Apricot Health Benefits: ಈ ಹಣ್ಣಿನ ಪ್ರಯೋಜನಗಳು ನಿಮಗೆ ಗೊತ್ತಾ? ಒಮ್ಮೆ ತಿಳಿದರೆ ನೀವು ಸೇವಿಸದೇ ಇರಲು ಸಾಧ್ಯವೇ ಇಲ್ಲ!

ನೋಡಲು ಚಿಕ್ಕದಾಗಿದ್ದರೂ, ಸುವಾಸನೆ ಮತ್ತು ಪೋಷಣೆಯ ವಿಷಯದಲ್ಲಿ ದೊಡ್ಡ ಪ್ಯಾಕ್‌ ಅನ್ನೇ ಒಳಗೊಂಡಿರುವ ಹಣ್ಣು ಎಂದರೆ ಏಪ್ರಿಕೊಟ್‌ಗಳು (Apricot Health Benefits). ವಿಟಮಿನ್‌ ಮತ್ತು ಮಿನರಲ್‌ಗಳು ಅಧಿಕವಾಗಿರು ಹಳದಿ–ಕೇಸರಿ ಮಿಶ್ರಿತ ಸಿಹಿಯಾದ ಹಣ್ಣಾಗಿದೆ. ಇದರ ಸಿಹಿಯು ಹಣ್ಣಿನ ಬೇರೆ ಬೇರೆ ತಳಿಗಳ ಮೇಲೆ ಅವಲಂಬಿತವಾಗಿದೆ. ಚೆನ್ನಾಗಿ ಬಲಿತ ಹಣ್ಣಿನ ಹೊರಗಿನ ಸಿಪ್ಪೆಯು ಮೃದುವಾಗಿದ್ದು, ಒಳಗಡೆ ರಸಭರಿತವಾಗಿರುತ್ತದೆ. ಈ ಹಣ್ಣಿನ ಆರೋಗ್ಯ ಪ್ರಯೋಜನಗಳನ್ನು ತಿಳಿಯುವುದು ಅತಿ ಮುಖ್ಯ ಏಕೆಂದರೆ, ಇದು ದೇಹಕ್ಕೆ ಬೇಕಾದ ಉಪಯುಕ್ತ ಪೋಷಕಾಂಶಗಳಿಂದ ಕೂಡಿದೆ. ಏಪ್ರಿಕೊಟ್‌ನಲ್ಲಿ ವಿಟಮಿನ್‌ ಮತ್ತು ಮಿನರಲ್‌ಗಳು ಹೇರಳವಾಗಿದ್ದು, ಆರೋಗ್ಯವನ್ನು ಸುಧಾರಿಸುತ್ತದೆ. ಅಜೀರ್ಣ, ಮಲಬದ್ಧತೆ, ಮತ್ತು ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ. ಈ ಹಣ್ಣಿನ ಪ್ರಯೋಜನಗಳನ್ನು ತಿಳಿದರೆ ನೀವು ಕೂಡ ಸೇವಿಸಲು ಪ್ರಾರಂಭಿಸುತ್ತೀರಿ.

ಏಪ್ರಿಕೊಟ್‌ನ ಆರೋಗ್ಯ ಪ್ರಯೊಜನಗಳು:

1 ಆರೋಗ್ಯಪೂರ್ಣ ತ್ವಚೆಗೆ:
ಏಪ್ರಿಕೊಟ್‌ ವಿಟಮಿನ್‌ ಎ, ಸಿ ಮತ್ತು ಫೈಟೊನ್ಯುಟ್ರಿಯಂಟ್ಸ್‌ಗಳ ಸಂಯೋಜನೆಯನ್ನು ಹೊಂದಿದೆ. ಇದು ತ್ವಚೆಗೆ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿಯ ಆಂಟಿಒಕ್ಸಿಡೆಂಟ್‌ಗಳು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗಿಸುತ್ತದೆ. ತ್ವಚೆಗೆ ಉತ್ತಮವಾಗರುವ ಈ ಹಣ್ಣನ್ನು ದಿನನಿತ್ಯ ಸೇವಿಸಿ. ಆಂಟಿಒಕ್ಸಿಡೆಂಟ್‌ ಅಧಿಕವಾಗಿರುವ ಏಪ್ರಿಕೊಟ್‌ ತ್ವಚೆಯ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.

2 ಕೊಲೆಸ್ಟ್ರಾಲ್‌ ಮತ್ತು ಸಕ್ಕರೆಯ ಅಂಶವನ್ನು ನಿಯಂತ್ರಿಸಲು:
ಒಂದು ಬಟ್ಟಲು ಏಪ್ರಿಕೊಟ್‌ ಅಂದಾಜು 3 ಗ್ರಾಂಗಳಷ್ಟು ಫೈಬರ್‌ ಹೊಂದಿದೆ. ನೀವು ಸೇವಿಸುವ ಆಹಾರದಲ್ಲಿ ಫೈಬರ್‌ ಸರಿಯಾಗಿ ಇಲ್ಲವೆಂದು ಅನಿಸುತ್ತಿದ್ದರೆ ಏಪ್ರಿಕೊಟ್‌ ಸೇವಿಸಿ. ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಏಪ್ರಿಕೊಟ್‌ ಕರಗುವ ಮತ್ತು ಕರಗದ ಪೈಬರ್‌ ಹೊಂದಿದ್ದರೂ, ಕರಗುವ ಫೈಬರ್‌ ಅಂಶವು ಹೆಚ್ಚು ಇದೆ. ಈ ಫೈಬರ್‌ ನಿಮ್ಮ ಕೊಲೆಸ್ಟ್ರಾಲ್‌ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Cooling Drinks : ದೇಹಕ್ಕೆ ತಂಪೆರೆಯುವ ತಂಪು ಪಾನೀಯಗಳು: ಈ ತಂಪು ಪಾನೀಯಗಳಿಂದ ಬಿಸಿಲಿನ ಬೇಗೆಯನ್ನು ಶಮನಗೊಳಿಸಿಕೊಳ್ಳಿ

