Vaastu tips for married Life : ಸುಖವಾದ ದಾಂಪತ್ಯ ಜೀವನಕ್ಕೆ ಇಲ್ಲಿದೆ ನೋಡಿ ವಾಸ್ತು ಟಿಪ್ಸ್​

Vaastu tips  : ವೈವಾಹಿಕ ಜೀವನ ಸುಖಮಯವಾಗಿ, ಶಾಂತಿಯುತವಾಗಿ ಇರಬೇಕು ಎಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ..? ಆದರೆ ಕೆಲವೊಮ್ಮೆ ನಾವೆಷ್ಟೇ ಪ್ರಯತ್ನಪಟ್ಟರೂ ಸಹ ದಾಂಪತ್ಯ ಜೀವನ ಅನ್ನೋದು ಕಬ್ಬಿಣದ ಕಡಲೆಯಂತಾಗಿ ಬಿಡುತ್ತದೆ. ದಾಂಪತ್ಯದ ರಥ ಹಳಿ ತಪ್ಪಿತು ಅಂದರೆ ಸಾಕು ಜೀವನವೇ ನಾಶವಾದಂತೆ. ಹೀಗಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆ ಇರದೇ ಸದಾ ಕಾಲ ಸುಖ ನೆಲೆಸಬೇಕು ಅಂದರೆ ನೀವು ವಾಸ್ತು ಪ್ರಕಾರ ನಡೆದುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾದರೆ ಇದಕ್ಕಾಗಿ ನೀವು ಮಾಡಬೇಕಾದದ್ದು ಏನು ಇಲ್ಲಿದೆ ಮಾಹಿತಿ :

ಬೆಡ್​ರೂಮಿನ ಕಿಟಕಿಗಳು : ಬೆಡ್​ರೂಮಿನಲ್ಲಿ ಕಿಟಕಿಗಳು ಇರಲೇಬೇಕು. ಇದು ದಾಂಪತ್ಯ ಜೀವನದಲ್ಲಿನ ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿ. ಅಲ್ಲದೇ ದಂಪತಿಯ ನಡುವೆ ಪರಸ್ಪರ ಪ್ರೀತಿ ಹಾಗೂ ಕಾಳಜಿ ಸದಾ ನೆಲೆಸಿರುತ್ತದೆ ಎಂದು ಹೇಳುತ್ತೆ ವಾಸ್ತುಶಾಸ್ತ್ರ.

ಕನ್ನಡಿ : ವಾಸ್ತು ಪ್ರಕಾರ ಬೆಡ್​ರೂಮಿನಲ್ಲಿ ಕನ್ನಡಿಗಳನ್ನು ಇಡೋದು ಶುಭದಾಯಕವಾಗಿದೆ. ಇದು ದಂಪತಿ ನಡುವಿನ ಕಲಹಗಳನ್ನು ಕಡಿಮೆ ಮಾಡುತ್ತದೆ.

ಲವ್​ ಬರ್ಡ್ಸ್​ : ಲವ್​ ಬರ್ಡ್​ಗಳ ಫೋಟೋಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿ ಹಾಕಿಕೊಂಡರೆ ಪತಿ ಪತ್ನಿ ನಡುವಿನ ಪ್ರೀತಿ ಕೂಡ ಹೆಚ್ಚುತ್ತದೆ. ಈ ಹಕ್ಕಿಗಳು ಪ್ರೀತಿಯ ಸಂಕೇತವಾಗಿರೋದ್ರಿಂದ ನಿಮ್ಮ ನಡುವೆಯೂ ಪ್ರೀತಿ ಹೆಚ್ಚಲಿದೆ.

ಎಲೆಕ್ಟ್ರಾನಿಕ್​ ಸಾಧನಗಳು ಬೇಡ : ಎಲೆಕ್ಟ್ರಾನಿಕ್​ ಸಾಧನಗಳನ್ನು ಆದಷ್ಟು ನಿಮ್ಮ ಬೆಡ್ ರೂಮಿನಿಂದ ದೂರವೇ ಇಡಿ. ಇದು ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುವುದರಿಂದ ವಾಸ್ತು ಪ್ರಕಾರ ಎಲೆಕ್ಟ್ರಾನಿಕ್​ ಸಾಧನಗಳಿಗೆ ಒಳ್ಳೆಯ ಮಹತ್ವ ನೀಡಲಾಗುವುದಿಲ್ಲ.

ಬಾಡಿದ ಹೂಗಳು : ಯಾವುದೇ ಕಾರಣಕ್ಕೂ ನಿಮ್ಮ ಮಲಗುವ ಕೋಣೆಯಲ್ಲಿ ಬಾಡಿದ ಅಥವಾ ಹಳಸಿದ ಹೂವುಗಳನ್ನು ಇಡಬೇಡಿ. ಇದರಿಂದ ಪತಿ – ಪತ್ನಿ ನಡುವಿನ ಸಂಬಂಧ ಕೂಡ ಹಳಸುವ ಸಾಧ್ಯತೆ ಇರುತ್ತದೆ.

ಮಲಗುವ ಭಂಗಿ : ಹೆಂಡತಿ ಎಂದಿಗೂ ತನ್ನ ಪತ್ನಿಯ ಎಡಗಡೆ ಮಲಗಬೇಕು. ಹಾಗೂ ಒಬ್ಬರು ಒಂದೇ ದೊಡ್ಡ ದಿಂಬನ್ನು ಬಳಕೆ ಮಾಡಬೇಕು. ಇದರಿಂದ ಪತಿ – ಪತ್ನಿ ನಡುವೆ ಪ್ರೀತಿ ಹೆಚ್ಚಾಗಲಿದೆ.


ಸರಿಯಾದ ಬಣ್ಣ : ಪತಿ ಪತ್ನಿ ಮಲಗುವ ಕೋಣೆಯ ಬಣ್ಣ ತಿಳಿ ಹಸಿರು ಬಣ್ಣದ್ದಾಗಿರಬೇಕು. ಯಾವುದೇ ಕಾರಣಕ್ಕೂ ಬೆಡ್​ ರೂಮ್​ಗಳಲ್ಲಿ ಗಾಢವಾದ ಬಣ್ಣಗಳ ಬಳಕೆ ಸಲ್ಲದು. ತಿಳಿ ಗುಲಾಬಿ ಹಾಗೂ ತಿಳಿ ಹಸಿರು ಬಣ್ಣಗಳನ್ನು ವಾಸ್ತು ಶಾಸ್ತ್ರದಲ್ಲಿ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಇದನ್ನು ಓದಿ : kitchen : ವಾಸ್ತು ಪ್ರಕಾರ ಅಡುಗೆ ಕೋಣೆಯ ಗೋಡೆ ಬಣ್ಣ ಹೇಗಿರಬೇಕು ಗೊತ್ತಾ..?

ಇದನ್ನೂ ಓದಿ : Surya Temple : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ

Vaastu tips for a happily married life

Comments are closed.