Health Mantras: ಈ ಮಾರ್ಗಗಳನ್ನು ಅನುಸರಿಸಿ ; ಕ್ಯಾನ್ಸರ್‌ನಿಂದ ದೂರವಿರಿ

ಕ್ಯಾನ್ಸರ್ ಎನ್ನುವುದು ದೇಹದ ಯಾವುದಾದರೂ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಯಿಂದ ಸಂಭವಿಸುವ ರೋಗವಾಗಿದೆ. ನಮ್ಮ ಜೀವನಶೈಲಿ ಆಯ್ಕೆ ಗಳಿಂದ ಕ್ಯಾನ್ಸರ್ (Cancer Treatment) ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳು ಪರಿಣಾಮ ಬೀರುತ್ತವೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸುತ್ತವೆ. (Health Mantras) ಇನ್ನೊಂದು ವರದಿಯ ಪ್ರಕಾರ ಧೂಮಪಾನ ಮತ್ತು ಮದ್ಯಪಾನ ಸೇವನೆಯು ಶ್ವಾಸಕೋಶ, ಅನ್ನನಾಳ, ಬಾಯಿ, ಗಂಟಲು, ಮೂತ್ರಪಿಂಡ, ಮೂತ್ರಕೋಶ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ, ಕೊಲೊನ್ ಮತ್ತು ಗುದನಾಳದ ಕಾನ್ಸರ್‌ಗೆ ಕಾರಣವಾಗುತ್ತದೆ.

ಇವೆಲ್ಲವನ್ನೂ ಬರದಂತೆ ತಡೆಯಲು ಆಹಾರ ಹಾಗೂ ಜೀವನಶೈಲಿಯಿಂದ ನಾವು ಹೇಗೆಲ್ಲ ಜಾಗ್ರತೆ ವಹಿಸಬೇಕು ಎಂದು ಏಷ್ಯನ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕುಂಬಲ್ಲಾ ಹಿಲ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಸ್ಟ್ ಮತ್ತು ಹೆಮಟೋ-ಆಂಕೊಲಾಜಿಸ್ಟ್ ಡಾ ಸುಹಾಸ್ ಆಗ್ರೆ  ಸರಳ ಉಪಾಯಗಳನ್ನು ಹಂಚಿಕೊಂಡಿದ್ದಾರೆ.

*ತಂಬಾಕು ಸೇವನೆ ತ್ಯಜಿಸಿ: ತಂಬಾಕು ಸೇವನೆ ಬಾಯಿ ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಗೆ ಮುಖ್ಯ ಕಾರಣವಾಗಿದೆ.

ನೀವು ತಂಬಾಕು ಬಳಸದಿದ್ದರೂ, ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶದ ಕ್ಯಾನ್ಸರ್ ಅನ್ನು  ಆಹ್ವಾನಿಸುತ್ತದೆ. ಹೀಗಾಗಿ, ಯಾವುದೇ ವೆಚ್ಚದಲ್ಲಿ ತಂಬಾಕು ಸೇವನೆ ತಪ್ಪಿಸಿ. ಹುಕ್ಕಾ, ಸಿಗಾರ್‌ಗಳು, ಮತ್ತು ಸಿಗರೇಟ್‌ಗಳನ್ನು ತಪ್ಪಿಸಿ. ಧೂಮಪಾನವನ್ನು ತೊರೆಯಲು, ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡಲು ಸಾಧ್ಯವಾಗುವ ವೈದ್ಯರನ್ನು ಸಂಪರ್ಕಿಸಿ. ಇಲ್ಲವೇ ಧೂಮಪಾನ ನಿಲುಗಡೆಗೆ ಸಂಬಂಧಿಸಿದ ಕಾರ್ಯಕ್ರಮ ಆಯ್ದುಕೊಳ್ಳಬಹುದು.

*ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ:

ಆರೋಗ್ಯ ಹೆಚ್ಚಿಸಲು ಮತ್ತು ಎಲ್ಲಾ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ ಕ್ಯಾನ್ಸರ್ ಅನ್ನು  ದೂರವಿಡಲು ಸಾಧ್ಯ. ತಾಜಾ ಹಣ್ಣುಗಳು, ತರಕಾರಿಗಳು, ಬೀಜಗಳು, ಧಾನ್ಯಗಳು ಮತ್ತು ಬೀನ್ಸ್ ತಿನ್ನಲು ಪ್ರಯತ್ನಿಸಿ. ಟ್ರಾನ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ತಪ್ಪಿಸಿ. ಕರಿದ ಆಹಾರಗಳನ್ನು ಕಡಿಮೆ ಮಾಡಿ.  ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು ಸಹ ನಿಮಗೆ ಪ್ರಯೋಜನಕಾರಿಯಾಗಿದೆ. ಸಾಧ್ಯವಾದಷ್ಟು ಮನೆ ಊಟಕ್ಕೆ ಪ್ರಾಧಾನ್ಯತೆ ನೀಡಿ.

ಸ್ಥೂಲಕಾಯತೆ ಮತ್ತು ಹೆಚ್ಚಿದ ಆಲ್ಕೋಹಾಲ್ ಸೇವನೆಯಿಂದಾಗಿ ಸ್ತನ ಕ್ಯಾನ್ಸರ್ ಕಂಡುಬರುತ್ತದೆ. ಇದಲ್ಲದೆ, ಸೂರ್ಯನ ನೇರಳಾತೀತ ವಿಕಿರಣಕ್ಕೆ ಚರ್ಮವನ್ನು ಒಡ್ಡಿಕೊಳ್ಳುವುದರಿಂದ ಹೆಚ್ಚಿನ ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ. ರೋಗಮುಕ್ತ ಜೀವನ ನಡೆಸಲು ಪ್ರಯತ್ನಿಸಲು ಕೆಲವು ಮಾರ್ಗಗಳನ್ನು ಅನುಸರಿಸಬಹುದಾಗಿದೆ.

ಇದನ್ನೂ ಓದಿ: ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

( Health Mantras : Adopt These Health Mantras to avoid cancer)

Comments are closed.