3 ಅನಿಮಿಯಾ ಹೋಗಲಾಡಿಸಲು:
ಎಲ್ಲಾ ಸಸ್ಯಗಳಲ್ಲಿರುವಂತೆಯೇ ಏಪ್ರಿಕೊಟ್‌ ನಲ್ಲಿಯೂ ಸಹ ಹೀಮ್‌ ಅಲ್ಲದ ಕಬ್ಬಿಣದ ಅಂಶವಿದೆ. ಈ ರೀತಿಯ ಕಬ್ಬಿಣವು ಹೀರಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದು ನಿಮ್ಮ ದೇಹದಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಇದರಿಂದ ರಕ್ತಹೀನತೆಯನ್ನು ತಡೆಗಟ್ಟುವ ಸಾಧ್ಯತೆಗಳು ಹೆಚ್ಚು. ಹೀಮ್‌ ಅಲ್ಲದ ಕಬ್ಬಿಣದ ಹೀರಿಕೊಳ್ಳುವಿಕೆಗೆ ಸಹಾಯ ಮಾಡಲು ಹೆಚ್ಚು ಹೆಚ್ಚು ವಿಟಮಿನ್‌ ಸಿ ಅನ್ನು ಸೇವಿಸುವುದು ಸಹ ಒಳ್ಳೆಯದು.

4 ಮಲಬದ್ಧತೆ ತಡೆಯಲು:

ಏಪ್ರಿಕೊಟ್‌ನಲ್ಲಿರುವ ಅಧಿಕ ನಾರಿನಾಂಶವು ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸೆಲ್ಯುಲೋಸ್‌ ಮತ್ತು ಪಿಕ್ಟಿನ್‌ಗಳು ಮಲಬದ್ಧತೆಗೆ ಚಿಕಿತ್ಸೆ ಉತ್ತಮವಾಗಿದೆ. ಒಣಗಿದ ಮತ್ತು ತಾಜಾ ಏಪ್ರಿಕೊಟ್‌ ಇವೆರಡರಲ್ಲೂ ಫೈಬರ್‌ ಅಂಶವಿದೆ. ಇದು ಜೀರ್ಣಕ್ರಿಯಯಲ್ಲಿ ಪಾಲ್ಗೊಳ್ಳುವ ಡೈಜಸ್ಟೀವ್‌ ಜ್ಯೂಸ್‌ ಮತ್ತು ಗ್ಯಾಸ್ಟ್ರೀಕ್‌ ಜ್ಯೂಸ್‌ಗಳನ್ನು ಹೀರಿಕೊಳ್ಳುತ್ತವೆ. ಇದರಲ್ಲಿಯ ಕರಗುವ ಫೈಬರಗಳು ದೇಹದಲ್ಲಿ ಬೇಗನೆ ಕರಗುವುದರಿಂದ ಪ್ಯಾಟಿ ಎಸಿಡ್‌ ಮತ್ತು ಜೆಲ್‌ಗಳನ್ನು ಕರಗಿಸಲು ಸಹಾಯಮಾಡುತ್ತದೆ. ಈ ಎಸಿಡ್‌ಗಳು ಆಹಾರದ ಕಣಗಳನ್ನು ಕರಗಿಸುವುದರಿಂದ ಮಲವಿಸರ್ಜನೆ ಸರಾಗವಾಗುತ್ತದೆ.

5 ಹೃದಯದ ಆರೋಗ್ಯಕ್ಕೆ:
ಅತಿಯಾದ ಕೊಲೆಸ್ಟ್ರಾಲ್‌ ಹೃದಯದ ಕಾಯಿಲೆಗಳಿಗೆ ಒಂದು ಬಹು ಮುಖ್ಯ ಕಾರಣ. ಏಪ್ರಿಕೊಟ್‌ನಲ್ಲಿರುವ ನಾರಿನಾಂಶವು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಪ್ರಿಕೊಟ್‌ ಫೈಬರ್‌, ಪೊಟ್ಯಾಸಿಯಂ, ಮತ್ತು ವಿಟಮಿನ್‌ ಸಿ ಒಳಗೊಂಡಿದೆ. ಇವೆಲ್ಲವೂ ಒಟ್ಟಿಗೆ ಕೆಲಸ ಮಾಡಿ ಫ್ರೀ ರ್‍ಯಾಡಿಕಲ್‌ ಮತ್ತು ಅಧಿಕ ರಕ್ತದೊತ್ತಡದ ವಿರುದ್ದ ಹೋರಾಡಿ ಹೃದಯದ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ : Pineapple Jam : ಪೈನಾಪಲ್‌ ಜಾಮ್‌ ಸವಿದಿದ್ದೀರಾ? ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ!!

(Apricot Health Benefits Reasons to eat this summer fruit)

Comments are closed.