Banana Beauty Tips : ಸೌಂದರ್ಯವನ್ನು ಇಮ್ಮಡಿಗೊಳಿಸುವ ಬಾಳೆಹಣ್ಣು

0
  • ಅಂಚನ್ ಗೀತಾ

Banana Beauty Tips : ಬಾಳೆಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ??? ಕೆಲವರಿಗಂತೂ ಊಟ ಮುಗಿದಾಕ್ಷಣ ಬಾಳೆಹಣ್ಣು ಇರಲೇ ಬೇಕು. ಯಾಕಂದ್ರೆ ಈ ಬಾಳೆಹಣ್ಣಿನಲ್ಲಿರೋವಷ್ಟು ಪೌಷ್ಠಿಕಾಂಶ ಬೇರ್ಯಾವ ಹಣ್ಣಿನಲ್ಲು ಇರಲ್ಲ.

ಮಾರುಕಟ್ಟೆಯಲ್ಲೂ ಕೂಡ ಕೈಗೆಟಕುವ ದರದಲ್ಲಿ ಬಾಳೆಹಣ್ಣು ಲಭ್ಯವಾಗಿರುತ್ತದೆ. ಕೇವಲ ಆರೋಗ್ಯಕಷ್ಟೇ ಅಲ್ಲದೆ ತ್ವಚೆಯ ಸೌಂದರ್ಯಕ್ಕೂ ಕೂಡ ಬಾಳೆಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಹಾಗದ್ರೆ ಬಾಳೆಹಣ್ಣಿನ ಪ್ರಯೋಜನಗಳೆನು ನೋಡೋಣ ಬನ್ನಿ.

ಜೀರ್ಣಶಕ್ತಿಯನ್ನು ವೃದ್ದಿಸುತ್ತದೆ ಬಾಳೆಹಣ್ಣು. ಚರ್ಮದ ಹೊಳಪನ್ನು ಇಮ್ಮಡಿಗೊಳಿಸುತ್ತದೆ. ಕಳೆಗುಂದಿದ ಮುಖಕ್ಕೆ ಮೆರುಗನ್ನು ನೀಡುತ್ತದೆ. ಕಣ್ಣಿನ ಸಮಸ್ಯೆಗೂ ಬಾಳೆಹಣ್ಣಿನಲ್ಲಿದೆ ಪರಿಹಾರ.

ಹೌದು, ದೇಹಕ್ಕೆ ಬೇಕಾಗಿರೋ ಪೌಷ್ಠಿಕಾಂಶ ಬಾಳೆಹಣ್ಣು ತಿನ್ನೋದ್ರಿಂದ ಲಭ್ಯವಾದ್ರೆ. ಸೌಂದರ್ಯಕ್ಕೂ ಕೂಡ ಬಹಳಷ್ಟು ಉಪಯೋಗ ಕಾರಿ ಇದು. ಹಾಗಾದ್ರೆ ಇದರ ಬಳಕೆಯನ್ನು ಯಾವ ರೀತಿ ಮಾಡಬಹುದು ಬನ್ನಿ ನೋಡೋಣ.

ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಚರ್ಮದ ನೈಸರ್ಗಿಕ ಮತ್ತು ತಾರುಣ್ಯದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಚರ್ಮವು ಸುಂದರವಾಗಿ ಕಾಂತಿಯಿಂದ ಕಾಣುವಂತೆ ಮಾಡಲು ಮಾಗಿ ಬಾಳೆಹಣ್ಣಿನ ಸೇವನೆ ಸೂಕ್ತ. ಒರಟು ಚರ್ಮವನ್ನು ನಯವಾಗಿಸುತ್ತದೆ. ಚರ್ಮಕ್ಕೆ ಅಂಟಿರುವ ಸುಕ್ಕುಗಳನ್ನು ನಾಶ ಮಾಡುತ್ತದೆ. ಸೊಂಟದ ಬೊಜ್ಜು ಕಡಿಮೆ ಮಾಡಲು ಹೆಚ್ಚು ಸಹಕಾರಿ.

Banana Beauty Tips : ಹೀಗೆ ಮಾಡಿ

ಒಂದು ಬಾಳೆ ಹಣ್ಣುನ್ನು ಹಿಸುಕಿ ಅದಕ್ಕೆ ಎರಡು ಚಮಚ ನಿಂಬೆ ರಸ ಸೇರಿಸಿ ಚರ್ಮಕ್ಕೆ ಲೇಪಿಸಿ 15ರಿಂದ 20 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆದು ಒಣಗಿಸಿದರೆ ಚರ್ಮದ ಮೇಲಿರುವ ಕಪ್ಪು ಕಲೆಗಳು, ಗುಳ್ಳೆಗಳು ಕಡಿಮೆಯಾಗುತ್ತದೆ.

ಮಾಗಿದ ಬಾಳೆ ಹಣ್ಣಿನಿಂದ ಪೇಸ್ಟ್ ತಯಾರಿಸಿ ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಚರ್ಮಕ್ಕೆ ಲೇಪಿಸಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ಇದು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಚರ್ಮವನ್ನು ಹಗುರಗೊಳಿಸುತ್ತದೆ. ನಂತರ ತಣ್ಣಿರಿನಿಂದ ಮುಖ ತೊಳೆಯಿರಿ.

Banana Beauty Tips : ಕಣ್ಣಿನ ಸಮಸ್ಯೆಗೆ

ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಕಣ್ಣುಗಳ ಕೆಲಗಿರುವ ರಕ್ತನಾಳಗಳನ್ನು ಶಾಂತಗೊಳಿಸುವುದರ ಜತೆಗೆ ಕಣ್ಣಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾಗಿದ ಹಣ್ಣನ್ನು ಹಿಸುಕಿ ಕಣ್ಣಿನ ಸುತ್ತಲು ಲೇಪಿಸಿ 15 ರಿಂದ 20 ನಿಮಿಷಗಳ ಕಾಲ ಬಿಟ್ಟು ತೊಳೆದರೆ ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆ.

ಇದನ್ನೂ ಓದಿ : Benefits Of Saffron : ತ್ವಚೆಯ ಆರೋಗ್ಯ ಕಾಪಾಡಲು ಬಳಸಿ ‘ಕೇಸರಿ’

ಇದನ್ನೂ ಓದಿ : Onion Juice on Hair : ಕೂದಲ ರಕ್ಷಣೆಗೆ ಈರುಳ್ಳಿ ಬಳಸಿ

banana beauty tips health tips

Leave A Reply

Your email address will not be published.