Ayushman Bharat ಯೋಜನೆ ಆನ್‌ಲೈನ್‌ ನಲ್ಲಿ ಹೆಸರು ನೊಂದಾಯಿಸಿ ಮತ್ತು ಅದರ ಲಾಭ ಪಡೆಯಿರಿ!

ದೇಶದ ನಾಗರೀಕರಿಗೆ ಆರೋಗ್ಯ ಭದ್ರತೆ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪ್ರಿಯ ಯೋಜನೆ ಆಯುಷ್ಮಾನ್‌ ಭಾರತ್‌(Ayushman Bhart). ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ(PMJAY) ಅಡಿಯಲ್ಲಿ ಬಂದತಹ Ayushman Bharat ದೇಶದ ಯಾವುದೇ ಭಾಗದಲ್ಲಿ ಆರೋಗ್ಯ ಮತ್ತು ಚಿಕಿತ್ಸೆ ಪಡೆದುಕೊಳ್ಳಲು ಸಹಾಯ ಮಾಡುವ ಯೋಜನೆಯಾಗಿದೆ. ಇದು ಆರೋಗ್ಯ ಸೌಲಭ್ಯಗಳನ್ನುಉಚಿತವಾಗಿ ಪಡೆಯಲು ಇದರಲ್ಲಿ ಹೆಸರು ನೊಂದಾಯಿಸುವುದು ಅತ್ಯಂತ ಅವಶ್ಯಕವಾಗಿದೆ. ಇದನ್ನು ಆನ್‌ಲೈನ್‌ ಮುಖಾಂತರವೂ ಮಾಡಬಹುದಾಗಿದೆ. ಆದರೆ ಕೆಲವು ನಿಯಮಗಳನ್ನು ಅನುಸರಿಸತಕ್ಕದ್ದು.

ಯಾರೆಲ್ಲಾ ಇದರ ಲಾಭ ಪಡೆದುಕೊಳ್ಳಬಹುದು:

PMJAY ಅನ್ನು ನಾಗರೀಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವುದಾದ್ದರಿಂದ ಎಲ್ಲಾ ಕುಟುಂಬದವರಿಗೂ (ಈ ಯೋಜನೆಯಲ್ಲಿ ಯಾವುದೇ ಕುಟುಂಬದ ಗಾತ್ರ, ವಯಸ್ಸಿನ ಮೇಲೆ ಯಾವುದೇ ಮಿತಿ ಇರುವುದಿಲ್ಲ)ವಾರ್ಷಿಕ 5ಲಕ್ಷದವರೆಗೆ ಹೆಲ್ತ ಇನ್ಶುರೆನ್ಸ್‌ ಕೊಡುವುದಾಗಿದೆ. ಇದು 50 ಕೋಟಿ ಸಾಮಾನ್ಯ ನಾಗರೀಕರು ಮತ್ತು 10 ಕೋಟಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಯೋಜನೆಯ ಫಲವನ್ನು ಒದಗಿಸುವ ಗುರಿ ಹೊಂದಿದೆ..

ಇದನ್ನೂ ಓದಿ: ಘರ್ಜಿಸುತ್ತ ರೋಡಿಗಿಳಿದ Royal Enfield Scram 411; ಮಧ್ಯಮ ವರ್ಗದ ಆಫ್‌ ರೋಡಿಂಗ್ ಬೈಕ್ ಪ್ರಿಯರಿಗೆ ಹೇಳಿ ಮಾಡಿಸಿದ ಬೈಕ್ ಇದಂತೆ!

