Gyan Mudra : ಜ್ಞಾನ ಮುದ್ರೆ : ನಿದ್ರಾಹೀನತೆ ಮತ್ತು ಮಧುಮೇಹ ಸಮಸ್ಯೆಗೆ ಉತ್ತಮ ಪರಿಹಾರ !!

ನಿಯಮಿತ ಯೋಗಾಭ್ಯಾಸವು (Yoga) ದೈಹಿಕ ಚಟುವಟಿಕೆಯನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಸ್ಥೂಲಕಾಯ ಮತ್ತು ಅತಿಯಾದ ಒತ್ತಡದ ಜೀವನಶೈಲಿ (Stressful Life) ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಆದರೆ ಎಲ್ಲಿ ಮತ್ತು ಹೇಗೆ ಪ್ರಾರಂಭಿಸಿಬೇಕು ಎಂದು ನಿಮಗೆ ಖಚಿತವಿಲ್ಲದ್ದಿದ್ದರೆ, ಪರಿಣಾಮಕಾರಿ, ಒತ್ತಡ–ನಿವಾರಕ ಜ್ಞಾನ ಮುದ್ರೆಯಿಂದ (Gyan Mudra) ಬಹಳಷ್ಟು ಪ್ರಯೋಜನಗಳಿವೆ. ಯೋಗಾಭ್ಯಾಸ, ಮುದ್ರೆ ಇವುಗಳು ದೇಹದಲ್ಲಿ ಶಕ್ತಿ ಸಂಚಾರವಾಗಿ ರಿಲ್ಯಾಕ್ಸ್‌ ಆಗಲು ಬಹಳ ಪ್ರಯೋಜನಕಾರಿಯಾಗಿದೆ. ಮುದ್ರೆಗಳು ದೇಹದ ಅಸಮತೊಲನವನ್ನು ಸರಿಪಡಿಸಲು ಮತ್ತು ವಿವಿಧ ಗ್ರಂಥಿಗಳನ್ನು ಬಲಪಡಿಸಲು ಹಾಗೂ ವ್ಯವಸ್ಥೆಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಜ್ಞಾನ ಮುದ್ರೆಯ ಪ್ರಯೋಜನಗಳು

  • ಚೈತನ್ಯ ಹೆಚ್ಚಿಸಿ, ನಿಮ್ಮ ಮನಸ್ಥತಿಯನ್ನು ಉತ್ತೇಜಿಸುತ್ತದೆ.
  • ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.
  • ದೇಹವನ್ನು ರಿಲ್ಯಾಕ್ಸ್‌ ಮಾಡಲು ಸಹಾಯ ಮಾಡುತ್ತದೆ ಮತ್ತು ಗಮನವನ್ನು ಕೇಂದ್ರೀಕರಿಸುತ್ತದೆ.
  • ನಿದ್ರಾಹೀನತೆ, ಮಧುಮೇಹ ಮತ್ತು ತಲೆನೋವಿಗೆ ಉತ್ತಮ ಚಿಕಿತ್ಸೆಯಾಗಿದೆ.

ಜ್ಞಾನ ಮುದ್ರೆ ಮಾಡುವುದು ಹೇಗೆ ?

  • ಹೆಬ್ಬರಳು ಮತ್ತು ತೋರುಬೆರಳುಗಳ ತುದಿಯನ್ನು ಒಂದಕ್ಕೊಂದು ಸ್ಪರ್ಶಿಸಿ.
  • ಸಮಸ್ಥತಿಯಲ್ಲಿ ಕುಳಿತು 30 ನಿಮಿಷಗಳ ಕಾಲ ಅಭ್ಯಾಸ ಮಾಡಿ.
  • ನೀವು 15 ನಿಮಿಷಗಳ 2 ಬ್ಲಾಕ್‌ ಗಳಲ್ಲಿಯೂ ಅಭ್ಯಾಸ ಮಾಡಬಹುದು ಆದರೆ ನಿರಂತರವಾಗಿ 30 ನಿಮಿಷ ಮಾಡಿದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಇದನ್ನೂ ಓದಿ : 20 Minutes Yoga : ಈ ಯೋಗಾಸನಗಳನ್ನು ಮಾಡಲು ಸಾಕು ಬರೀ ಇಪ್ಪತ್ತೇ ನಿಮಿಷ !!

ಇದನ್ನೂ ಓದಿ : Reverse Shampoo Method : ರಿವರ್‍ಸ ಶಾಂಪೂ ಎಂದರೆ ನಿಮಗೆ ಗೊತ್ತಾ? ನೀವು ತಿಳಿದುಕೊಳ್ಳಲೇ ಬೇಕಾದ ಹೇರ್‌ಕೇರ್‌ ಟ್ರೆಂಡ್‌ ಇದು!‌‌

(Practice Gyan Mudra daily and stay away from insomnia and diabetes)

Comments are closed.