Drinking Salt Water : ಉಪ್ಪು ನೀರಿನ ಸೇವನೆಯಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ..?

Drinking Salt Water :ಆರೋಗ್ಯಯುತವಾದ ಜೀವನ ಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಒತ್ತಡದ ಜೀವನದಿಂದಾಗಿ ಎಲ್ಲರಿಗೂ ಆರೋಗ್ಯಯುತ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಆದರೆ ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಾಗಿಲ್ಲ. ಉಪ್ಪು ಮಿಶ್ರಿತ ನೀರು ನಿಮಗೆ ಅನೇಕ ರೀತಿಯಲ್ಲಿ ಲಾಭವನ್ನು ನೀಡಬಲ್ಲದು. ನಿಮ್ಮ ದೇಹದಲ್ಲಿ ನಿರ್ಜಲೀಕರಣವನ್ನು ತಪ್ಪಿಸುವಲ್ಲಿ ಸಾಲ್ಟ್​ ವಾಟರ್​ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ ಇದು ಮಾತ್ರವಲ್ಲದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸಾಲ್ಟ್​ ವಾಟರ್ ಸೇವನೆ ಮಾಡುವುದರಿಂದ ಇನ್ನೂ ಅನೇಕ ರೀತಿಯ ಲಾಭವಿದೆ.


ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ : ಇದು ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮ ಸಂಬಂಧಿ ಯಾವುದೇ ಸೋಂಕುಗಳು, ಮೊಡವೆಯ ಸಮಸ್ಯೆಗಳು ದೂರಾಗುತ್ತದೆ.


ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಉಪ್ಪು ನೀರನ್ನು ಕುಡಿಯುವುದರಿಂದ ದಿನವಿಡೀ ಉಲ್ಲಾಸದಾಯಕವಾಗಿ ಇರಲಿದೆ. ಉಪ್ಪಿನಲ್ಲಿರುವ ಆಯೋಡಿನ್​ ಅಂಶ ನಮ್ಮ ದೇಹದಲ್ಲಿರುವ ಹೈಡ್ರೋಕ್ಲೋರಿಕ್​ ಆಮ್ಲ ಹಾಗೂ ಪ್ರೋಟಿನ್​ ಜೀರ್ಣಕಾರಿ ಎಂಜೈಮ್​ಗಳನ್ನು ಉತ್ತೇಜಿಸುತ್ತದೆ. ಅಲ್ಲದೆ ಆಹಾರವನ್ನು ಜೀರ್ಣ ಮಾಡಲು ಸಹಕಾರಿ. ಇದು ರಕ್ತದೊತ್ತಡ ಸಮಸ್ಯೆ, ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಸರಿದೂಗಿಸುವುದು ಮಾತ್ರವಲ್ಲದೇ ಬೊಜ್ಜನ್ನು ಕಡಿಮೆ ಮಾಡಲಿದೆ.


ಮೂಳೆಯ ಶಕ್ತಿಯನ್ನು ಹೆಚ್ಚಿಸುತ್ತದೆ : ನಿಮ್ಮ ಮೂಳೆ ಗಟ್ಟಿಯಾಗಿ ಇರಬೇಕು ಅಂದರೆ ಕ್ಯಾಲ್ಶಿಯಂ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಸಾಲ್ಟ್​ ವಾಟರ್​ ಸೇವನೆಯಿಂದ ಹಲ್ಲು ಹಾಗೂ ಮೂಳೆಯ ಶಕ್ತಿ ಹೆಚ್ಚಾಗಲಿದೆ. ಆ್ಯಸಿಡಿಟಿ ಸಮಸ್ಯೆಯನ್ನೂ ದೂರ ಮಾಡುತ್ತದೆ.


ನಿರ್ಜಲೀಕರಣ ವಾಸಿಯಾಗುತ್ತದೆ: ನಿಯಮಿತವಾಗಿ ನೀರು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ವಿಟಾಮಿನ್​ಗಳು ಸರಿಯಾಗಿ ವಿಂಗಡಣೆಯಾಗುತ್ತದೆ. ಇದರಿಂದ ನಿಮ್ಮ ನಿರ್ಜಲೀಕರಣ ಸಮಸ್ಯೆಯೂ ದೂರಾಗುತ್ತದೆ.

ಆ್ಯಸಿಡಿಟಿ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಿಂಪಲ್​ ಮನೆಮದ್ದು

ನಮ್ಮಲ್ಲಿ ಏನಾದರೊಂದು ಕಾರ್ಯಕ್ರಮ ಇಲ್ಲವೇ ಔತಣ ಕೂಟಗಳು ಆಯ್ತು ಅಂದರೆ ಸಾಕು ಭೂರಿ ಭೋಜನಕ್ಕೇನು ಕಡಿಮೆ ಇರೋದಿಲ್ಲ. ಅತಿಥಿಗಳು ಹಾಗೂ ಸಂಬಂಧಿಗಳ ಜೊತೆ ಹರಟೆ ಹೊಡೆಯುತ್ತಾ ಹೊಟ್ಟೆಗೆ ಎಷ್ಟು ಆಹಾರ ಹೋಯ್ತು ಅನ್ನೋದೇ ನೆನಪಿರೋದಿಲ್ಲ. ಆದರೆ ಅತಿಯಾದ ತಿನ್ನುವಿಕೆಯಿಂದ ಒಮ್ಮೊಮ್ಮೆ ಆ್ಯಸಿಡಿಟಿ ಉಂಟಾಗಬಹುದು. ಎಣ್ಣೆಯುಕ್ತ ಆಹಾರಗಳನ್ನು , ಅಥವಾ ಜೀರ್ಣವಾಗದಂತಹ ಆಹಾರಗಳನ್ನು ಅತಿಯಾಗಿ ಸೇವಿಸಿದಾಗ ನಿಮಗೆ ಆ್ಯಸಿಡಿಟಿ ಉಂಟಾಗುತ್ತದೆ. ಇದರಿಂದ ನೀವು ಪಾರಾಗಬೇಕು ಅಂದರೆ ಕೆಲವು ಮನೆ ಮದ್ದುಗಳನ್ನು ಬಳಕೆ ಮಾಡಬಹುದು.

