Gooseberry Health Tips:ಕಹಿ “ನೆಲ್ಲಿಕಾಯಿಯ” ಆರೋಗ್ಯಕ್ಕೆ ಸಂಜೀವಿನಿ

(Gooseberry Health Tips)ನೆಲ್ಲಿಕಾಯಿಯ ರುಚಿ ಕಹಿಯಾಗಿದ್ದರೂ, ಇದರಿಂದ ಅರೋಗ್ಯಕ್ಕೆ ಹಲವು ಪ್ರಯೋಜನವಿದೆ. ಹಿಂದಿನಿಂದಲೂ ಕೂಡ ಆಯುರ್ವೇದದ ಔಷಧಿಯಲ್ಲಿ ಇದನ್ನು ಬಳಕೆ ಮಾಡುತ್ತಾ ಬರಲಾಗಿದೆ. ಇದರಲ್ಲಿ ಖನಿಜಗಳು, ಅಮೈನೋ ಆಮ್ಲಗಳು, ಮಿಟಮಿನ್ ಗಳು ಹೆರಳವಾಗಿದೆ. ಹಾಗಾಗಿ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ನೆಲ್ಲಿಕಾಯಿಯನ್ನು ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಅದನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಶೇಖರಿಸಿ ಇಟ್ಟುಕೊಂಡ ನೆಲ್ಲಿಕಾಯಿಯನ್ನು ಪ್ರತಿನಿತ್ಯ ನೀರಿನಲ್ಲಿ ಕಲಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದು ಕೊಳ್ಳಬಹುದು.

(Gooseberry Health Tips)ನೆಲ್ಲಿಕಾಯಿಯನ್ನು ಕೆಲವರು ಹಾಗೆ ತಿನ್ನಲು ಬಯಸುತ್ತಾರೆ ಇನ್ನು ಕೆಲವರು ನೆಲ್ಲಿಕಾಯಿಗೆ ಉಪ್ಪನ್ನು ಬೇರೆಸಿ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ತಿನ್ನುತ್ತಾರೆ. ಪ್ರತಿನಿತ್ಯ ಒಂದೊಂದು ನೆಲ್ಲಿಕಾಯಿಯನ್ನು ಸೇವಿಸುತ್ತಾ ಬಂದರೆ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ನೆಲ್ಲಿಕಾಯಿ ತಿನ್ನುವುದರಿಂದ ಏನೇನು ಪ್ರಯೋಜನ ಪಡೆದುಕೊಳ್ಳಬಹುದು ತಿಳಿದುಕೊಳ್ಳೊಣ.

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀವಕೋಶದ ಹಾನಿಯನ್ನು ತಡೆಯುವಂತಹ ಕೆಲಸವನ್ನು ಮಾಡುತ್ತದೆ.

ನೆಲ್ಲಿಕಾಯಿಯಲ್ಲಿ ಖನಿಜ ಕ್ರೋಮಿಯಂ ಹೆರಳವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದರಲ್ಲಿರುವ ಫೈಟೊನ್ಯೂಟ್ರಿಯಂಟ್ ಅಂಶಗಳು ಮೆದುಳಿಗೆ ಹಾನಿಯಾಗುವುದನ್ನು ತಪ್ಪಿಸು ವಂತಹ ಕೆಲಸವನ್ನು ಮಾಡುತ್ತದೆ. ಅಷ್ಟೇ ಅಲ್ಲದೆ ಪ್ರತಿನಿತ್ಯ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಸ್ಮರಣಾ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಕೂದಲನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ ಮಿಟಮಿನ್, ಅಮೈನೋ ಆಮ್ಲಗಳು ಹೇರಳವಾಗಿರುವುದರಿಂದ ಕೂದಲು ಉದುರುವಿಕೆ ಮತ್ತು ತಲೆ ಹೊಟ್ಟನ್ನು ಕಡಿಮೆ ಮಾಡುತ್ತದೆ. ಅಕಾಲಿಕವಾಗಿ ಕೂದಲು ಬಿಳಿ ಯಾಗುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ನೆಲ್ಲಿಕಾಯಿಯನ್ನು ಒಣಗಿಸಿ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಡ್ಯಾಂಡ್ರಪ್‌ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Tamil Actor Vishal : ತಮಿಳು ಖ್ಯಾತ ನಟ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ

ಇದನ್ನೂ ಓದಿ:Ingredients Soaked In Water :ನೀರಿನಲ್ಲಿ ನೆನೆಸಿ ಈ ಪದಾರ್ಥಗಳನ್ನು ತಿಂದ್ರೆ ಆರೋಗ್ಯ ವೃದ್ದಿಸುತ್ತೆ !

ಇದರಿಂದ ತಯಾರಿಸಿದಂತಹ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಸುಕ್ಕನ್ನು ಕಡಿಮೆ ಮಾಡುತ್ತದೆ.ಮತ್ತು ಮುಖದಲ್ಲಿರುವ ಕಲೆಗಳ ನಿವಾರಣೆಗೆ ಸಹಕಾರಿಯಾಗಿದೆ. ನೆಲ್ಲಿಕಾಯಿಯನ್ನು ತಿನ್ನುವುದರಿಂದ ಕಣ್ಣಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಹೃದಯಘಾತ ಮತ್ತು ಪಾರ್ಶ್ವ ವಾಯುವಿಗೆ ಕಾರಣವಾಗುವ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.

Bitter “gooseberry” health benefits information

Comments are closed.