Hair fall solutions :ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ?ಹಾಗಿದ್ದರೆ ಈ ಮೂರು ಪದಾರ್ಥಗಳನ್ನು ಸೇವಿಸಿ

(Hair fall solutions )ಕೂದಲು ಉದುರುವಂತಹ ಸಮಸ್ಯೆ ಪುರುಷ ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿ ಆಗುವ ಪ್ರದೂಷಣೆಯಿಂದ ಹಾಗೂ ನಾವು ಸೇವಿಸುವಂತಹ ಆಹಾರ ಕ್ರಮವೂ ಕೂದಲು ಉದುರುವ ಸಮಸ್ಯೆಗೆ ಕಾರಣವಾಗುತ್ತದೆ. ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡಲು ಕರಿಬೇವು, ದಾಸವಾಳ ಹೂವು, ಅಳವಿ(ಆಳ್ವಿ ) ಬೀಜವನ್ನು ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Hair fall solutions )ಕರಿಬೇವು
ಕರಿಬೇವಿನಲ್ಲಿ ಕ್ಯಾಲ್ಸಿಯಂ,ರಂಜಕ,ಕಬ್ಬಿಣ,ವಿಟಮಿನ್‌ ಸಿ ಮತ್ತು ವಿಟಮಿನ್‌ ಎ ಮುಂತಾದ ಪೋಷಕಾಂಶಗಳು ಹೇರಳವಾಗಿ ಇರುವುದರಿಂದ ಹಲವು ಆರೋಗ್ಯಕಾರಿ ಗುಣವನ್ನು ಹೊಂದಿದೆ. ಕರಿಬೇವು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೊಟ್ಟೆನೋವನ್ನು ನಿವಾರಣೆ ಮಾಡಿ ಅಜೀರ್ಣ ಸಮಸ್ಯೆಯನ್ನು ಕಡಿಮೆಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕರಿಬೇವನ್ನು ಪ್ರತಿನಿತ್ಯ ಅಡುಗೆಯಲ್ಲಿ ಬಳಸುವುದರಿಂದ, ಹಾಗೂ ಅದರಿಂದ ಮಾಡಿದ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೂ ಉತ್ತಮ ಮತ್ತು ಕೂದಲು ಉದುರುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಕರಿಬೇವಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

  • ಕರಿಬೇವು
  • ಮೊಸರು
  • ನೀರು
  • ಕಲ್ಲು ಉಪ್ಪು

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಕರಿಬೇವು, ಮೊಸರು ಹಾಕಿಕೊಳ್ಳಬೇಕು. ನಂತರ ಮಿಕ್ಸಿ ಜಾರಿಯಲ್ಲಿ ನೀರು, ಬೌಲ್ ನಲ್ಲಿ ಇದ್ದ ಕರಿಬೇವು, ಮೊಸರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಮಿಶ್ರಣವನ್ನು ಒಂದು ಲೋಟಕ್ಕೆ ಹಾಕಿ ಅದಕ್ಕೆ ಕಲ್ಲು ಉಪ್ಪನ್ನು ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಂಡರೆ ಕರಿಬೇವಿನ ಜ್ಯೂಸ್‌ ರೆಡಿಯಾಗುತ್ತದೆ. ಹೀಗೆ ಪ್ರತಿನಿತ್ಯ ಕರಿಬೇವು ಜ್ಯೂಸ್‌ ಮಾಡಿ ಕುಡಿಯುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ.

