿಂದ ಪ್ರಮುಖ ಆಟಗಾರ ಔಟ್

One-8 ರೆಸ್ಟೋ ಬಾರ್ ಅನ್ನು ಖ್ಯಾತ ವಿನ್ಯಾಸಕ ಸುಮೇಶ್ ಮೆನನ್ ಡಿಸೈನ್ ಮಾಡಿದ್ದಾರೆ. 4,500 ಚದರ ಅಡಿ ವಿಸ್ತೀರ್ಣದ ರೆಸ್ಟೋರೆಂಟ್’ನಲ್ಲಿ 100 ಜನ ಕುಳಿತುಕೊಳ್ಳಬಹುದಾಗಿದೆ.
ಐಪಿಎಲ್-2023 ಟೂರ್ನಿಯಲ್ಲಿ ಭರ್ಜರಿಯಾಗಿಯೇ ತಮ್ಮ ಅಭಿಯಾನ ಆರಂಭಿಸಿರುವ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ ಅಜೇಯ 82 ರನ್ ಸಿಡಿಸಿ ರಾಯಲ್ ಚಾಲೆಂಜರ್ಸ್’ಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.

Virat Kohli One-8 Resturant: King Kohli had a great meal for Maxi, Faf, Siraj in his own restaurant.

Comments are closed.