ವೈನ್, ಬಿಯರ್ ಬೆಲೆಯಲ್ಲಿ ಬಾರೀ ಇಳಿಕೆ : ರಾತ್ರಿ 1 ಗಂಟೆಯ ವರೆಗೂ ತೆರೆದಿರುತ್ತೆ ಬಾರ್ !

0

(ಶಾಸನ ವಿಧಿಸಿದ ಎಚ್ಚರಿಕೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ )

ಮದ್ಯಪ್ರಿಯರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ. ಬಿಯರ್ ಮತ್ತು ವೈನ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲು ಸರಕಾರ ಮುಂದಾಗಿದೆ. ಮಾತ್ರವಲ್ಲ ಮದ್ಯಪ್ರಿಯರಿಗೆ ಅನುಕೂಲ ಕಲ್ಪಿಸೋ ಸಲುವಾಗಿ ಮದ್ಯರಾತ್ರಿ 1 ಗಂಟೆಯವರೆಗೆ ಬಾರ್ ಗಳು ಓಪನ್ ಆಗಿರುತ್ತೆ. ಹೀಗಂತ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅಲ್ಲದೇ ನೂತನ ನಿಯಮ ಎಪ್ರಿಲ್ 1 ರಿಂದಲೇ ಜಾರಿಗೆ ಬರ್ತಿದೆ.

ಇನ್ನು ಬಾರ್ ಪರವಾನಿಗಿ ಶುಲ್ಕದಲ್ಲೂ ಇಳಿಕೆ ಮಾಡಲಾಗುತ್ತಿದ್ದು, ವಿದೇಶಿ ಬ್ರ್ಯಾಂಡ್ ಮದ್ಯದ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗೋದು ಖಚಿತ.

ಮಾತ್ರವಲ್ಲ ಸ್ಟಾರ್ ಹೋಟೆಲ್ ಗಳ ಪರವಾನಗಿ ಶುಲ್ಕದಲ್ಲಿಯೂ ಇಳಿಕೆಯಾಗಲಿದ್ದು, ಮದ್ಯಪ್ರಿಯರು ಸಖತ್ ಖುಷಿಯಾಗಿದ್ದಾರೆ.

ಅಂದಹಾಗೆ ಈ ನೂತನ ನಿಯಮ ಜಾರಿಗೆ ಬರ್ತಿರೋದು ನಮ್ಮ ರಾಜ್ಯದಲ್ಲಿ ಅಲ್ಲಾ, ಬದಲಾಗಿ ಹರಿಯಾಣ ರಾಜ್ಯದಲ್ಲಿ.

ಹರಿಯಾಣ ಸರಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳೋ ಸಲುವಾಗಿ ಅಬಕಾರಿ ನಿಮಯಗಳಲ್ಲಿ ಬಾರೀ ಬದಲಾವಣೆಗಳನ್ನು ತರಲು ಮುಂದಾಗಿದೆ. ಗುರುಗಾಂವ್, ಫರಿದಾಬಾದ್ ಮತ್ತು ಪಂಚಕುಲ ನಗರಗಳಲ್ಲಿ ಈ ನೂತನ ನಿಯಮ ಜಾರಿಗೆ ಬರ್ತಿದೆ.

ಶೇ.3.5 ರಿಂದ ಶೇ.5.5 ಆಲ್ಕೋಹಾಲ್ ಕಂಟೆಂಟ್ ಹೊಂದಿರುವ ಬಿಯರ್ ಗಳ ಬಲ್ಕ್ ಲೀಟರ್ ಮೇಲಿದ್ದ ಶುಲ್ಕವನ್ನು 50ರೂಪಾಯಿ ಯಿಂದ 40 ರೂಪಾಯಿಗೆ ಇಳಿಸಲಾಗುತ್ತಿದೆ.

ಅಲ್ಲದೇ ವಿವಿಧ ಕಂಪೆನಿಗಳ ಬಿಯರ್ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿಯೂ ಇಳಿಕೆಯಾಗುತ್ತಿದೆ. ಸೂಪರ್ ಮೈಲ್ಡ್ ಹೆಸರಿನ ಹೊಸ ಬಿಯರ್ ತಯಾರಿಸಲಾಗಿದ್ದು, ಹೋಲ್ ಸೇಲ್ ದರದಲ್ಲಿ ಲೀಟರ್ ಒಂದಕ್ಕೆ 35 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ.

ಆದರೆ ದೇಶೀಯ ಮದ್ಯ ಬೆಲೆಯಲ್ಲಿ ಏರಿಕೆಯಾಗಲಿದೆ. ನೂತನ ನಿಯಮಗಳಿಂದಾಗಿ ತಾತ್ಕಾಲಿಕ ಏಕದಿನ ಪರವಾನಗಿ ಪಡೆಯುವುದು ಇನ್ಮುಂದೆ ಸುಲಭವಾಗಲಿದ್ದು, ಆನ್ ಲೈನ್ ಮೂಲಕ ಪರವಾನಗಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.

ಇದುವರೆಗೂ ರಾತ್ರಿ 11 ಗಂಟೆಯವರೆಗೆ ಮಾತ್ರ ಓಪನ್ ಇರುತ್ತಿದ್ದ, ಬಾರ್ ಇನ್ನೂ ಹೆಚ್ಚುವರಿಯಾಗಿ 2 ಗಂಟೆಗಳ ಕಾಲ ವಿಸ್ತರಣೆಯಾಗುತ್ತಿದೆ. ಹೀಗಾಗಿ ನಮ್ಮುಂದೆ ಮದ್ಯಪ್ರಿಯರು ರಾತ್ರಿ 1 ಗಂಟೆಯವರೆಗೂ ಮದ್ಯ ಸೇವನೆ ಮಾಡಬಹುದಾಗಿದೆ.

4 ಸ್ಟಾರ್ ಹೋಟೆಲ್ ಗಳ ಪರವಾನಿಗೆ ಶುಲ್ಕದಲ್ಲಿಯೂ ಇಳಿಕೆ ಮಾಡಲು ಮುಂದಾಗಿರೋ ಸರಕಾರ ಪರವಾನಿಗೆ ಶುಲ್ಕವನ್ನು ಇಳಿಕೆ ಮಾಡಿದೆ. ಅಬಕಾರಿ ನಿಯಮಗಳಲ್ಲಿನ ಬದಲಾವಣೆಯಿಂದ ಹರಿಯಾಣದಲ್ಲಿ ಇನ್ನಷ್ಟು ಬಾರ್ ಗಳು ತೆಲೆ ಎತ್ತೋದ್ರ ಜೊತೆಗೆ ಸರಕಾರದ ಬೊಕ್ಕಸವು ತುಂಬೋದು ಗ್ಯಾರಂಟಿ.

Leave A Reply

Your email address will not be published.