Virat Kohli Gautam Gambhir : 10 ವರ್ಷಗಳ ಹಿಂದೆ ಚಿನ್ನಸ್ವಾಮಿಯಲ್ಲಿ ಕಿತ್ತಾಟ, ಅದೇ ಚಿನ್ನಸ್ವಾಮಿಯಲ್ಲೀಗ ಮುದ್ದಾಟ

ಬೆಂಗಳೂರು : ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ (Gautam Gambhir) ಅಂದ್ರೆ ನೆನಪಾಗೋದು 10 ವರ್ಷಗಳ ಹಿಂದೆ (Virat Kohli Gautam Gambhir) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದಿದ್ದ ಆ ಕಿತ್ತಾಟ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕ. ಗೌತಮ್ ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಾರಥಿ.

ಕೊಹ್ಲಿ ಔಟಾಗಿ ಪೆವಿಲಿಯನ್’ನತ್ತ ಸಾಗುತ್ತಿದ್ದಾಗ ಗಂಭೀರ್ ಕೆಣಕ್ತಾರೆ. ಸಿಟ್ಟಿಗೆದ್ದ ಕೊಹ್ಲಿ, ಗಂಭೀರ್ ಅವರತ್ತ ನುಗ್ಗಿ ಬರ್ತಾರೆ. ಇಬ್ಬರೂ ಕೈ ಕೈ ಮಿಲಾಯಿಸೋದೊಂದೇ ಬಾಕಿ. ಕೂಡಲೇ ಮಧ್ಯ ಪ್ರವೇಶಿಸಿದ್ದ ದೆಹಲಿಯವರೇ ಆದ ರಜತ್ ಭಾಟಿಯಾ ಇಬ್ಬರನ್ನೂ ದೂರ ಸರಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದರು.

ಆ ಫೈಟ್ ಬಳಿಕ ವಿರಾಟ್ ಕೊಹ್ಲಿ ಅವರನ್ನು ಗೌತಮ್ ಗಂಭೀರ್ ಟೀಕಿಸುತ್ತಲೇ ಬಂದಿದ್ದರು. ಕಿಂಗ್ ಕೊಹ್ಲಿಯ ಆಟ, ನಾಯಕತ್ವದ ಬಗ್ಗೆ ಸತತ ಟೀಕೆಗಳನ್ನು ಮಾಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 10 ವರ್ಷಗಳ ಹಿಂದೆ ನಡೆದ ಆ ಘಟನೆಯ ನಂತರ ಇದೀಗ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅದೇ ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಈ ಬಾರಿ ಕಿತ್ತಾಟವಿಲ್ಲ, ಬದಲಾಗಿ ಇಬ್ಬರೂ ಸ್ವೇಹಪೂರ್ವಕವಾಗಿ ಭೇಟಿ ಮಾಡಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಗಳ ಮಧ್ಯೆ ಐಪಿಎಲ್ ಪಂದ್ಯ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ತಂಡ ನಿಗದಿತ 20 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆ ಹಾಕಿದ್ರೆ, ಕಠಿಣ ಗುರಿ ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್’ಗಳಲ್ಲಿ 9 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ ರೋಚಕ ಗೆಲುವು ದಾಖಲಿಸಿತು.

ಇದನ್ನೂ ಓದಿ : Gautam Gambhir: ನಮ್ಮೂರಿಗೆ ಬಂದು ನಮ್ಮ ಜನರ ಮುಂದೆಯೇ ಗಂಭೀರ್ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : India’s domestic season for 2023-24 : 1846 ಪಂದ್ಯಗಳಿಗೆ ಸಾಕ್ಷಿಯಾಗಲಿದೆ 2023-24ನೇ ಸಾಲಿನ ದೇಶಿಯ ಕ್ರಿಕೆಟ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮಾರ್ಕಸ್ ಸ್ಟೋಯ್ನಿಸ್ 30 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ 65 ರನ್ ಸಿಡಿಸಿದ್ರೆ, ನಿಕೋಲಸ್ ಪೂರನ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಅಮೋಘ ಸಿಕ್ಸರ್’ಗಳ ನೆರವಿನಿಂದ ವಿಸ್ಫೋಟಕ 62 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್, ಆರ್’ಸಿಬಿ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಕೊಹ್ಲಿ ಅವರನ್ನು ಆಲಂಗಿಸಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ್ದಾರೆ. ಈ ವೇಳೆ ದೆಹಲಿಯ ಮತ್ತೊಬ್ಬ ಮಾಜಿ ಕ್ರಿಕೆಟಿಗ, ಲಕ್ನೋ ತಂಡದ ಫೀಲ್ಡಿಂಗ್ ಕೋಚ್ ವಿಜಯ್ ದಹಿಯಾ ಕೂಡ ಜೊತೆಗಿದ್ದರು.

Virat Kohli Gautam Gambhir : 10 years ago flirting in Chinnaswamy, now kissing in the same Chinnaswamy

Comments are closed.