ಅದೆಂತಾ ನೋವಿದ್ರೂ ಇಲ್ಲಿ ಸಿಗತ್ತೆ ಪರಿಹಾರ.! ಇದು ವೈದ್ಯಲೋಕಕ್ಕೆ ಸವಾಲು.!

0

ಉದ್ದಕ್ಕೆ ಸಾಲಾಗಿ ನಿಲ್ಲಿಸಿರೊ ಕೋಲುಗಳು… ಕೋಲುಗಳಿಗೆ ಹಲವು ರೀತಿಯಲ್ಲಿ ಸುತ್ತಿರುವ ಬಟ್ಟೆಗಳು.. ಇದಿಷ್ಟೇ ಇಲ್ಲಿಗೆ ನೋವು ಹೇಳಿಕೊಂಡು ಬರುವ ಜನರ ನೋವು ನಿವಾರಣೆಗೆ ಬಳಸುವ ವಸ್ತುಗಳು. ಹೌದು, ಕೇರಳದ ಕಾಸರಗೋಡು ಸಮೀಪದ ಚಂದ್ರಗಿರಿ ಎಂಬಲ್ಲಿರೋ ವ್ಯಕ್ತಿಯೊಬ್ಬರು ಇದೇ ಕೋಲುಗಳನ್ನ ಬಳಸಿ ಈಗಾಗಲೇ ಸಾವಿರಾರು ಮಂದಿಯ ಹಲವಾರು ನೋವುಗಳನ್ನ ಗುಣಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಗುಣಮಖರಾಗದವರು ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ಗುಣಮುಖರಾಗಿ ತೆರಳುತ್ತಿದ್ದಾರೆ.
ದೇಹದ ಯಾವುದೇ ಭಾಗಗಳಲ್ಲಿ ಉಂಟಾಗುವ ನೋವುಗಳಿಗೆ ಇಲ್ಲಿನ ಈ ಆಶ್ವಾಸ ಟೆಕ್ ಅನ್ನೋ ಥೆರೆಫಿ ಬಹಳಷ್ಟು ಪರಿಣಾಮಕಾರಿಯಾಗಿ ಪರಿಣಮಿಸಿದೆ. ಮಸಾಜ್ ಮಾದರಿಯಲ್ಲೇ ಈ ಚಿಕಿತ್ಸೆ ಇದೆಯಾದ್ರೂ ಇಲ್ಲಿ ಯಾವುದೇ ಔಷದಿಯನ್ನು ಬಳಕೆ ಮಾಡುವುದಿಲ್ಲ. ಕೇವಲ ಕೋಲಿನಲ್ಲಿ ಕಟ್ಟಿರುವ ಬಟ್ಟೆಗಳ ಮೂಲಕ ನೂವಿನ ಜಾಗಕ್ಕೆ ಹದವಾಗಿ ಮಸಾಜ್ ನೀಡುವ ಮೂಲಕ ನೋವನ್ನ ನಿವಾರಿಸಲಾಗುತ್ತೆ.
ಹಾಗಂತ ಗೋವು ನಿವಾರಿಸೋ ವ್ಯಕ್ತಿ ಯಾವುದೇ ಪ್ರತಿಫಲವನ್ನೂ ಪಡೆಯೋದಿಲ್ಲ ಅನ್ನೋದೆ ವಿಶೇಷ. ಅಷ್ಟಕ್ಕೂ ಈ ಚಿಕಿತ್ಸೆ ನೀಡ್ತಾ ಇರೋ ವ್ಯಕ್ತಿಯ ಹೆಸರು ಸಯ್ಯದ್ ಅಬ್ದುಲ್ ಬಷೀರ್. 