Aditi Rao Hydari and Siddharth :ತಮಿಳು ನಟ ಸಿದ್ದಾರ್ಥ್‌ ಮತ್ತು ಅದಿತಿ ರಾವ್‌ ಹೈದರಿ ಪ್ರೀತಿಯಲ್ಲಿ ಬಿದ್ದಿರುವುದು ನಿಜಾನಾ?

(Aditi Rao Hydari and Siddharth)ಬಹುಭಾಷಾ ನಟಿ ಅದಿತಿ ರಾವ್‌ ಹೈದಿರಿ ಮತ್ತು ತಮಿಳಿನ ಖ್ಯಾತ ನಟ ಸಿದ್ದಾರ್ಥ್‌ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ವಿಚಾರ ಸಖತ್‌ ಸುದ್ದಿ ಮಾಡುತ್ತಿತ್ತು. ಇದೀಗ ಇವರಿಬ್ಬರ ವಿಚಾರ ಮತ್ತೆ ಚರ್ಚೆಗೆ ಗುರಿಯಾಗುತ್ತಿದೆ. ಅದಿತಿ ರಾವ್‌ ಹೈದಿರಿ ಶುಕ್ರವಾರದಂದು 36ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ . ತಮಿಳಿನ ಖ್ಯಾತ ನಟ ಸಿದ್ದಾರ್ಥ್‌ ಕೂಡ ತಮ್ಮ ಇನ್ಟಾಗ್ರಾಂ ನಲ್ಲಿ ಪೋಸ್ಟ್‌ ಹಾಕುವ ಮೂಲಕ ವಿಶ್‌ ಮಾಡಿದ್ದಾರೆ. ನಟ ಸಿದ್ದಾರ್ಥ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ನಿಂದಾಗಿ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿಸುತ್ತಿದೆ .

(Aditi Rao Hydari and Siddharth)ಈ ಹಿಂದೆಯು ಕೂಡ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವಿಚಾರ ವೈರಲ್‌ ಆಗಿತ್ತು. ಮುಂಬೈ ಏರ್ಪೋಟಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಇವರಿಬ್ಬರು ಪ್ರೀತಿಯಲ್ಲಿ ಇದ್ದಾರೆ ಎನ್ನುವ ವಿಚಾರ ಹರಿದಾಡುತ್ತಿತ್ತು. ಇತ್ತೀಚಿಗಷ್ಟೆ ಇವರಿಬ್ಬರು ಮಹಾ ಸಮುದ್ರಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹಾಗಾಗಿ ಈ ಸೆಟ್ ನಲ್ಲೇ ಇವರಿಬ್ಬರ ಪ್ರೀತಿ ಚಿಗುರಿದ್ದು ಎನ್ನಲಾಗುತ್ತಿದೆ. ಈ ಸಿನಿಮಾ ಆದ ಬಳಿಕವೂ ಕೂಡ ಇವರಿಬ್ಬರು ಹೆಚ್ಚಾಗಿ ಹೊರಗಡೆ ಕಾಣಿಸಿಕೊಂಡಿದ್ದಾರೆ.

ಸಿದ್ದಾರ್ಥ್‌ ಹುಟ್ಟು ಹಬ್ಬಕ್ಕೆ ಅದಿತಿ ರಾವ್‌ ಹೈದಿರಿ ವಿಶ್‌ ಮಾಡಿದ್ದರು. ಇದೀಗ ಸಿದ್ಧಾರ್ಥ್‌ ಕೂಡ ವಿಶ್‌ ಮಾಡಿರುವುದು ಇಬ್ಬರ ನಡುವಿನ ಪ್ರೀತಿ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಸಿದ್ಧಾರ್ಥ್‌ ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಅವರಿಬ್ಬರು ಜೊತೆಯಲ್ಲಿರುವ ಪೋಟೋವನ್ನು ಹಾಕುವ ಮೂಲಕ ಜನ್ಮದಿನದ ಶುಭಾಶಯಗಳು ಹೃದಯ ರಾಜಕುಮಾರಿ, ನಾನು ಪ್ರಾರ್ಥಿಸುತ್ತೇನೆ ನಿಮ್ಮ ಎಲ್ಲಾ ಕನಸುಗಳು ದೊಡ್ಡದಾಗಲಿ, ಚಿಕ್ಕದಾಗಲಿ ಮತ್ತು ಕಾಣದಿರುವುದು, ಯಾವಾಗಲೂ ನನಸಾಗಲಿ,ಯಾವಾಗಲೂ ನಿಮಗಾಗಿ ಸಿದ್ದಾರ್ಥ್‌ ಎಂಬ ಸಾಲನ್ನು ಹಾಕುವ ಮೂಲಕ ಹಾರೈಸಿದ್ದಾರೆ.

ಇದನ್ನೂ ಓದಿ:ashwini puneeth rajkumar:ಅಪ್ಪು ಮನೆಯಲ್ಲಿ ಒಪ್ಪಿದ್ರೂ, ಅಶ್ವಿನಿ ಮನೆಯಲ್ಲಿ ಒಪ್ಪಿರಲಿಲ್ಲ : ಹೀಗಿತ್ತು ಪುನೀತ್​​ ಮದುವೆ ಕಹಾನಿ

ಇದನ್ನೂ ಓದಿ:Punith Rajkumar : ಅಪ್ಪು ಜೀವನ ಸಾಧನೆ ಶಾಲಾ ಪಠ್ಯಕ್ಕೆ ಸೇರಿಸಿ : ಸಿಎಂ ಬೊಮ್ಮಾಯಿಗೆ ಅಭಿಮಾನಿಗಳ ಮನವಿ

ಅಂದಹಾಗೆ ಸದ್ಯ ಅದಿತಿ ರಾವ್‌ ಹೈದಿರಿ ಸಿನಿರಂಗದಲ್ಲಿ ಬ್ಯುಸಿಯಾಗಿದ್ದು, ದುಲ್ಕರ್‌ ಸಲ್ಮಾನ್‌ ಮತ್ತು ಕಾಜಲ್‌ ಅಗರ್ವಾಲ್‌ ಜೊತೆಗೆ ರೋಮ್ಯಾಂಟಿಕ್‌ ಕಾಮಿಡಿ ಹೇ ಸಿನಾಮಿಕಾದಲ್ಲಿ ಬಣ್ಣ ಹಚ್ಚಿದ್ದಾರೆ. ಅವರ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಸೈಲೆಂಟ್‌ ಪಿಲ್ಮ್‌ ಗಾಂಧಿ ಟಾಕ್ಸ್‌ ನಲ್ಲಿ ನಟಿಸಲಿದ್ದಾರೆ. ವಿಜಯ್‌ ಸೇತುಪತಿ, ಅರವಿಂದ್‌ ಸ್ವಾಮಿ ಮತ್ತು ಸಿದ್ದಾರ್ಥ್‌ ಜಾಧವ್‌ ಈ ಮೂವರು ನಟನೆಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Tamil actor Siddharth and Aditi Rao Hydari are in love

Comments are closed.