LIVE Updates | IND vs ENG : ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಹೀಗಿದೆ ಭಾರತದ ಪ್ಲೇಯಿಂಗ್ XI

ಅಡಿಲೇಡ್: (LIVE Updates | IND vs ENG ) ಐಸಿಸಿ ಟಿ20 ವಿಶ್ವಕಪ್ (T20 World Cup 2022) ಹಣಾಹಣಿಯಲ್ಲಿ ಭಾರತಕ್ಕೆ ನಾಳೆ ಮಹತ್ವದ ದಿನ. 15 ವರ್ಷಗಳ ನಂತರ ಮತ್ತೆ ಚುಟುಕು ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿರುವ ಭಾರತ, 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಹಣಾಹಣಿ ಅಡಿಲೇಡ್ ಓವಲ್ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.

ಜಿಂಬಾಬ್ವೆ ವಿರುದ್ಧದ ಸೂಪರ್-12 ಹಂತದ ಕೊನೆಯ ಲೀಗ್ ಪಂದ್ಯದಲ್ಲಿ ಆಡಿದ ತಂಡವೇ ಇಂಗ್ಲೆಂಡ್ ವಿರುದ್ಧದ ಸೆಮಿಪೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಜಿಂಬಾಬ್ವೆ ವಿರುದ್ಧ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬದಲು ಯುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆದರೆ ಕೇವಲ 3 ರನ್ ಗಳಿಸಿ ಔಟಾಗಿದ್ದರು.

ಸೆಮಿಫೈನಲ್’ಗೆ ಸಜ್ಜಾಗುತ್ತಿರುವ ಭಾರತಕ್ಕಿರುವ ಚಿಂತೆ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್. ಆಡಿದ ಐದು ಪಂದ್ಯಗಳಲ್ಲಿ ರೋಹಿತ್ ಗಳಿಸಿರುವುದು ಕೇವಲ 89 ರನ್. ಇದರಲ್ಲೊಂದು ನೆದರ್ಲೆಂಡ್ಸ್ ವಿರುದ್ಧ ಬಾರಿಸಿದ ಅರ್ಧಶತಕ. ಉಳಿದಂತೆ ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ವಿರುದ್ಧ ದೊಡ್ಡ ಮೊತ್ತ ಗಳಿಸುವಲ್ಲಿ ರೋಹಿತ್ ಎಡವಿದ್ದು, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

3 ಅಜೇಯ ಅರ್ಧಶತಕಗಳೊಂದಿಗೆ ಟೂರ್ನಿಯಲ್ಲಿ ಅತೀ ಹೆಚ್ಚು 246 ರನ್ ಗಳಿಸಿರುವ ರನ್ ಮಷಿನ್ ವಿರಾಟ್ ಕೊಹ್ಲಿ, 5 ಪಂದ್ಯಗಳಿಂದ 225 ರನ್ ಕಲೆ ಹಾಕಿರುವ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಮತ್ತು ಕಳೆದ ಎರಡು ಪಂದ್ಯಗಳಲ್ಲಿ ಸತತ ಅರ್ಧಶತಕಗಳನ್ನು ಬಾರಿಸಿರುವ ಉಪನಾಯಕ ಕೆ.ಎಲ್ ರಾಹುಲ್ ಭಾರತದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ತಂಡ ಸ್ಫೋಟಕ ದಾಂಡಿಗರನ್ನೇ ಹೊಂದಿದೆ. ಅಲೆಕ್ಸ್ ಹೇಲ್ಸ್, ನಾಯಕ ಜೋಸ್ ಬಟ್ಲರ್, ಮೊಯೀನ್ ಅಲಿ, ಲಿಯಾಮ್ ಲಿವಿಂಗ್’ಸ್ಟನ್’ರಂತಹ ಸ್ಫೋಟಕ ದಾಂಡಿಗರು ತಂಡದಲ್ಲಿದ್ದಾರೆ. ಹೀಗಾಗಿ ಭಾರತಕ್ಕೆ ಪ್ರಬಲ ಸವಾಲು ಎದುರಾಗುವ ಸಾಧ್ಯತೆಯಿದೆ.

LIVE Updates IND vs ENG :ಮಳೆಯಿಂದ ಪಂದ್ಯ ರದ್ದಾದರೆ ಭಾರತ ಫೈನಲ್’ಗೆ:

ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿ ಪಡಿಸಲಾಗಿದೆ. ಹೀಗಾಗಿ ಗುರುವಾರ ಅಡಿಲೇಡ್’ನಲ್ಲಿ ಮಳೆ ಸುರಿದ ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ, ಮೀಸಲು ದಿನವಾದ ಶುಕ್ರವಾರ ಪಂದ್ಯ ನಡೆಯಲಿದೆ. ಶುಕ್ರವಾರವೂ ಮಳೆ ಸುರಿದು ಪಂದ್ಯ ರದ್ದಾದರೆ ಲೀಗ್ ಹಂತದ ಪ್ರದರ್ಶನದ ಆಧಾರದ ಮೇಲೆ ಭಾರತ ಫೈನಲ್ ತಲುಪಲಿದೆ. ಸೂಪರ್-12 ಹಂತದಲ್ಲಿ ಭಾರತ ಆಡಿದ 5 ಲೀಗ್ ಪಂದ್ಯಗಳಿಂದ 8 ಅಂಕ ಗಳಿಸಿ ಗ್ರೂಪ್-2ರಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ ಇಂಗ್ಲೆಂಡ್ ಗ್ರೂಪ್-1ರಲ್ಲಿ 4 ಪಂದ್ಯಗಳಿಂದ 7 ಅಂಕ ಗಳಿಸಿ ಸೆಮಿಫೈನಲ್’ನಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ : Virat Kohli batting records: ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಹೇಗಿದೆ ಗೊತ್ತಾ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಾಖಲೆ ?

ಇದನ್ನೂ ಓದಿ : Raghuram Bhat KSCA President : ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ರಘುರಾಮ್ ಭಟ್, ಚುನಾವಣೆಯೇ ಇಲ್ಲದೆ ಗೆದ್ದ ಬ್ರಿಜೇಶ್ ಬಣ

LIVE Updates | IND vs ENG 2nd T20 World Cup 2022 Semis India Playing XI

Comments are closed.