ಸೋಂಪು ಅಥವಾ ಬಡೆಸೊಪ್ಪು : ನಮ್ಮಲ್ಲಿ ಊಟದ ನಂತರ ಸೋಂಪನ್ನು ತಿನ್ನುವ ಅಭ್ಯಾಸವಿದೆ. ಇದು ನಿಜಕ್ಕೂ ಒಳ್ಳೆಯ ಅಭ್ಯಾಸ. ಊಟದ ಬಳಿಕ ನೀವು ಸೋಂಪನ್ನು ಸೇವನೆ ಮಾಡಿದಲ್ಲಿ ಆ್ಯಸಿಡಿಟಿ ಸಮಸ್ಯೆಯು ನಿಮ್ಮನ್ನು ಕಾಡುವುದಿಲ್ಲ. ಹೀಗಾಗಿ ನೀವು ಭರ್ಜರಿ ಊಟದ ಬಳಿಕ ಒಂದು ಚಮಚ ಸೋಂಪು ಅಥವಾ ಸೋಂಪು ಚಹವನ್ನು ಮಾಡಿ ಸೇವಿಸುವ ಮೂಲಕ ಆ್ಯಸಿಡಿಟಿಯಿಂದ ಮುಕ್ತಿ ಹೊಂದಬಹುದಾಗಿದೆ.

ಬೆಲ್ಲ : ನಮ್ಮಲ್ಲಿ ಊಟದ ಕೊನೆಯಲ್ಲಿ ಸಿಹಿ ಪದಾರ್ಥವನ್ನು ನೀಡುವ ಪದ್ಧತಿಯೊಂದಿದೆ. ಇದು ನಿಮಗೆ ಆ್ಯಸಿಡಿಟಿಯಂತಹ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಬೆಲ್ಲವು ನಿಮ್ಮ ಕರುಳಿನ ಶಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಇದರಿಂದ ನಿಮಗೆ ಜೀರ್ಣಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಉಂಟಾಗೋದಿಲ್ಲ.

ತಣ್ಣನೆಯ ಹಾಲು : ಒಂದು ಲೋಟ ತಣ್ಣನೆಯ ಹಾಲು ಸೇವಿಸುವ ಮೂಲಕ ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ. ಹೀಗಾಗಿ ನೀವು ಆ್ಯಸಿಡಿಟಿ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿದ ಕೂಡಲೇ ತಣ್ಣನೆಯ ಹಾಲನ್ನು ಸೇವನೆ ಮಾಡುವುದು ಉತ್ತಮ.

ಮೊಸರು : ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಲು ನೀವು ಬಳಕೆ ಮಾಡಬಹುದಾದ ಮತ್ತೊಂದು ಡೈರಿ ಪದಾರ್ಥವೆಂದರೆ ಮೊಸರು. ಮೊಸರು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡುವುದರಿಂದ ನೀವು ಊಟದ ಕೊನೆಯಲ್ಲಿ ಮೊಸರು ಸೇವನೆ ಮಾಡಿದಲ್ಲಿ ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.

ಎಳನೀರು : ಬೇಸಿಗೆ ಸಮಯದಲ್ಲಿ ಎಳನೀರು ತುಂಬಾನೇ ಒಳ್ಳೆಯದು ಎಂದು ಹೇಳುತ್ತಾರೆ. ನೀವು ಎಳನೀರನ್ನು ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿರುವ ಪಿಹೆಚ್​​ ಆ್ಯಸಿಡಿಕ್​​ ಲೆವೆಲ್​ ಅಲ್ಕಲಿನ್​ ಆಗಿ ಮಾರ್ಪಾಡಾಗುತ್ತದೆ. ಇದರಿಂದ ನಿಮ್ಮ ಆ್ಯಸಿಡಿಟಿ ಸಮಸ್ಯೆ ವಾಸಿಯಾಗುತ್ತದೆ.

6 Most Surprising Health Benefits of Drinking Salt Water In The Morning

ಇದನ್ನು ಓದಿ : Isabgol Health Benefits : ದೇಹದ ತೂಕ ಇಳಿಸಲು ಇಸಾಬ್‌ಗೋಲ್ ಬಳಕೆ ಅತ್ಯುತ್ತಮ; ಇನ್ನೂ ಉಂಟು ಪ್ರಯೋಜನ

ಇದನ್ನೂ ಓದಿ : Coconut Water Benefits : ದೇಹ ಜೀವ ಎರಡಕ್ಕೂ ಆಧಾರ ಎಳನೀರು; ಹೊಸವರ್ಷದ ಮೊದಲ ದಿನ ಒಂದು ಬೊಂಡ ಹೀರಿಬಿಡೋಣ

Comments are closed.