ಆಯುಷ್ಮಾನ್‌ ಭಾರತ್‌ ಯೋಜನೆಗೆ ಆನ್‌ಲೈನ್‌ ಅಲ್ಲಿ ನೊಂದಾಯಿಸುವುದು ಹೇಗೆ?
RSBY ಯೋಜನೆಯ ಅಡಿಯಲ್ಲಿ ಬರುವ ಎಲ್ಲರೂ PMJAY ಯೋಜನೆಯಲ್ಲಿ ಗುರುತಿಸಲ್ಪಟ್ಟವರು ಎಲ್ಲರೂ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದಾಗಿದೆ. PMJAY ನಲ್ಲಿ ಆನ್‌ಲೈನ್‌ ನೊಂದಾವಣಿ ಮಾಡಲು ಹೀಗೆ ಮಾಡಿ.

  1. http://www.pmjay.gov.in/ ಎಂದು ಸರ್ಚ್‌ ಬಾರ್‌ನಲ್ಲಿ ಬರೆಯಿರಿ.
  2. ನಿಮ್ಮ ಮೊಬೈಲ್‌ ನಂಬರ್‌ ಮತ್ತು ಸ್ಕ್ರೀನ್‌ ಮೇಲೆ ಬಂದ ಕ್ಯಾಪ್ಚಾ ಕೋಡ್‌ ನಮೂದಿಸಿ
  3. ನೀವು ನೊಂದಾಯಿಸಿದ ಮೊಬೈಲ್‌ ನಂಬರ್‌ಗೆ OTP ಬರುವುದು, ಅದನ್ನು ನಮೂದಿಸಿ. ಆಗ PMJAYಲಾಗಿನ್‌ ಪುಟ ತೆರೆದುಕೊಳ್ಳುವುದು.
  4. ನೀವು ಯಾವ ಪ್ರದೇಶದಲ್ಲಿ ಈ ಯೋಜನೆಗಾಗಿ ಅರ್ಜಿ ಸಲ್ಲಿಸುತ್ತೀರು ಅನ್ನುವುದಕ್ಕೆ ರಾಜ್ಯ ಆಯ್ದುಕೊಳ್ಳಿ.
  5. ಅರ್ಹತೆಯನ್ನು ಪಡೆಯಲು ಮೊಬೈಲ್‌ ನಂಬರ್‌, ಹೆಸರು, ರೇಷನ್‌ ಕಾರ್ಡ್‌ ನಂಬರ್‌ ಅಥವಾ RSBY URN ನಂಬರ್‌ ಇವುಗಳಲ್ಲಿ ಯಾವುದಾದರೂ ಆಯ್ಕೆಮಾಡಿಕೊಂಡು ನಮೂದಿಸಿ.
  6. ನೀವು ಅರ್ಹರಾದರೆ ನಿಮ್ಮ ಹೆಸರು ಪುಟದ ಬಲ ಭಾಗದಲ್ಲಿ ತೋರಿಸುವುದು.
  7. ಫ್ಯಾಮಿಲಿ ಮೆಂಬರ್ಸ್‌ ಟ್ಯಾಬ್‌ ಮೇಲೆ ಕ್ಲಿಕ್ಕಿಸುವುದರಿಂದ ಫಲಾನುಭವಿಯ ವಿವರಗಳು ಪಡೆಯಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುದೆಂದರೆ ವಯಸ್ಸು ಮತ್ತು ಗುರುತಿನ ಪುರಾವೆಗಾಗಿ ಆಧಾರ್‌ ಕಾರ್ಡ್‌ ಅಥವಾ ಪ್ಯಾನ್‌ ಕಾರ್ಡ್‌, ಸಂಪರ್ಕ ವಿವರಗಳು, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಣ ಪತ್ರ, ಕುಟುಂಬದ ವಿವರಗಳ ದಾಖಲೆ.

ಇದನ್ನೂ ಓದಿ: e-SHRAM Card: ಕಾರ್ಮಿಕರಿಗೆ ಉಚಿತ ವಿಮೆ, ಉಚಿತ ಚಿಕಿತ್ಸೆ ನೀಡುವ ಇ-ಶ್ರಮ್ ಕಾರ್ಡ್‌ ಮಾಡಿಸುವುದು ಹೇಗೆ?

(Ayushman Bharat scheme online registration details)

Comments are closed.