ದಾಸವಾಳ ಹೂವು
ದಾಸವಾಳ ಹೂವಿನಿಂದ ಮಾಡಿದ ಔಷಧೀ ಮತ್ತು ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಹಲವಾರು ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ಮಾಹಿತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ದಾಸವಾಳ ಹೂವಿನ ಟಿ ಕುಡಿಯುವುದರಿಂದ ಕೂಡ ಕೂದಲಿನ ಹಲವು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ:Beautiful Nails :ಸುಂದರವಾದ ಉಗುರು ಪಡೆಯಲು ಇಲ್ಲಿದೆ ಟಿಪ್ಸ್

ಇದನ್ನೂ ಓದಿ:Winter Care : ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಿ

ದಾಸವಾಳ ಹೂವಿನ ಟಿ

ಬೇಕಾಗುವ ಸಾಮಗ್ರಿಗಳು:
ಶುಂಠಿ
ದಾಸವಾಳ ಹೂವು
ನಿಂಬೆ ಹಣ್ಣಿನ ರಸ
ಜೇನುತುಪ್ಪ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು, ಶುಂಠಿ, ದಾಸವಾಳ ಹೂವು ಹಾಕಿ ಕುದಿಸಿ ಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಿಂಬೆ ಹಣ್ಣಿನ ರಸ, ಜೇನುತುಪ್ಪ ಹಾಕಿಕೊಂಡು ಅದಕ್ಕೆ ಕುದಿಸಿದ ನೀರು ತಣ್ಣಗಾದ ಮೇಲೆ ಬೆರೆಸಿಕೊಂಡು ಕುಡಿದರೆ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದಟ್ಟ ಕೂದಲನ್ನು ಪಡೆಯಬಹುದು.

ಆಳ್ವಿ ಬೀಜ
ಆಳ್ವಿ ಬೀಜಗಳನ್ನು ಪೋಷಕಾಂಶಗಳ ಆಗರ ಎಂದು ಕರೆಯುತ್ತಾರೆ. ಆಳ್ವಿ ಬೀಜದಲ್ಲಿ ,ಕಬ್ಬಿಣ,ಫೈಬರ್‌,ವಿಟಮಿನ್‌,ಸಿ,ಎ,ಇ ಮತ್ತು ಪ್ರೋಟಿನ್‌ ಅಂಶ ಹೇರಳವಾಗಿ ಇರುವುದರಿಂದ. ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಗುಣಪಡಿಸುತ್ತದೆ. ಜೊತೆಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕೂದಲು ಉದುರುವ ಸಮಸ್ಯೆಯನ್ನು ಗುಣಪಡಿಸುತ್ತದೆ. ಆಳ್ವಿ ಬೀಜದ ಸ್ವೀಟ್‌ ಹೇಗೆ ಮಾಡುವುದು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಗ್ರಿಗಳು:
ಆಳ್ವಿ ಬೀಜ
ತುಪ್ಪ
ಬೆಲ್ಲ
ಡ್ರೈ ಪ್ರೂಟ್ಸ್ ಅಥವಾ ತುರಿದ ಕಾಯಿ

ಮಾಡುವ ವಿಧಾನ:
ಮೊದಲಿಗೆ ಒಂದು ಗಂಟೆಯ ವರೆಗೆ ಆಳ್ವಿ ಬೀಜ ನೀರಿನಲ್ಲಿ ನೆನಸಿಡಿ. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಕಾದ ನಂತರ ಬೆಲ್ಲವನ್ನು ಹಾಕಬೇಕು ನಂತರ ಅದಕ್ಕೆ ನೆನಸಿಟ್ಟುಕೊಂಡ ಆಳ್ವಿ ಬೀಜ ಹಾಕಿ ಸೌಟನ್ನು ಆಡಿಸಿ ಅದಕ್ಕೆ ಕಾಯಿ ತುರಿಯನ್ನು ಹಾಕಿ ಬೇಯಿಸಿಕೊಂಡರೆ ಆಳ್ವಿ ಬೀಜದ ಸ್ವೀಟ್‌ ರೆಡಿಯಾಗುತ್ತದೆ. ಇದನ್ನು ತಿಂದರೆ ಆರೋಗ್ಯವನ್ನು ಉತ್ತಮವಾಗಿಸುವುದು ಅಷ್ಟೇ ಅಲ್ಲದೆ ಕೂದಲಿನ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ಸಹಾಯ ಮಾಡುತ್ತದೆ.

Are you suffering from hair fall problem? If so then try these three ingredients

Comments are closed.