T20 World Cup 2022 : ವಿಶ್ವಕಪ್‌ ಫೈನಲ್‌ ರದ್ದಾಗುತ್ತಾ? ಟ್ರೋಫಿ ಹಂಚಿಕೊಳ್ತಾರಾ ಇಂಗ್ಲೆಂಡ್ – ಪಾಕಿಸ್ತಾನ

ಸಿಡ್ನಿ : (T20 World Cup 2022) ಟಿ೨೦ ವಿಶ್ವಕಪ್ ಅಂತಿಮ ಹಂತ ತಲುಪಿದೆ. ನವೆಂಬರ್ 13 ರ ಭಾನುವಾರದಂದು ಟಿ20 ವಿಶ್ವಕಪ್ ಪಂದ್ಯದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದರೆ, ಭಾರತವವನ್ನು 10 ವಿಕೆಟ್‌ ಅಂತರದಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಫೈನಲ್ ಗೆ ಎಂಟ್ರಿ ಪಡೆದಿದ್ದವು.

ವಿಶ್ವಕಪ್ ಫೈನಲ್ ಪಂದ್ಯ(T20 World Cup 2022) ವೀಕ್ಷಣೆಗೆ ವಿಶ್ವವೇ ಕಾತರವಾಗಿದೆ. ಆದರೆ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಫೈನಲ್ ಪಂದ್ಯಕ್ಕೆ ಮಳೆಯಿಂದಾಗಿ ಬಹುತೇಕ ರದ್ದಾಗುವ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ನವೆಂಬರ್ 13 ಮತ್ತು 15ರಂದು 25 ಮಿಮೀ ಮಳೆಯಾಗುವ ಸಾಧ್ಯತೆ ಎಂದು ಎಚ್ಚರಿಕೆಯನ್ನು ನೀಡಿದೆ. ಫೈನಲ್ ಪಂದ್ಯದ ದಿನದಂದು 95% ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೇ ಶೇ 100 ರಷ್ಟು ತುಂತುರು ಮಳೆಯಾಗುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ತಿಳಿಸಿದೆ.

MCG ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ T20 ವಿಶ್ವಕಪ್ 2022 ರ ಅಂತಿಮ ಹಣಾಹಣಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ. ಹೀಗಾಗಿಯೇ ವಿಶ್ವಕಪ್‌ ಅಂತಿಮ ಹಣಾಹಣಿಯ ಪಂದ್ಯ ರದ್ದಾಗುವ ಸಾಧ್ಯತೆಯಿದ್ದು. ಟ್ರೋಫಿ ಹಂಚಿಕೆಯ ಸಾಧ್ಯತೆಗಳು ಹೆಚ್ಚಿವೆ. ಒಂದೊಮ್ಮೆ ಫೈನಲ್ ಪಂದ್ಯಕ್ಕೆ ಒಂದು ದಿನ ಮೀಸಲು ಇರಿಸಲಾಗಿದೆ. ಒಂದೊಮ್ಮೆ ಪ್ರತೀ ತಂಡಕ್ಕೆ ಕನಿಷ್ಟ 10 ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಗದೇ ಇದ್ದಲ್ಲಿ, ಮೀಸಲು ದಿನದಲ್ಲಿ ಪಂದ್ಯ ನಡೆಯಲಿದೆ. ಒಂದೊಮ್ಮೆ ಎರಡೂ ದಿನವೂ ಮಳೆಯಾಗಿ ಪಂದ್ಯ ಆರಂಭವಾಗದೇ ಇದ್ರೆ ಟ್ರೋಫಿ ಹಂಚಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2023 :ಕೀರಾನ್ ಪೊಲಾರ್ಡ್ ಗೆ ಕೋಕ್ ಕೊಟ್ಟ ಮುಂಬೈ ಇಂಡಿಯನ್ಸ್‌

ಇದನ್ನೂ ಓದಿ : Pro Kabaddi League : ಪಲ್ಟನ್ ವಿರುದ್ಧ ಸೇಡು ತೀರಿಸಿಕೊಂಡ ಯು ಮುಂಬಾ, ಜೈಪುರ ವಿರುದ್ಧ ಗೆದ್ದ ಪೈರೇಟ್ಸ್

ಇದನ್ನೂ ಓದಿ : Exclusive : ಬೆಂಗಳೂರಿನಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ, KIOCನಲ್ಲಿ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಪ್ರಾಕ್ಟೀಸ್

ಇದನ್ನೂ ಓದಿ : Sania Mirza-Shoaib Malik : ಸಾನಿಯಾ-ಶೋಯೆಬ್ ಮಲಿಕ್ ಡಿವೋರ್ಸ್ ಈಗ ಅಧಿಕೃತ, ಸ್ಫೋಟಕ ಗುಟ್ಟು ಬಿಚ್ಚಿಟ್ಟ ಆಪ್ತ ಸ್ನೇಹಿತ

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ, ಚೇಸಿಂಗ್‌ ತಂಡವು ಕಳೆದ 20 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಗೆದ್ದಿದ್ದಾರೆ. ಹೀಗಾಗಿ ಫೈನಲ್ ಪಂದ್ಯಕ್ಕೆ ಟಾಸ್ ಪ್ರಮುಖ ಪಾತ್ರವಹಿಸಲಿದೆ.

(T20 World Cup 2022) T20 World Cup has reached its final stage. Pakistan will face England in the T20 World Cup final on Sunday, November 13. In the semi-final, Pakistan defeated New Zealand by seven wickets, while England defeated India by 10 wickets to enter the final.

Comments are closed.