63 ವರ್ಷ ಪ್ರಾಯದ ಬಷೀರ್ ಸುಮಾರು 19 ವರ್ಷಗಳ ಕಾಲ ಸ್ವತಃ ಬೆನ್ನು ಹುರಿಯ ನೋವಿನಿಂದ ಬಳಲಿದ್ದರು. ಅದಕ್ಕಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ರು. ಆದರೂ ನೋವಿನಿಂದ ಅವರಿಗೆ ಮುಕ್ತಿ ಸಿಕ್ಕಿರಲಿಲ್ಲ. ನೋವು ಗುಣವಾಗದೆ ಜೀವನದಲ್ಲಿ ನೆಮ್ಮದಿಯನ್ನೇ ಕಳೆದುಕೊಂಡಿದ್ದರು. ಅದೊಂದು ದಿನ ಬಷೀರ್ ತಂದೆಯವರು ಬಳಸ್ತಾ ಇದ್ದ ಕೈಕೋಲಿನಿಂದ ಬೆನ್ನಿನ ನೋವಿನ ಭಾಗಕ್ಕೆ ಬಲವಾಗಿ ಒತ್ತಿದಾಗ ವಿಸ್ಮಯಕಾರಿ ರೀತಿಯಲ್ಲಿ ನೋವು ಮಾಯವಾಗಿತ್ತು.ನಂತರದಲ್ಲಿ ಬಷೀರ್ ಸಂಪೂರ್ಣವಾಗಿ ಬೆನ್ನು ನೋವಿನಿಂದಲೇ ಮುಕ್ತಿಯನ್ನು ಪಡೆದುಕೊಂಡಿದ್ದರು. ತನ್ನ ಬಳಿಯಲ್ಲಿದ್ದ ಕೋಲಿನಿಂದ ತನಗಾಗಿರೋ ಅನುಕೂಲವನ್ನು ಇತರರ ಮೇಲೆಯೂ ಪ್ರಯೋಗಿಸೋದಕ್ಕೆ ಮುಂದಾದ್ರು. ಆದರೆ ಬಷೀರ್ ನಡೆಸಿದ ಪ್ರಯೋಗ ಫಲಕೊಟ್ಟಿತ್ತು. ಹೀಗಾಗಿಯೇ ಕಳೆದ ಹಲವು ವರ್ಷಗಳಿಂದಲೂ ಬಷೀರ್ ನೋವಿನ ಹೆಸರೇಳಿ ತನ್ನ ಬಳಿಗೆ ಬರುವವರ ನೋವನ್ನೇ ಮರೆಯಿಸುತ್ತಿದ್ದಾರೆ. ಎಲ್ಲಿಯೂ ಗುಣವಾಗದ ಅದೆಷ್ಟೋ ನೋವುಗಳಿಗೆ ಬಷೀರ್ ಚಿಕಿತ್ಸೆಯನ್ನು ನೀಡಿ ಗುಣಮುಖರಾಗಿಸಿದ್ದಾರೆ. ಅಲ್ಲದೇ ಯಾವ ನೋವನ್ನು ಹೇಗೆ ಮರೆಯಿಸಬೇಕು ಅನ್ನೋದನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಬಷಿರ್ ನೋವಲ್ಲೇ ಬದುಕುತ್ತಿದ್ದವರ ಪಾಲಿಗೆ ಆಶಾಕಿರಣವಾಗಿದ್ದು ಮಾತ್ರವಲ್ಲ, ಅದೆಷ್ಟೋ ಮಂದಿಯ ಕಣ್ಣೀರು ಮರೆಯಿಸಿ ಮುಖದಲ್ಲಿ ನಗುವನ್ನು ಅರಳಿಸುತ್ತಿದ್ದಾರೆ. ನೀವೂ ನೋವಲ್ಲೇ ದಿನದೂಡುತ್ತಿದ್ರೆ ಒಮ್ಮೆ ಬಷೀರ್ ಅವರ ಅಶ್ವಾಸ ಟೆಕ್ ಥೆರಫಿ ಮಾಡಿಸಿಕೊಳ್ಳಿ.

Leave A Reply

Your email address will not be published.